ಪ್ರತಿ ದಿನ ಚಿನ್ನ ಬೆಳ್ಳಿ ದರ ಏರಿಳಿತ ಕಾಣುತ್ತದೆ. ದರ ಗಗನಕ್ಕೇರಿದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ. ನೀವು ಇಂದು ಆಭರಣ ಕೊಳ್ಳುವ ಮನಸ್ಸಿನಲ್ಲಿದ್ದೀರಾ? ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಈ ರೀತಿ ಇದೆ ನೋಡಿ ಇಂದಿನ ಚಿನ್ನಾಭರಣ ಬೆಲೆ.
ಬೆಂಗಳೂರು ಚಿನ್ನ, ಬೆಳ್ಳಿ ದರ: ರಾಜ್ಯ ರಾಜಧಾನಿಯಲ್ಲಿ ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. 24 ಕ್ಯಾರೆಟ್ನ ಒಂದು ಗ್ರಾಂ ಬಂಗಾರ 5,635 ರೂಪಾಯಿಗೆ ಮಾರಾಟವಾಗುತ್ತಿದೆ. ನಿನ್ನೆಯ ಚಿನಿವಾರ ಮಾರುಕಟ್ಟೆಗೆ ಹೋಲಿಸಿದರೆ ಇಂದು 45 ರೂಪಾಯಿ ಏರಿಕೆಯಾಗಿದೆ. ಜೊತೆಗೆ 22 ಕ್ಯಾರೆಟ್ನ 1 ಗ್ರಾಂ ಗೋಲ್ಡ್ 5,185 ರೂಪಾಯಿಗೆ ಲಭ್ಯವಾಗುತ್ತಿದೆ. ಬೆಳ್ಳಿಯು ಒಂದು ಗ್ರಾಂಗೆ 69.6 ರೂ.ಗೆ ಸಿಗುತ್ತಿದ್ದು, ಭಾನುವಾರಕ್ಕೆ ಹೋಲಿಸಿದರೆ 50 ಪೈಸೆ ಏರಿಕೆಯಾಗಿದೆ.
ಹುಬ್ಬಳ್ಳಿ ಇಂದಿನ ಚಿನ್ನ, ಬೆಳ್ಳಿ ದರ: ಜಿಲ್ಲೆಯಲ್ಲಿ 24 ಕ್ಯಾರೆಟ್ನ ಒಂದು ಗ್ರಾಂ ಚಿನ್ನದ ದರ 5,622ರೂ. ಇದೆ. ಹಾಗೆಯೇ 22 ಕ್ಯಾರೆಟ್ನ ಒಂದು ಗ್ರಾಂ ಬಂಗಾರಕ್ಕೆ 5,154 ರೂ. ಇದೆ. ಬೆಳ್ಳಿ ದರ 69.68ರೂ. ಇದೆ.
ಮಂಗಳೂರಿನ ಇಂದಿನ ಚಿನ್ನ, ಬೆಳ್ಳಿ ದರ: ಮಂಗಳೂರಿನಲ್ಲಿ ಒಂದು ಗ್ರಾಂ ಚಿನ್ನಕ್ಕೆ( 22 ಕ್ಯಾರೆಟ್) 5,165 ಇದೆ. ನಿನ್ನೆಗೆ ಹೋಲಿಸಿದರೆ 30 ರೂ. ಹೆಚ್ಚಳವಾಗಿದೆ. ಅಂತೆಯೇ, 24 ಕ್ಯಾರೆಟ್ ಚಿನ್ನಕ್ಕೆ 5,634 ರೂಪಾಯಿ ಇದೆ. ನಿನ್ನೆಗೆ ಹೋಲಿಸಿದರೆ 33 ರೂ. ಅಧಿಕವಾಗಿದೆ. ಸದ್ಯಕ್ಕೆ ಬೆಳ್ಳಿ ಬೆಲೆ ಒಂದು ಗ್ರಾಂ ಗೆ 74.90 ರೂ. ಇದೆ. ಭಾನುವಾರಕ್ಕೆ ಹೋಲಿಸಿದರೆ 50 ಪೈಸೆ ಜಾಸ್ತಿಯಾಗಿದೆ.
ಮೈಸೂರಿನಲ್ಲಿ ಚಿನ್ನಾಭರಣ ಬೆಲೆ: ಜಿಲ್ಲೆಯಲ್ಲಿ 22 ಕ್ಯಾರೆಟ್ನ ಚಿನ್ನ ಇಂದು 5,160 ರೂಪಾಯಿಗೆ ಮಾರಾಟವಾಗುತ್ತಿದೆ. ಗ್ರಾಂಗೆ 30 ರೂ. ಹೆಚ್ಚಳವಾಗಿದೆ. ಹಾಗೆಯೇ 24 ಕ್ಯಾರೆಟ್ನ ಚಿನ್ನ 5,806ರೂ.ಗೆ ಲಭ್ಯವಾಗುತ್ತಿದೆ. ನಿನ್ನೆಗೆ ಹೋಲಿಸಿದರೆ ಒಂದು ಗ್ರಾಂಗೆ 50 ರೂಪಾಯಿ ಅಧಿಕವಾಗಿದೆ. ಬೆಳ್ಳಿಯು ಒಂದು ಗ್ರಾಂಗೆ 71.10 ರೂನಂತೆ ಮಾರಾಟವಾಗುತ್ತಿದೆ.
ಶಿವಮೊಗ್ಗದಲ್ಲಿ ಬಂಗಾರದ ಬೆಲೆ: ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ 22 ಕ್ಯಾರೆಟ್ ಚಿನ್ನ 5160 ರೂಪಾಯಿಗೆ ಮಾರಾಟವಾಗುತ್ತಿದೆ. 24 ಕ್ಯಾರೆಟ್ ಚಿನ್ನ 5,636 ರೂ.ಗೆ ದೊರೆಯುತ್ತಿದೆ. ಹಾಗೆಯೇ ಬೆಳ್ಳಿ 70.40 ರೂ. ಗೆ ಮಾರಾಟವಾಗುತ್ತಿದೆ.
ದಾವಣಗೆರೆ ಚಿನ್ನ-ಬೆಳ್ಳಿ ದರ: ಜಿಲ್ಲೆಯಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನ 5,165 ರೂಪಾಯಿಗೆ ಮಾರಾಟವಾಗುತ್ತಿದೆ. 24 ಕ್ಯಾರೆಟ್ ಚಿನ್ನ 5,634 ರೂಪಾಯಿಗೆ ಮಾರಾಟವಾಗುತ್ತಿದೆ. ನಿನ್ನೆಗೆ ಹೋಲಿಸಿದರೆ ಬಂಗಾರದ ಬೆಲೆಯಲ್ಲಿ 30 ರೂಪಾಯಿ ಏರಿಕೆಯಾಗಿದೆ. ಹಾಗೆಯೇ ಬೆಳ್ಳಿ ದರ ಗ್ರಾಂ ಗೆ 74.90 ರೂ. ಇದೆ.
ಇದನ್ನೂ ಓದಿ: 3.2 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ.. ಮಂಗಳೂರು ಸಿಸಿಬಿಯಿಂದ ಇಬ್ಬರ ಬಂಧನ