ETV Bharat / bharat

ಮದ್ಯ ಕುಡಿಸಿ ಅಶ್ಲೀಲ ಫೋಟೋ, ವಿಡಿಯೋ ತೆಗೆದು ಬ್ಲಾಕ್​ ಮೇಲ್​: ಯುವತಿ ವಿರುದ್ಧ ಯುವಕನ ದೂರು..! - ಹನಿಟ್ರ್ಯಾಪ್​ ಮೂಲಕ ಹಣ ಗಳಿಕೆ

ಹುಟ್ಟುಹಬ್ಬದ ಪಾರ್ಟಿ ಅಂತ ಹೇಳಿ ಮದ್ಯ ಕುಡಿಸಿ ಯುವತಿಯೊಬ್ಬಳು ಯುವಕನೊಬ್ಬನ ಅಶ್ಲೀಲ ವಿಡಿಯೋಗಳು ಮತ್ತು ಚಿತ್ರಗಳನ್ನು ತೆಗೆದು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣ ಘಾಜಿಯಾಬಾದ್​ನಲ್ಲಿ ಬೆಳಕಿಗೆ ಬಂದಿದೆ. ಅದೇ ರೀತಿ ಇನ್ನೂ ಹಲವು ಯುವಕರನ್ನು ಬಲೆಗೆ ಕೆಡವಿ ಹಣ ವಸೂಲಿ ಮಾಡಿದ್ದಾಳೆ ಎಂದು ಸಂತ್ರಸ್ತ ಯುವಕ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ.

ghaziabad-honey-trap-case
ಬ್ಲಾಕ್​ ಮೇಲ್
author img

By

Published : Dec 21, 2021, 8:26 PM IST

ಘಾಜಿಯಾಬಾದ್ : ಮದ್ಯ ಕುಡಿಸಿ ಮತ್ತಿನಲ್ಲಿದ್ದ ಯುವಕನೊಬ್ಬನ ಅಶ್ಲೀಲ ಫೋಟೋ ಮತ್ತು ವಿಡಿಯೋ ಮಾಡಿ ಯುವತಿಯೊಬ್ಬಳು ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡಿದ ಪ್ರಕರಣ ಘಾಜಿಯಾಬಾದ್​ ಜಿಲ್ಲೆಯ ನಂದಗ್ರಾಮದಲ್ಲಿ ಜರುಗಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿದೆ.

ಮದ್ಯ ಕುಡಿಸಿ ಅಶ್ಲೀಲ ಫೋಟೋ, ವಿಡಿಯೋ ತೆಗೆದು ಬ್ಲಾಕ್​ ಮೇಲ್

ಯುವಕನಿಗೆ ಮದ್ಯ ಕುಡಿಸಿ ಯುವತಿ ಬ್ಲ್ಯಾಕ್​ ಮೇಲ್​: ಈ ಕುರಿತು ಟ್ಯಾಟೂ ಕಲಾಕಾರನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ಯುವತಿಯೊಬ್ಬಳು ನನ್ನ ಅಂಗಡಿಗ ಟ್ಯಾಟೂ ಹಾಕಿಸಿಕೊಳ್ಳಲು ಬಂದಿದ್ದಳು. ನಂತರ ದಿನಗಳಲ್ಲಿ ಅವಳು ನನಗೆ ಗ್ರಾಹಕರನ್ನು ಕಳುಹಿಸಲು ಪ್ರಾರಂಭಿಸಿದಳು. ಅದಕ್ಕೆ ನಾನು ಕಮಿಷನ್ ಕೂಡಾ​ ಕೊಡುತ್ತಿದ್ದೆ. ಇದರಿಂದಾಗಿ ಬಹುಬೇಗನೇ ಆ ಯುವತಿ ಮತ್ತು ನಾನು ಸ್ನೇಹಿತರಾದೆವು ಕೂಡಾ.

ಒಂದು ದಿನ ಬರ್ತಡೇ ಪಾರ್ಟಿ ಇದೆ ಅಂತ ಕರೆದುಕೊಂಡು ಹೋಗಿದ್ದಳು. ಅಲ್ಲಿ ಬಹಳ ಜನ ಇದ್ದರು. ಆ ಪಾರ್ಟಿಯಲ್ಲಿ ನನಗೆ ಮದ್ಯ ಮತ್ತು ಮಾದಕ ವಸ್ತುಗಳನ್ನು ಬಲವಂತವಾಗಿ ಕುಡಿಸಿ ನಂತರ ಅಮಲಿನಲ್ಲಿದ್ದಾಗ ಆಶ್ಲೀಲ ಫೋಟೋ ಮತ್ತು ವಿಡಿಯೋ ಮಾಡಿ ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡಿದ್ದಳು. ಇಲ್ಲದಿದ್ದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದು ನೊಂದ ಯುವಕ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ, ಯುವತಿಯ ಫೋನ್​​ನ್ನು ಪರಿಶೀಲಿಸಿದಾಗ ಅನೇಕ ಯುವಕರಿಗೆ ಬಲವಂತವಾಗಿ ಮದ್ಯ ಕುಡಿಸಿ ಫೋಟೋ ಮತ್ತು ವಿಡಿಯೋ ಮಾಡಿದ್ದಾಗಿ ತಿಳಿದು ಬಂತು. ನನಗಷ್ಟೇ ಅಲ್ಲದೆ, ಅನೇಕ ಯುವಕರಿಗೆ ಯುವತಿ ಬ್ಲ್ಯಾಕ್​ ಮೇಲೆ ಮಾಡಿದ್ದಾಳೆ. ಹನಿಟ್ರ್ಯಾಪ್​ ಮೂಲಕ ಹಣ ಗಳಿಕೆ ಮಾಡುತ್ತಿದ್ದಾಳೆ ಎಂದು ಗೊತ್ತಾಯಿತು ಎಂದು ಯುವಕ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.

ಸದ್ಯ ಹನಿಟ್ರಾಪ್​ನಲ್ಲಿ ಸಿಕ್ಕಿಬಿದ್ದಿರುವ ಯುವಕ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ. ಅಲ್ಲದೇ, ಅನೇಕ ವಿಡಿಯೋ ಮತ್ತು ಫೋಟೋಗಳನ್ನು ಪೊಲೀಸರಿಗೆ ನೀಡಿದ್ದಾನೆ. ಯುವಕನ ದೂರಿನ ಮೆರೆಗೆ ಪೊಲೀಸರು ತನಿಖೆ ಕೈಗೊಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.