ETV Bharat / bharat

ಆ್ಯಸಿಡ್ ದಾಳಿಗೊಳಗಾದ ಬಾಲಕಿ ಜಾರ್ಖಂಡ್​ನಿಂದ ದೆಹಲಿಗೆ ಏರ್​ಲಿಫ್ಟ್ - acid attack in Jharkhand

ಆ್ಯಸಿಡ್ ದಾಳಿಗೊಳಗಾದ ಬಾಲಕಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಜಾರ್ಖಂಡ್​ನಿಂದ ದೆಹಲಿಗೆ ಏರ್​ಲಿಫ್ಟ್ ಮಾಡಲಾಗಿದೆ.

girl injured by acid attack in Jharkhand taken-to-delhi-by-air-ambulance
ಆ್ಯಸಿಡ್ ದಾಳಿಗೊಳಗಾದ ಬಾಲಕಿ ಜಾರ್ಖಂಡ್​ನಿಂದ ದೆಹಲಿಗೆ ಏರ್​ಲಿಫ್ಟ್
author img

By

Published : Aug 31, 2022, 5:56 PM IST

Updated : Aug 31, 2022, 7:01 PM IST

ರಾಂಚಿ(ಜಾರ್ಖಂಡ್): ಇತ್ತೀಚೆಗೆ ಆ್ಯಸಿಡ್ ದಾಳಿಗೊಳಗಾದ ಛತ್ರ ಎಂಬಲ್ಲಿನ ಬಾಲಕಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಜಾರ್ಖಂಡ್‌ನಿಂದ ದೆಹಲಿಗೆ ವಿಮಾನದಲ್ಲಿ ಕರೆದೊಯ್ಯಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಹೇಮಂತ್​ ಸೊರೇನ್ ​ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಬಾಲಕಿಯ ಆರೋಗ್ಯ ಸ್ಥಿತಿ ಕುರಿತು ವೈದ್ಯಕೀಯ ಮಂಡಳಿ ಸಲ್ಲಿಸಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ತಂದೆಯಿಂದಲೇ ಆ್ಯಸಿಡ್ ದಾಳಿಗೊಳಗಾಗಿದ್ದ ಬಾಲಕಿಯ ದೇಹದ ಸುಟ್ಟಗಾಯಗಳ ತೀವ್ರತೆಯನ್ನು ಪರಿಗಣಿಸಿ ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ಚಿಕಿತ್ಸೆಯನ್ನು ಪೂರೈಸಲು ಸಿಎಂ ಸೂಚಿಸಿದ್ದಾರೆ. ಛತ್ರದ ಡೆಪ್ಯುಟಿ ಕಮಿಷನರ್ ಅಬು ಇಮ್ರಾನ್ ಪ್ರಕಾರ, ಆಗಸ್ಟ್ 5 ರಂದು ಆಕೆಯ ಮೇಲೆ ದಾಳಿ ನಡೆದಿತ್ತು. ಅದೇ ದಿನ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಇನ್ನು, ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರ 1,00,000 ರೂಪಾಯಿ ಆರ್ಥಿಕ ನೆರವು ಪ್ರಕಟಿಸಿದೆ.

ಇದನ್ನೂ ಓದಿ: ಮನೆಗೆಲಸದಾಕೆಗೆ ಚಿತ್ರಹಿಂಸೆ: ಬಿಜೆಪಿ ಮಾಜಿ ನಾಯಕಿ ಬಂಧನ, 14 ದಿನ ಪೊಲೀಸ್ ಕಸ್ಟಡಿ

ಘಟನೆಯ ಹಿನ್ನೆಲೆ: ಆಗಸ್ಟ್ 4 ರಂದು ರಾತ್ರಿ ಸಂದೀಪ್ ಭಾರ್ತಿ ತನ್ನ 17 ವರ್ಷದ ಮಗಳ ಮೇಲೆಯೇ ಆ್ಯಸಿಡ್ ಎರಚಿ ಕೊಲೆ ಮಾಡಲು ಯತ್ನಿಸಿದ್ದಾನೆ. ಮಗಳ ಸುರಕ್ಷತೆಗಾಗಿ ಪದೇ ಪದೇ ಪೊಲೀಸರಿಗೆ ಮನವಿ ಮಾಡಿದರೂ ಗಮನಹರಿಸಲಿಲ್ಲ. ಕೊನೆಗೂ ಆತ ಈ ಕೃತ್ಯ ಎಸಗಿದ್ದಾನೆಂದು ಬಾಲಕಿಯ ತಾಯಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Last Updated : Aug 31, 2022, 7:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.