ಹೈದರಾಬಾದ್ (ತೆಲಂಗಾಣ): ದೇಶಾದ್ಯಂತ ಕರ್ನಾಟಕದ ಹಿಜಾಬ್ ವಿವಾದ ಭಾರಿ ಚರ್ಚೆಗೆ ಕಾರಣವಾಗಿರುವ ಈ ವೇಳೆಯಲ್ಲಿ "ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾಳೆ" ಎಂದು ಹೈದರಾಬಾದ್ ಕ್ಷೇತ್ರದ ಲೋಕಸಭಾ ಸಂಸದ ಹಾಗೂ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿಕೆ ನೀಡಿದ್ದಾರೆ.
-
इंशा’अल्लाह pic.twitter.com/lqtDnReXBm
— Asaduddin Owaisi (@asadowaisi) February 12, 2022 " class="align-text-top noRightClick twitterSection" data="
">इंशा’अल्लाह pic.twitter.com/lqtDnReXBm
— Asaduddin Owaisi (@asadowaisi) February 12, 2022इंशा’अल्लाह pic.twitter.com/lqtDnReXBm
— Asaduddin Owaisi (@asadowaisi) February 12, 2022
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಡಿಯೋವೊಂದನ್ನು ಓವೈಸಿ ತಮ್ಮ ಟ್ವಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು, "ಹಿಜಾಬ್ ಧರಿಸಿದ ಮಹಿಳೆಯರು ಕಾಲೇಜಿಗೆ ಹೋಗುತ್ತಾರೆ, ಜಿಲ್ಲಾಧಿಕಾರಿಗಳು, ಮ್ಯಾಜಿಸ್ಟ್ರೇಟ್‌ಗಳು, ವೈದ್ಯರು, ಉದ್ಯಮಿಗಳಾಗುತ್ತಾರೆ. ಮುಂದೊಂದು ದಿನ ಹಿಜಾಬ್ ಧರಿಸಿದ ಹುಡುಗಿ ಭಾರತದ ಪ್ರಧಾನಿಯಾಗುತ್ತಾಳೆ. ಆದರೆ ಅದನ್ನು ನೋಡಲು ನಾನು ಜೀವಂತವಾಗಿಲ್ಲದಿರಬಹುದು. ಆದರೆ ಆಕೆ ಪ್ರಧಾನಿಯಾಗುವುದು ಸತ್ಯ" ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: 'ಸೀರೆ, ಸಲ್ವಾರ್ ಬದಲಿಗೆ ಜೀನ್ಸ್ ಧರಿಸಿ'.. ಕಾಂಗ್ರೆಸ್ ಸಂಸದ ಉದಿತ್ ರಾಜ್ ಹೇಳಿಕೆ
ಉಡುಪಿಯ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿಯೊಳಗೆ ಪ್ರವೇಶ ನೀಡಬಾರದೆಂಬ ಆಗ್ರಹ ಮೊದಲು ಎದ್ದಿತು. ಇದೀಗ ಅದು 'ಹಿಜಾಬ್-ಕೇಸರಿ ಶಾಲು' ವಿವಾದವಾಗಿದ್ದು, ದೇಶದಾದ್ಯಂತ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಹಿಜಾಬ್ ಸಂಬಂಧ ನಾಳೆ ಕರ್ನಾಟಕ ಹೈಕೋರ್ಟ್ ತೀರ್ಪು ಹೊರಹಾಕುವ ಸಾಧ್ಯತೆಯಿದೆ.