ETV Bharat / bharat

ಅದಾನಿ, ಜಿಂದಾಲ್ ತಲಾ ಲಕ್ಷ ಕೋಟಿ, ಸ್ಟೈರ್ಲೈಟ್ ಪವರ್ ₹50 ಸಾವಿರ ಕೋಟಿ ಹೂಡಿಕೆಗೆ ಆಸಕ್ತಿ - ಸ್ಟೈರ್ಲೈಟ್ ಪವರ್

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮೊದಲ ದಿನವೇ ದೇಶದ ವಿವಿಧ ದಿಗ್ಗಜ ಉದ್ಯಮಿಗಳು ಲಕ್ಷ ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

world global capital investors at bangalore
ಬೆಂಗಳೂರಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶEtv Bharat
author img

By

Published : Nov 2, 2022, 2:24 PM IST

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮೊದಲ ದಿನವೇ ರಾಜ್ಯಕ್ಕೆ ಬಂಪರ್ ಬಂಡವಾಳ ಹೂಡಿಕೆ ಹರಿದು ಬಂದಿದೆ. ದೇಶದ ವಿವಿಧ ದಿಗ್ಗಜ ಉದ್ಯಮಿಗಳು ಲಕ್ಷ ಕೋಟಿ ಕೋಟಿ ರೂ.ಗಳಷ್ಟು ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಜೆಎಸ್ ಡಬ್ಲ್ಯೂ ಗ್ರೂಪ್‌: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಉದ್ಘಾಟನೆ ಕಾರ್ಯಕ್ರಮದಲ್ಲಿ ಜೆಎಸ್ ಡಬ್ಲ್ಯೂ ಅಧ್ಯಕ್ಷ ಸಜ್ಜನ್ ಜಿಂದಾಲ್ ಮಾತನಾಡಿ, ಮುಂದಿನ ಐದು ವರ್ಷಗಳಲ್ಲಿ ಜೆಎಸ್ ಡಬ್ಲ್ಯೂ ಗ್ರೂಪ್‌ ಸುಮಾರು ಒಂದು‌ ಲಕ್ಷ ಕೋಟಿ‌ ರೂ. ಗಳಷ್ಟು ಬಂಡವಾಳ ಹೂಡಿಕೆ ಮಾಡಲಿದೆ ಎಂದರು.

ಸ್ಟೈರ್ಲೈಟ್ ಪವರ್: ಸಂಸ್ಥೆಯ ಸಿಇಓ ಪ್ರತೀಕ್ ಅಗರ್ವಾಲ್ ಮಾತನಾಡಿ, ರಾಜ್ಯದಲ್ಲಿ 50 ಸಾವಿರ ಕೋಟಿ ರೂ.ಗಳಷ್ಟು ಬಂಡವಾಳ ಹೂಡಿಕೆ ಮಾಡಲಾಗುವುದು. ಅದರಲ್ಲಿ ಇಂಧನ ಕ್ಷೇತ್ರದಲ್ಲಿ, ಗ್ರೀನ್ ಎನರ್ಜಿಯ ಸಂಶೋಧನೆಯಲ್ಲಿ ತೊಡಗಿಸಲಾಗುವುದು ಎಂದು ಹೇಳಿದರು.

ಅದಾನಿ ಪೋರ್ಟ್: ಸಿಇಓ ಕರಣ್ ಅದಾನಿ ಮಾತನಾಡಿ, ಈಗ ಪ್ರಸ್ತುತ 20 ಸಾವಿರ ಕೋಟಿ ರೂ.ಗಳಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ. ಅದಾನಿ ಪೋರ್ಟ್, ಅಡುಗೆ ಎಣ್ಣೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿದೆ. ಉಡುಪಿ ಪವರ್ ಸ್ಟೇಷನ್ ,ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್‌ನಿಂದ ನಡೆಯುತ್ತಿದೆ. ಶೀಘ್ರ ರಾಜ್ಯದಲ್ಲಿ ಮಲ್ಟಿಪಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಪಡಿಸುತ್ತೇವೆ. ರಾಜ್ಯದಲ್ಲಿ ಮುಂದಿನ 7 ವರ್ಷದಲ್ಲಿ 1 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳವನ್ನು ವಿವಿಧ ಅಹಾರ ಸಂಸ್ಕರಣೆ ಮತ್ತು ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಕರೆನ್ಸಿ ಕಾರ್ಯಾರಂಭ ಶೀಘ್ರ: ಆರ್​ಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.