ರಾಂಚಿ (ಜಾರ್ಖಂಡ್): ರಾಜಧಾನಿ ರಾಂಚಿಯ ಪುಡಾಂಗ್ ಒಪಿ ಪ್ರದೇಶದ ನಿವಾಸಿ 22 ವರ್ಷದ ಶ್ವೇತಾ ಎಂಬ ಯುವತಿ ವಿಚಿತ್ರ ಕಾರಣಕ್ಕೆ ಸಾವಿಗೆ ಶರಣಾಗಿದ್ದಾಳೆ. ತನ್ನ ದೇಹದ ಎತ್ತರದ ವಿಚಾರವಾಗಿ ಈಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ತಾನು ಕುಳ್ಳಗಿರುವುದರಿಂದ ಮನಸ್ಸಿನಲ್ಲಿ ಕೀಳರಿಮೆ ತುಂಬಿಕೊಂಡಿದ್ದು ತನ್ನ ಜೀವನವನ್ನೇ ಅಂತ್ಯಗೊಳಿಸಿದ್ದಾಳೆ.
ಇದನ್ನೂ ಓದಿ: ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಯೋಗಾಭ್ಯಾಸ; ಟ್ರಕ್ ಹರಿದು ಮೂವರು ಬಾಲಕರ ದುರ್ಮರಣ
ಪೋಷಕರು ಪ್ರತಿಕ್ರಿಯೆ : ''ಶ್ವೇತಾ ತನ್ನ ಎತ್ತರದ ಬಗ್ಗೆ ತುಂಬಾ ಚಿಂತಿತರಾಗಿದ್ದಳು. ಇದರಿಂದಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದಳು. ಎತ್ತರ ದೊಡ್ಡ ಸಮಸ್ಯೆಯಲ್ಲ ಎಂದು ಅನೇಕ ಬಾರಿ ಸಮಾಧಾನ ಪಡಿಸಲಾಗಿತ್ತು. ಕೀಳರಿಮೆ ಬೇಡವೆಂದು ಬುದ್ಧಿ ಮಾತು ಹೇಳಿದ್ದೆವು. ಆದರೆ, ಆಕೆಯ ಮನಸ್ಸಿನಲ್ಲಿ ಈ ವಿಷಯ ತುಂಬಾ ಆಳವಾಗಿ ಕುಳಿತಿತ್ತು. ಮೂರು ಬಾರಿ ಮದುವೆ ಮುರಿದು ಬಿದ್ದಿದೆ. ಶ್ವೇತಾ ಖಿನ್ನತೆಗೆ ಒಳಗಾಗಲು ಇದೇ ದೊಡ್ಡ ಕಾರಣವಾಯಿತು" ಎಂದು ಪೋಷಕರು ತಿಳಿಸಿದರು.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ; ಗರ್ಭಿಣಿಯೆಂದು ತಿಳಿದು ಆರೋಪಿ ಎಸ್ಕೇಪ್
ಶ್ವೇತಾ ರಾಂಚಿಯ ಪ್ರೈಮ್ ಒಪಿ ಪ್ರದೇಶದಲ್ಲಿ ತನ್ನ ಅಕ್ಕ ಶಿಲ್ಪಾ ಅವರ ದಶರಥ್ ಎನ್‌ಕ್ಲೇವ್ ಫ್ಲಾಟ್ ಸಂಖ್ಯೆ 603ರಲ್ಲಿ ವಾಸಿಸುತ್ತಿದ್ದರು. ಪೋಷಕರು ಬಿಹಾರದ ಅರ್ವಾಲ್ ನಿವಾಸಿಗಳು. ''ಕೌಟುಂಬಿಕ ಕಾರಣದಿಂದ ಗುರುವಾರ ರಾತ್ರಿ ಹೊರಗೆ ಹೋಗಿದ್ದೆ. ಅಕ್ಕಪಕ್ಕದ ಮನೆಯವರು ಶ್ವೇತಾ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರವಾಣಿ ಮೂಲಕ ತಿಳಿಸಿದರು. ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು" ಎಂದು ಆಕೆಯ ಸಹೋದರಿ ಶಿಲ್ಪಾ ಹೇಳಿದ್ದಾರೆ. ಪೊಲೀಸರು ಶ್ವೇತಾ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಗಳ ಕೊಂದ ತಂದೆಯಿಂದ ತಾಯಿ, ಪೊಲೀಸ್ ಅಧಿಕಾರಿ ಹತ್ಯೆಗೂ ಸಂಚು: ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಶುಕ್ರವಾರ ಬೆಳಕಿಗೆ ಬಂದಿದೆ. ತಂದೆಯೊಬ್ಬ ತನ್ನ ಆರು ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಇದೀಗ ಜೈಲಿನಲ್ಲಿ ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಆರೋಪಿ ತನ್ನ ತಾಯಿ ಹಾಗೂ ಓರ್ವ ಮಹಿಳಾ ಪೊಲೀಸ್ ಅಧಿಕಾರಿಯ ಹತ್ಯೆಗೆ ಸಂಚು ರೂಪಿಸಿದ್ದ ಎನ್ನುವುದು ಪೊಲೀಸ್ ಮಾಹಿತಿಯಿಂದ ತಿಳಿದಿದೆ.
ಆಲಪ್ಪುಳ ಜಿಲ್ಲೆಯ ಮಾವೇಲಿಕರದಲ್ಲಿ ಏ.7ರ ಸಂಜೆ ಶ್ರೀಮಹೇಶ್ ಎಂಬಾತ ತನ್ನ ಆರು ವರ್ಷದ ಮಗಳಾದ ನಕ್ಷತ್ರ ಎಂಬುಳನ್ನು ಕೊಲೆ ಮಾಡಿದ್ದಾನೆ. ಈ ಕೇಸ್ನಲ್ಲಿ ಈಗಾಗಲೇ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ಗೆ ಹಾಜರುಪಡಿಸಿದ ನಂತರ ಆರೋಪಿಯನ್ನು ರಿಮಾಂಡ್‌ಗೆ ಒಪ್ಪಿಸಲಾಗಿದೆ. ಶ್ರೀಮಹೇಶ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವುದು ತಿಳಿದಿದೆ. ಆತ್ಮಹತ್ಯೆ ಯತ್ನದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತದೆ.
ಇನ್ನೊಂದೆಡೆ, ಬಾಲಕಿ ಹತ್ಯೆ ಪ್ರಕರಣದ ತನಿಖೆ ಮತ್ತು ಆರೋಪಿ ತಂದೆಯ ವಿಚಾರಣೆಯಲ್ಲಿ ಆತಂಕಕಾರಿ ಮಾಹಿತಿಯೊಂದು ಬಯಲಾಗಿದೆ. ಶ್ರೀಮಹೇಶ್ ಸಾಮೂಹಿಕ ಮತ್ತು ಸರಣಿ ಹತ್ಯೆಗಳಿಗೆ ಯೋಜಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಏ.7ರಂದು ಸಂಜೆ ಮನೆಯೊಳಗೆ ಮಗಳನ್ನು ಹತ್ಯೆ ಮಾಡಿದ ನಂತರ ತನ್ನ ತಾಯಿ ಸುನಂದಾ ಹಾಗೂ ತಾನು ಮರುಮದುವೆ ಮಾಡಿಕೊಳ್ಳಲು ಸಿದ್ಧರಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ತನಿಖೆಯಿಂದ ತಿಳಿದಿದೆ.
ಇದನ್ನೂ ಓದಿ: ಯುವತಿಯನ್ನು ಕಾರಿನಲ್ಲಿ ಸುತ್ತಾಡಿಸಿ ಕೊಂದು ಮ್ಯಾನ್‌ಹೋಲ್‌ಗೆಸೆದ ಅರ್ಚಕ: ಹೈದರಾಬಾದ್‌ನಲ್ಲೊಂದು ಭೀಕರ ಹತ್ಯೆ!