ಚಂಡೀಗಢ : ದೇಶದಲ್ಲಿ ಮತ್ತೊಮ್ಮೆ ಹುಡುಗಿರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಕಳುಹಿಸಿರುವ ಹೀನ ಕೃತ್ಯವೊಂದು ಚಂಡೀಗಢದಿಂದ ವರದಿಯಾಗಿದೆ. ಚಂಡೀಗಢ ನಗರದ ಪಿಜಿ (ಪೇಯಿಂಗ್ ಗೆಸ್ಟ್)ಯೊಂದರ ಬಾತ್ ರೂಂನಲ್ಲಿ ಕ್ಯಾಮರಾ ಅಳವಡಿಸಿ ತನ್ನೊಂದಿಗೆ ವಾಸಿಸುತ್ತಿದ್ದ ಹುಡುಗಿಯರ ಅಶ್ಲೀಲ ಫೋಟೋ ಮತ್ತು ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಮೇಲೆ ಪೊಲೀಸರು ಆರೋಪಿ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪ್ರಿಯಕರನನ್ನು ಅಮಿತ್ ಎಂದು ಗುರುತಿಸಲಾಗಿದೆ.
ಇಬ್ಬರ ಮೊಬೈಲ್ಗಳನ್ನು ವಶಕ್ಕೆ ಪಡೆದಿದರುವ ಪೊಲೀಸರು ಸಿಎಫ್‌ಎಸ್‌ಎಲ್ (ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯ) ಲ್ಯಾಬ್‌ಗೆ ಕಳುಹಿಸಿದ್ದಾರೆ. ಆರೋಪಿಗಳು ಎಷ್ಟು ಜನ ಹುಡುಗಿಯರ ವಿಡಿಯೋ ಮಾಡಿದ್ದಾರೆ. ಆ ವಿಡಿಯೋಗಳನ್ನು ಯಾರಿಗೆ ಕಳುಹಿಸಿದ್ದಾರೆ ಎಂಬುದನ್ನು ಲ್ಯಾಬ್ ವರದಿಯಲ್ಲಿ ಬಹಿರಂಗವಾಗಲಿದೆ. ಈ ಬಗ್ಗೆ ಹೈ ಅಲರ್ಟ್ ಆಗಿರುವ ಪೊಲೀಸರು ಎಲ್ಲ ರೀತಿಯಲ್ಲೂ ತನಿಖೆ ಮುಂದುವರೆಸಿದ್ದಾರೆ.
ಈ ಪಿಜಿಯಲ್ಲಿ ಐವರು ಹುಡುಗಿಯರು ವಾಸವಿದ್ದು, ಒಂದೇ ಸ್ನಾನಗೃಹವನ್ನು ಬಳಸುತ್ತಿದ್ದರು. ಎಂದಿನಂತೆ ಸ್ನಾನಕ್ಕೆ ಎಂದು ಬಾತ್ ರೂಂಗೆ ಸಂತ್ರಸ್ತ ಹುಡುಗಿ ಹೋದಾಗ ಗೀಸರ್ ಮೇಲೆ ಸಾಧನವೊಂದು ಮಿನುಗುತ್ತಿರುವುದು ಕಂಡು ಬಂದಿದೆ. ತಕ್ಷಣ ಈ ಬಗ್ಗೆ ತನ್ನ ಸಹವರ್ತಿಗೆ ಸಂತ್ರಸ್ತೆ ಹೇಳಿದಾಗ ಕ್ಯಾಮರಾ ಅಳವಡಿಸಿರುವುದು ಬೆಳಕಿಗೆ ಬಂದಿದೆ. ತಕ್ಷಣ ಭಯಭೀತರಾದ ಹುಡುಗಿಯರು ಪಿಜಿ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.
ಬಳಿಕ ಪಿಜಿ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕ್ಯಾಮರಾವನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಪ್ರಿಯಕರನ ಮಾತಿಗೆ ತಲೆ ಬಾಗಿ ಇಂತಹ ನೀಚ ಕೃತ್ಯಕ್ಕೆ ಯುವತಿ ಕೈ ಹಾಕಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ 354 ಸಿ, 509 ಮತ್ತು ಐಟಿ ಕಾಯ್ದೆಯ 66 ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಪತ್ನಿಯ ಖಾಸಗಿ ವಿಡಿಯೋ ತೋರಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಗೆ ಹಲ್ಲೆ, ಆರೋಪಿ ಬಂಧನ
ಹೋಮ್ ಸ್ಟೇ ಮಹಿಳಾ ಉದ್ಯೋಗಿಯ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ವೈರಲ್( ಆಗ್ರಾ) : ಆಗ್ರಾದ ತಾಜ್ ನಗರದ ಹೋಮ್ ಸ್ಟೇಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಶನಿವಾರ (ನ.11 ರಂದು) ತಡರಾತ್ರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿತ್ತು. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದ ಏಳು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಸಂತ್ರಸ್ತೆ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಮಹಿಳೆ ಜೋರಾಗಿ ಕಿರುಚುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಾಜ್‌ಗಂಜ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಸಂತ್ರಸ್ತೆಯ ದೂರಿನ ಮೇರೆಗೆ ಆರೋಪಿಗಳಾದ ಜಿತೇಂದ್ರ ರಾಥೋಡ್, ರವಿ ರಾಥೋಡ್, ಮನೀಶ್ ಕುಮಾರ್ ಮತ್ತು ದೇವ್ ಕಿಶೋರ್ನನ್ನು ಬಂಧಿಸಿದ್ದರು.