ETV Bharat / bharat

ನಡುರಸ್ತೆಯಲ್ಲೇ ಯುವತಿ ಜೀವಂತ ಸುಟ್ಟ ದುಷ್ಕರ್ಮಿಗಳು.. ಸಹಾಯಕ್ಕಾಗಿ ಅಂಗಲಾಚಿದ್ರೂ ಬಾರದ ಜನ! - ಯುವತಿಯನ್ನ ಜೀವಂತ ಸುಟ್ಟ ದುಷ್ಕರ್ಮಿಗಳು

ನಡುರಸ್ತೆಯಲ್ಲೇ ಯುವತಿಯೊಬ್ಬಳಿಗೆ ಬೆಂಕಿ ಹಚ್ಚಿರುವ ಘಟನೆ ಬಿಹಾರದ ಸಸಾರಾಮ್​​ನಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Girl burnt alive on road in Sasaram
Girl burnt alive on road in Sasaram
author img

By

Published : May 7, 2022, 4:12 PM IST

ಸಸಾರಾಮ್​(ಬಿಹಾರ): ನಡು ರಸ್ತೆಯಲ್ಲೇ ಯುವತಿಯೊಬ್ಬಳನ್ನು ಜೀವಂತವಾಗಿ ಸುಟ್ಟಿರುವ ಘಟನೆ ಬಿಹಾರದ ಸಸಾರಾಮ್​​ನಲ್ಲಿ ನಡೆದಿದ್ದು, ತನ್ನ ರಕ್ಷಣೆ ಮಾಡುವಂತೆ ಸಹಾಯಕ್ಕಾಗಿ ಅಂಗಲಾಚಿದರೂ ಜನರು ಮುಂದೆ ಬಂದಿಲ್ಲ. ಸಸಾರಾಮ್​​ನ ಮುಫಾಸಿಲ್​ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಲ್​ ಕಾರಾಗೇಟ್​​ ಬಳಿ ಈ ಘಟನೆ ನಡೆದಿದೆ.

Girl burnt alive on road in Sasaram
ನಡುರಸ್ತೆಯಲ್ಲೇ ಯುವತಿಯೋರ್ವಳಿಗೆ ಬೆಂಕಿ ಇಟ್ಟ ದುರುಳರು

ಯುವತಿಗೆ ಬೆಂಕಿ ಹಚ್ಚುತ್ತಿದ್ದಂತೆ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ರಸ್ತೆ ತುಂಬೆಲ್ಲ ಓಡಾಡಿದ್ದಾಳೆ. ಈ ವೇಳೆ, ಸಹಾಯಕ್ಕಾಗಿ ಜನರ ಬಳಿ ಬೇಡಿಕೊಂಡಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಪ್ರಕರಣ ನಡೆದು 24 ಗಂಟೆ ಕಳೆದರೂ ಆರೋಪಿಗಳ ಸುಳಿವು ಮಾತ್ರ ಲಭ್ಯವಾಗಿಲ್ಲ.

ನಡುರಸ್ತೆಯಲ್ಲೇ ಯುವತಿ ಜೀವಂತ ಸುಟ್ಟ ದುಷ್ಕರ್ಮಿಗಳು

ಇದನ್ನೂ ಓದಿ: ಟಾಟಾ ಉಕ್ಕಿನ ಕಾರ್ಖಾನೆಯಲ್ಲಿ ಸ್ಫೋಟ.. ಮೂವರಿಗೆ ಗಾಯ

ಸಸಾರಾಮ್​ ಜೈಲಿನ ಪಕ್ಕದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯನ್ನ ಕಾರಿನಿಂದ ಕೆಳಗೆ ಇಳಿಸಿದ ಬಳಿಕ ಯಾರೋ ಬೆಂಕಿ ಹಚ್ಚಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅದನ್ನ ಸದರ್​ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಆದರೆ, ಇಲ್ಲಿಯವರೆಗೆ ಬಾಲಕಿ ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಎಸ್​ಎಚ್​ಒ ರಾಕೇಶ್​ ಕುಮಾರ್​, ಬಾಲಕಿ ಯಾರು ಎಂಬುದು ಗೊತ್ತಾದ ಬಳಿಕವೇ ಪ್ರಕರಣ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.