ETV Bharat / bharat

ಭಾರತದಲ್ಲಿ ತರಕಾರಿ ಅಂಗಡಿಯಲ್ಲಿ ಯುಪಿಐ ಮೂಲಕ ಹಣ ಪಾವತಿಸಿದ ಜರ್ಮನ್ ಸಚಿವ... - Minister for Digital and Transport Volker Wissing

ಜರ್ಮನ್​ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಭಾರತದ ಯುಪಿಐ ತಂತ್ರಜ್ಞಾನ ಬಳಸಿ ಹಣ ಪಾವತಿಗೆ ಭಾರತದ ಜರ್ಮನ್ ರಾಯಭಾರಿ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ.​

german-minister-fascinated-after-first-hand-experience-of-indias-upi-payment-model
ಭಾರತದ ಯಶಸ್ಸಿನ ಕಥೆಗಳಲ್ಲಿ ಒಂದು..UPI ಮಾದರಿ ಪಾವತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಜರ್ಮನ್ ರಾಯಭಾರಿ ಕಚೇರಿ
author img

By

Published : Aug 20, 2023, 10:51 PM IST

ನವದೆಹಲಿ: ಜರ್ಮನಿಯ ತಂತ್ರಜ್ಞಾನ ಹಾಗೂ ಸಾರಿಗೆ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಭಾರತದಲ್ಲಿ ಯುಪಿಐ ತಂತ್ರಜ್ಞಾನ ಬಳಸಿ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ಹಣ ಪಾವತಿ ಮಾಡಿದ್ದಾರೆ. ಈ ಬೆನ್ನಲ್ಲೇ ಭಾರತದ ಡಿಜಿಟಲ್​​ ಮೂಲಸೌಕರ್ಯವನ್ನು ಭಾರತದ ಜರ್ಮನ್​ ರಾಯಭಾರಿ ಕಚೇರಿ ಶ್ಲಾಘಿಸಿದೆ. ಇದು ಭಾರತದ ಯಶಸ್ಸಿನ ಕಥೆಗಳಲ್ಲಿ ಒಂದು ಎಂದು ರಾಯಭಾರಿ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಬಗ್ಗೆ ಎಕ್ಸ್​ನಲ್ಲಿ (ಟ್ವಿಟ್ಟರ್) ವಿಡಿಯೋ ಮತ್ತು ಫೋಟೋಗಳನ್ನು​​ ಹಂಚಿಕೊಂಡಿರುವ ಜರ್ಮನ್​ ರಾಯಭಾರಿ ಕಚೇರಿ, ''ಭಾರತ ಯಶಸ್ಸಿನ ಕಥೆಗಳಲ್ಲಿ ಡಿಜಿಟಲ್​ ಮೂಲಸೌಕರ್ಯವೂ ಒಂದು. ಯುಪಿಐ ತಂತ್ರಜ್ಞಾನದ ಮೂಲಕ ಎಲ್ಲರೂ ಕೆಲವೇ ಸೆಕೆಂಡ್​ಗಳಲ್ಲಿ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಸಚಿವ ವಿಸ್ಸಿಂಗ್​ ಅವರಿಗೆ ಮೊದಲ ಬಾರಿಗೆ ಯುಪಿಐ ಪಾವತಿಯ ಅನುಭವವಾಯಿತು. ಇದು ತುಂಬಾ ಆಕರ್ಷಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಎಕ್ಸ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಜರ್ಮನ್​ ಸಚಿವ ವಿಸ್ಸಿಂಗ್ ಅವರು ತರಕಾರಿ ವ್ಯಾಪಾರಿಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಸಿ ಹಣ ಪಾವತಿ ಮಾಡುವುದನ್ನು ಕಾಣಬಹುದು.

  • One of India’s success story is digital infrastructure. UPI enables everybody to make transactions in seconds. Millions of Indians use it. Federal Minister for Digital and Transport @Wissing was able to experience the simplicity of UPI payments first hand and is very fascinated! pic.twitter.com/I57P8snF0C

    — German Embassy India (@GermanyinIndia) August 20, 2023 " class="align-text-top noRightClick twitterSection" data=" ">

G20 ಸಭೆಯಲ್ಲಿ ಭಾಗವಹಿಸಲು ಜರ್ಮನ್​ ಸಚಿವ ವೋಲ್ಕರ್​ ವಿಸ್ಸಿಂಗ್​ ಅವರು ಆಗಸ್ಟ್​ 18ರಂದು ಬೆಂಗಳೂರಿನಲ್ಲಿ ಆಗಮಿಸಿದ್ದರು. ಬಳಿಕ ಆಗಸ್ಟ್ 19ರಂದು ಇಲ್ಲಿ ನಡೆದ ಜಿ20 ಸಭೆಯಲ್ಲಿ ಅವರು ಭಾಗವಹಿಸಿದ್ದರು. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್​ ಮಾಡಿದ್ದ ರಾಯಭಾರಿ ಕಚೇರಿ, ಬೆಂಗಳೂರಿನಲ್ಲಿ ಜಿ20 ಸಭೆ ನಡೆಯಲಿದೆ. ಇಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​ ಮತ್ತು ಜರ್ಮನ್ ಸಚಿವ ವೋಲ್ಕರ್​ ವಿಸ್ಸಿಂಗ್ ಅವರು ಭಾರತ ಮತ್ತು ಜರ್ಮನ್​ ನಡುವಿನ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ​. ಇದರ ಜೊತೆಗೆ ಡಿಜಿಟಲ್ ಕ್ಷೇತ್ರದಲ್ಲಿ, ಮುಖ್ಯವಾಗಿ ಕೃತಕ ಬುದ್ಧಿಮತ್ತೆ ಬಗ್ಗೆ ಉಭಯ ರಾಷ್ಟ್ರಗಳ ಸಹಕಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಈ ಮೊದಲು ತಿಳಿಸಿತ್ತು.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಅಥವಾ ಯುಪಿಐ (UPI) ಭಾರತದ ಮೊಬೈಲ್ ಆಧಾರಿತ ವೇಗದ ಹಣ ಪಾವತಿ ವ್ಯವಸ್ಥೆಯಲ್ಲಿ ಒಂದಾಗಿದೆ. ಇದು ಗ್ರಾಹಕರ ವರ್ಚುವಲ್ ಪಾವತಿ ವಿಳಾಸವನ್ನು (VPA) ಬಳಸಿಕೊಂಡು ಕಾರ್ಯ ನಿರ್ವಹಿಸುತ್ತದೆ. ಈ ಮೂಲಕ ಗ್ರಾಹಕರು ತ್ವರಿತವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹಣ ಪಾವತಿ ಮಾಡಲು ಅನುಕೂಲವಾಗುತ್ತದೆ.

ಶ್ರೀಲಂಕಾ, ಫ್ರಾನ್ಸ್, ಯುಎಇ ಮತ್ತು ಸಿಂಗಾಪುರ ಮುಂತಾದ ದೇಶಗಳು ಪಾವತಿ ತಂತ್ರಜ್ಞಾನದಲ್ಲಿ ಭಾರತದೊಂದಿಗೆ ಪಾಲುದಾರಿಕೆ ಹೊಂದಿದೆ. ಯುಪಿಐ ತಂತ್ರಜ್ಞಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ವಿದೇಶ ಪ್ರವಾಸದಲ್ಲಿ ಹೇಳಿದ್ದರು.

ಇದನ್ನೂ ಓದಿ : ಭಾರತದ ಒಂದಿಂಚು ಭೂಮಿಯನ್ನೂ ಚೀನಾ ಆಕ್ರಮಿಸಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು: ರಾಹುಲ್ ಗಾಂಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.