ಪಣಜಿ(ಗೋವಾ): ಮುಂಬರುವ ಗೋವಾ ವಿಧಾನಸಭಾ ಚುನಾವಣೆಗೆ ಅಮಿತ್ ಪಾಲೇಕರ್ ಅವರು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಅಮಿತ್ ಪಾಲೇಕರ್ ಅವರು ಗೋವಾ ವಿಧಾನಸಭಾ ಚುನಾವಣೆಗೆ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಅಮಿತ್ ಪಾಲೇಕರ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಭಂಡಾರಿ ಸಮುದಾಯದಿಂದ ಬಂದವರು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈಗಾಗಲೇ ಗೋವಾದ ಎಲ್ಲ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಆಮ್ ಆದ್ಮಿಪಕ್ಷ ಘೋಷಣೆ ಮಾಡಿದೆ.
ಟಿಎಂಸಿಯಿಂದ ಅಭ್ಯರ್ಥಿಗಳ ಘೋಷಣೆ: ಗೋವಾದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷವಾದ ಕಾಂಗ್ರೆಸ್ ಹೊರತುಪಡಿಸಿ, ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ , ಶಿವಸೇನೆ ಮತ್ತು ಇತರ ಪಕ್ಷಗಳು ಕೂಡ ಕಣದಲ್ಲಿವೆ.
ಗೋವಾದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯಕ್ಕೆ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ತೃಣಮೂಲ ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
-
The first list of candidates for Goa Assembly Elections 2022 👇🏼
— AITC Goa (@AITC4Goa) January 18, 2022 " class="align-text-top noRightClick twitterSection" data="
Wishing everyone the very best!#GoaElections2022 pic.twitter.com/hOHCOpYll7
">The first list of candidates for Goa Assembly Elections 2022 👇🏼
— AITC Goa (@AITC4Goa) January 18, 2022
Wishing everyone the very best!#GoaElections2022 pic.twitter.com/hOHCOpYll7The first list of candidates for Goa Assembly Elections 2022 👇🏼
— AITC Goa (@AITC4Goa) January 18, 2022
Wishing everyone the very best!#GoaElections2022 pic.twitter.com/hOHCOpYll7
ಗೋವಾ ವಿಧಾನಸಭಾ ಚುನಾವಣೆ ಫೆಬ್ರವರಿ 14ರಂದು ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10ರಂದು ನಡೆಯಲಿದೆ.
ಇದನ್ನೂ ಓದಿ: ಉತ್ತರಪ್ರದೇಶ ಚುನಾವಣೆ : ಮಾಜಿ ಸಿಎಂ ಅಖಿಲೇಶ್ ಯಾದವ್ ಸ್ಪರ್ಧೆ ಸಾಧ್ಯತೆ