ಹೈದರಾಬಾದ್: ಮುತ್ತಿನ ನಗರಿ ಸಂಪ್ರದಾಯ, ಸಂಸ್ಕೃತಿ ಬಿಂಬಿಸುವ ‘ಸದರ್ ಸಂಭ್ರಮ’ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಹಬ್ಬಕ್ಕಾಗಿ ನಗರದ ಚಪ್ಪಲ್ ಬಜಾರ್‌ನ ಲಡ್ಡು ಯಾದವ್ ಹರಿಯಾಣದಿಂದ 'ಬಾಹುಬಲಿ ದುನ್ನಾ' ಹೆಸರಿನ ಬೃಹತ್ ಗಾತ್ರದ ಕೋಣವನ್ನ ಇಲ್ಲಿಗೆ ತಂದಿದ್ದಾರೆ.
ಈ ಕೋಣಕ್ಕೆ ಲಡ್ಡು ಯಾದವ್ 1.50 ಕೋಟಿ ರೂಪಾಯಿ ಮೌಲ್ಯದ ಮೂರು ಕೆ.ಜಿ ತೂಕದ ಚಿನ್ನದ ಸರವನ್ನು ಕಾಣಿಕೆಯಾಗಿ ನೀಡಿ ಗಮನ ಸೆಳೆದಿದ್ದಾರೆ. ಸದರ್ ಹಬ್ಬದಂದು ಬಾಹುಬಲಿ ದುನ್ನಾ ಜನರ ವಿಶೇಷ ಆಕರ್ಷಣ ಕೇಂದ್ರವಾಗಿದೆ.
ನಿಜಾಮರ ಕಾಲದಿಂದಲೂ ಈ ಆಚರಣೆ ಜಾರಿಯಲ್ಲಿದ್ದು, ಈ ದಿನದಿಂದು ರೈತರು ತಮ್ಮ ಕೋಣ, ಎತ್ತುಗಳನ್ನು ಪೂಜೆ ಮಾಡುತ್ತಾರೆ. ಜೊತೆಗೆ ಕೋಣಗಳಿಂದ ಹಲವು ರೀತಿಯ ಸಾಹಸ ಪ್ರದರ್ಶನಗಳನ್ನು ಸಹ ಏರ್ಪಡಿಸುತ್ತಾರೆ.
ಈ ಹಬ್ಬಕ್ಕಾಗಿಯೇ ಕೆಲವರು ಕೋಣಗಳನ್ನು ಸಾಕುತ್ತಾರೆ. ಇನ್ನೂ ಕೆಲವರು ಹರಿಯಾಣದಿಂದ ಕೋಣಗಳನ್ನು ತಂದು ಇಲ್ಲಿ ಹಬ್ಬ ಮಾಡುತ್ತಾರೆ. ಹೀಗಾಗಿ ಚಪ್ಪಲ್ ಬಜಾರ್‌ನ ಲಡ್ಡು ಯಾದವ್ ಹರಿಯಾಣದಿಂದ ಬಾಹುಬಲಿಯನ್ನ ಕರೆತಂದಿದ್ದಾರೆ. ಆದರೆ ಕೋಣದ ಮಾಲೀಕ ಹಣ ಪಡೆಯದೆ ಕೋಣವನ್ನ ಕಳುಹಿಸಿಕೊಟ್ಟಿದ್ದ. ಇದರಿಂದ ಸಂತಸಗೊಂಡ ಯಾದವ್ ಕೋಣಕ್ಕೆ 1.50 ಕೋಟಿ ರೂಪಾಯಿಯ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಪ್ರದರ್ಶನದಲ್ಲಿ ಈ ಕೋಣಗಳು ಮಾಲೀಕರಿಂದ ಕಲಿತಿರುವ ಸಾಹನ ಪ್ರದರ್ಶನ ಮಾಡುತ್ತವೆ. ಹಿಂದಿನ ಕಾಲಿನ ಮೇಲೆ ನಿಲ್ಲುವುದು. ಮಾಲೀಕರ ಮಾತಿನ ಅನುಸಾರ ನಡೆದುಕೊಳ್ಳುವ ಮೂಲಕ ನೆರೆದ ಜನರನ್ನು ರಂಜಿಸುತ್ತವೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಅಪರಿಚಿತರ ನಿವಾಸಕ್ಕೆ ನುಗ್ಗಿದ ಆರೋಪ: AIADMK ಮಾಜಿ ಸಂಸದನ ಮೇಲೆ ಹಲ್ಲೆ