ಹೈದರಾಬಾದ್ (ತೆಲಂಗಾಣ): ಪ್ರಾದೇಶಿಕ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರದ ನಂತರ, ಇಂದು ಹೈದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್‌ಎಂಸಿ) ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಮತದಾನ ಆರಂಭವಾಗಿದ್ದು, ಸಂಜೆ 6ರವರೆಗೆ ನಡೆಯಲಿದೆ.
ಕಾಚಿಗುಡಾದ ದೀಕ್ಷಾ ಮಾಡೆಲ್ ಸ್ಕೂಲ್ನಲ್ಲಿ ಬೆಳಗ್ಗೆಯೇ ಸರದಿ ಸಾಲಿನಲ್ಲಿ ನಿಂತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಅವರು ತಮ್ಮ ಹಕ್ಕು ಚಲಾಯಿಸಿದರು. ಹೈದರಾಬಾದ್ ಮಹಾನಗರ ಪಾಲಿಕೆಯಲ್ಲಿ 150 ವಾರ್ಡ್‌ಗಳಿವೆ. ಮೇಯರ್ ಹುದ್ದೆಯನ್ನು ಈ ಬಾರಿ ಮಹಿಳೆಗೆ ಕಾಯ್ದಿರಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮತಪತ್ರಗಳೊಂದಿಗೆ ಚುನಾವಣೆ ನಡೆಸಲಾಗುತ್ತಿದೆ. ಅಧಿಕೃತ ಮಾಹಿತಿಯ ಪ್ರಕಾರ 74,44,260 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.
-
Telangana: MoS (Home) G Kishan Reddy stands in a queue at Deeksha Model School in Kachiguda, designated as a polling booth, as he waits for his turn to cast his vote for #GHMCElections2020 pic.twitter.com/4BQwgOHeQy
— ANI (@ANI) December 1, 2020 " class="align-text-top noRightClick twitterSection" data="
">Telangana: MoS (Home) G Kishan Reddy stands in a queue at Deeksha Model School in Kachiguda, designated as a polling booth, as he waits for his turn to cast his vote for #GHMCElections2020 pic.twitter.com/4BQwgOHeQy
— ANI (@ANI) December 1, 2020Telangana: MoS (Home) G Kishan Reddy stands in a queue at Deeksha Model School in Kachiguda, designated as a polling booth, as he waits for his turn to cast his vote for #GHMCElections2020 pic.twitter.com/4BQwgOHeQy
— ANI (@ANI) December 1, 2020
ಒಟ್ಟು 1,122 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತೆಲಂಗಾಣ ರಾಜ್ಯ ಚುನಾವಣಾ ಆಯೋಗ 48,000 (ಮೀಸಲು ಸೇರಿದಂತೆ) ಮತದಾನ ಸಿಬ್ಬಂದಿ ಮತ್ತು 52,500 ಪ್ರಬಲ ಪೊಲೀಸ್ ಪಡೆಗಳನ್ನು ನಿಯೋಜಿಸುವ ಮೂಲಕ ಮತದಾನ ಪ್ರಕ್ರಿಯೆಗೆ ಸೂಕ್ತ ವ್ಯವಸ್ಥೆ ಮಾಡಿದೆ.
2016 ಕ್ಕೆ ಹೋಲಿಸಿದರೆ 817 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2,146 ಸಾಮಾನ್ಯ ಮತಗಟ್ಟೆಗಳು, 1,517 ಸೂಕ್ಷ್ಮ ಮತಗಟ್ಟೆಗಳು ಮತ್ತು 167 ಅತಿಸೂಕ್ಷ್ಮ ಮತದಾನ ಕೇಂದ್ರಗಳಿವೆ. ಈವರೆಗೆ ಒಟ್ಟು 4,187 ಬಂದೂಕುಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯಲಾಗಿದೆ. 3,066 ರೌಡಿ ಶೀಟರ್‌ಗಳನ್ನು ಮತ್ತು 1.45 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. 10 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 63 ದೂರುಗಳಲ್ಲಿ ಒಟ್ಟು 55 ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.