ನವದೆಹಲಿ: ಮನೆಪಾಠ(ಹೋಮ್ವರ್ಕ್) ಮಾಡಲಿಲ್ಲ ಎಂಬ ಕಾರಣಕ್ಕಾಗಿ ಪೋಷಕರು 5 ವರ್ಷದ ಬಾಲಕಿಯನ್ನು ಕೈ ಕಾಲು ಕಟ್ಟಿ ಮನೆಯ ಛಾವಣಿಯ ಮೇಲೆ ಉರಿಬಿಸಿಲಿನಲ್ಲಿ ಬಿಸಾಡಿ ವಿಕೃತಿ ಮೆರೆದಿದ್ದಾರೆ. ದೆಹಲಿಯ ಕರವಾಲ್ ನಗರದ ತುಖ್ಮೀರ್‌ಪುರದಲ್ಲಿ ಮನಕಲಕುವ ಘಟನೆ ನಡೆದಿದೆ.
1ನೇ ತರಗತಿ ಓದುತ್ತಿರುವ ಬಾಲಕಿ ಬಿಸಿಲಿನಲ್ಲಿ ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಗಮನಿಸಿದ ದೆಹಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶಿಕ್ಷಣದ ವಿಷಯದಲ್ಲಿ ಶಿಕ್ಷಕರು, ಮಾರ್ಗದರ್ಶಕರು ಮತ್ತು ಪೋಷಕರಿಂದ ಮಕ್ಕಳನ್ನು ದೈಹಿಕ ಮತ್ತು ಮಾನಸಿಕ ಹಿಂಸಿಸುವುದನ್ನು ತಡೆಯಲು ಹಲವು ಕಾನೂನುಗಳನ್ನು ಜಾರಿ ಮಾಡಿದಾಗ್ಯೂ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: 107ರ ವಯೋವೃದ್ಧೆಗೆ ಹೃದಯಾಘಾತ: ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಯಿಂದ ಜೀವ ಉಳಿಸಿದ ವೈದ್ಯರು!