ನೋಯ್ಡಾ/ದೆಹಲಿ: ಸಹೋದರನಿಗೆ ರಾಖಿ ಕಟ್ಟಲು ಹೊರಟಿದ್ದ 6 ವರ್ಷದ ಬಾಲಕಿಯ ಮೇಲೆ ಗೂಳಿಗಳು ದಾಳಿ ನಡೆಸಿದ್ದು, ಆಕೆ ಸಾವನ್ನಪ್ಪಿದ್ದಾಳೆ. ನೋಯ್ಡಾದ ಸೆಕ್ಟರ್ 49ರ ಸರ್ದಾರ್ಪುರ ಬಳಿ ಘಟನೆ ನಡೆದಿದೆ.
ರಕ್ಷಾ ಬಂಧನದ ಕಾರಣ ತಂದೆ, ಮಗ, ಮಗಳು ಜಾಕ್ವೆಲಿನ್, ಸೊಸೆ, ಸೋದರಳಿಯ ಹಾಗೂ ಇತರೆ ಸ್ನೇಹಿತರು ನಡೆದುಕೊಂಡು ಮನೆಯಿಂದ ಸ್ವಲ್ಪ ದೂರದಲ್ಲಿರುವ ಸಹೋದರನ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಕಾದಾಡುತ್ತಿದ್ದ ಎರಡು ಗೂಳಿಗಳು ಏಕಾಏಕಿ ಬಾಲಕಿ ಮೇಲೆರಗಿವೆ. ಉಳಿದಂತೆ ಇತರೆ ಮೂವರು ಮಕ್ಕಳಿಗೂ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: 10ನೇ ತರಗತಿಯ ಮೂವರು ಬಾಲಕಿಯರ ಮೇಲೆ ಅತ್ಯಾಚಾರ: ಮದುವೆ ನೆಪದಲ್ಲಿ ಮಾರಾಟ ಯತ್ನ
ನೋಯ್ಡಾ ಪ್ರಾಧಿಕಾರದ ವಿರುದ್ಧ ವಾಗ್ದಾಳಿ: ಜಾಕ್ವೆಲಿನ್ ಸಾವಿನ ಬೆನ್ನಲ್ಲೇ ಕುಟುಂಬಸ್ಥರು ಹಾಗೂ ಸ್ಥಳೀಯರು ನೋಯ್ಡಾ ಪ್ರಾಧಿಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಪ್ರದೇಶದಲ್ಲಿ ಬೀಡಾಡಿ ದನಗಳ ಹಾವಳಿ ಜಾಸ್ತಿಯಾಗಿದ್ದರೂ ಪ್ರಾಧಿಕಾರದ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.