ETV Bharat / bharat

ರಸ್ತೆಯಲ್ಲೇ ​ಗುಂಡು ಹಾರಿಸಿ ಯುವತಿ ಕೊಂದ ಯುವಕ; ಪರಾರಿಯಾಗುವಾಗ ಅಪಘಾತದಲ್ಲಿ ಸಾವು - ಈಟಿವಿ ಭಾರತ ಕನ್ನಡ

ಯುವಕನೊಬ್ಬ ಪಿಸ್ತೂಲ್​ನಿಂದ ಗುಂಡು ಹಾರಿಸಿ ಯುವತಿಯ ಕೊಲೆ ಮಾಡಿದ ಭಯಾನಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಗುಂಡು ಹಾರಿಸಿದ ಬಳಿಕ ಪರಾರಿಯಾಗುವಾಗ ಆರೋಪಿಯು ಅಪಘಾತದಲ್ಲಿ ಗಾಯಗೊಂಡು ಅಸುನೀಗಿದ್ದಾನೆ.

girl-dies-in-firing-attacker-also-died-in-accident
ರಸ್ತೆಯಲ್ಲೇ ​ಗುಂಡು ಹಾರಿಸಿ ಯುವತಿ ಕೊಂದ ಯುವಕ ಪರಾರಿಯಾಗುವಾಗ ಅಪಘಾತದಲ್ಲಿ ಸಾವು
author img

By

Published : Sep 29, 2022, 6:08 PM IST

ಪಾಲ್ಘರ್(ಮಹಾರಾಷ್ಟ್ರ): ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಯುವಕ ಯುವತಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಭೀಕರ ಘಟನೆ ಮಹಾರಾಷ್ಟ್ರದ ಪಾಲ್ಘರ್​ನಲ್ಲಿ ನಡೆದಿದೆ. ಇದೇ ವೇಳೆ, ಗುಂಡು ಹಾರಿಸಿ ಪರಾರಿಯಾಗುವಾಗ ಆರೋಪಿಯು ಕಾರಿಗೆ ಡಿಕ್ಕಿ ಹೊಡೆದಿದ್ದು, ನಂತರ ರಕ್ಷಣಾ ಪಡೆಯ ಸೇನಾ ಟ್ರಕ್​​ಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ.

ಮಹಾರಾಷ್ಟ್ರದ ಬೋಯಿಸರ್-ಪಾಲ್ಘರ್ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿ ಯುವಕ, ಯುವತಿಯ ಕೊಲೆ ಮಾಡಿದ್ದಾನೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಕೃಷ್ಣ ಯಾದವ್​ ಎಂಬ ಯುವಕ, ಯುವತಿಯ ಮೇಲೆ ಪಿಸ್ತೂಲ್​ನಿಂದ ಗುಂಡಿನ ದಾಳಿ ನಡೆಸಿದ್ದಾನೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಯುವತಿ ನೇಹಾ ಮೆಹ್ತೋ ರೈಲ್ವೆ ಮೇಲ್ಸೇತುವೆ ಬಳಿ ಬರುತ್ತಿದ್ದಾಗ ಹಿಂದಿನಿಂದ ಬಂದ ಯುವಕ ಕೃತ್ಯ ಎಸಗಿದ್ದಾನೆ. ಗುಂಡಿನ ದಾಳಿಯಿಂದ ಯುವತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಈ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಸ್ತೆಯಲ್ಲೇ ​ಗುಂಡು ಹಾರಿಸಿ ಯುವತಿ ಕೊಂದ ಯುವಕ

ಗುಂಡು ಹಾರಿಸಿ ಸ್ಥಳದಿಂದ ಓಡಿ ಹೋಗುತ್ತಿರುವಾಗ ಕಾರು ಹಾಗೂ ಮಿಲಿಟರಿ ವಾಹನ ತಗುಲಿ ಯುವಕ ಗಂಭೀರ ಗಾಯಗೊಂಡಿದ್ದ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನಿಂದ ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯ ನಡುರಸ್ತೆಯಲ್ಲಿ ರಿಯಲ್​ ಎಸ್ಟೇಟ್​​ ಉದ್ಯಮಿಯ ಬರ್ಬರ ಕೊಲೆ.. ಭಯಾನಕ ದೃಶ್ಯ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.