ETV Bharat / bharat

ರಾಜಸ್ಥಾನದಲ್ಲಿ ಗೆಹ್ಲೋಟ್‌ vs ಪೈಲಟ್‌: ಇಬ್ಬರು ನಾಯಕರ ಬೇಡಿಕೆ ಆಲಿಸಲಿರುವ ಖರ್ಗೆ

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್​ ಹಾಗೂ ಮಾಜಿ ಡಿಸಿಎಂ ಸಚಿನ್ ಪೈಲಟ್​ ಅವರೊಂದಿಗೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
author img

By

Published : May 29, 2023, 10:59 AM IST

Updated : May 29, 2023, 11:16 AM IST

ಜೈಪುರ (ರಾಜಸ್ಥಾನ) : ರಾಜಸ್ಥಾನದಲ್ಲಿ ಇದೇ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಅಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ಜನ ಸಂಘರ್ಷ ಯಾತ್ರೆ ನಡೆಸಿದ್ದು, ಅಶೋಕ್‌ ಗೆಹ್ಲೋಟ್‌ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಿ ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರು ಕಾಂಗ್ರೆಸ್‌ ನಾಯಕರ ಬೇಡಿಕೆಗಳನ್ನು ತಾಳ್ಮೆಯಿಂದ ಆಲಿಸಲು ಸಮ್ಮತಿಸಿದ್ದಾರೆ. ಖರ್ಗೆ ಸೋಮವಾರ ದೆಹಲಿಯಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸುವರು ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

  • #WATCH | Congress president Mallikarjun Kharge speaks on meeting with Rajasthan CM Ashok Gehlot and Sachin Pilot in Delhi today, says, "They are coming. We will discuss and decide whatever is in the interest of the party." pic.twitter.com/ROgQKB1ehP

    — ANI (@ANI) May 29, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಕೊನೆ ಉಸಿರಿರುವರೆಗೆ ರಾಜಸ್ಥಾನಕ್ಕಾಗಿ, ಪಕ್ಷಕ್ಕಾಗಿ ದುಡಿಯುತ್ತೇನೆ: ಸಚಿನ್ ಪೈಲಟ್​

ರಾಜಸ್ಥಾನ ಭವನದ ಶಂಕು ಸ್ಥಾಪನೆ: ಮುಖ್ಯಮಂತ್ರಿಗಳ ಕಚೇರಿಯು ಗೆಹ್ಲೋಟ್ ಅವರ ದೆಹಲಿ ಭೇಟಿಯನ್ನು ದೃಢೀಕರಿಸುವ ಕಾರ್ಯಕ್ರಮದ ಮಾಹಿತಿ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ರಾಜಸ್ಥಾನ ಭವನದ ಶಂಕುಸ್ಥಾಪನೆಯನ್ನೂ ಸಿಎಂ ಮಾಡಲಿದ್ದಾರೆ. ಈ ತಿಂಗಳ ಅಂತ್ಯದೊಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಮೂರು ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಆಂದೋಲನ ನಡೆಸುವುದಾಗಿ ಪೈಲಟ್ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಈ ಪ್ರಾಸ್ತಾವಿತ ಸಭೆ ಮಹತ್ವ ಪಡೆದಿದೆ.

ಹಗರಣಗಳ ತನಿಖೆ ನಡೆಸುವಂತೆ ಪೈಲಟ್​ ಒತ್ತಾಯ: ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಪೈಲಟ್ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಹಿರಿಯ ನಾಯಕರ ಪ್ರಕಾರ, ಮೇ 26 ರಂದು ಎಲ್ಲ ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್ ವರಿಷ್ಠರ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ ನಂತರ ಮುಂದೂಡಲಾಯಿತು.

ಇದನ್ನೂ ಓದಿ: ಚುನಾವಣೆಗೆ ಮುನ್ನ ನೀಡುವ ಭರವಸೆ ಈಡೇರಿಸುವ ಪಕ್ಷ ಕಾಂಗ್ರೆಸ್: ಸಿಎಂ ಅಶೋಕ್ ಗೆಹ್ಲೋಟ್

ಕರ್ನಾಟಕದ ಸೂತ್ರ ರಾಜಸ್ಥಾನದಲ್ಲೂ ಬಳಕೆ: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಒಂದೇ ವೇದಿಕೆಗೆ ತರಲು ಈಗ ಹೈಕಮಾಂಡ್, ಗೆಹ್ಲೋಟ್ ಮತ್ತು ಪೈಲಟ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಒಟ್ಟಿಗೆ ತರುವಲ್ಲಿ ಖರ್ಗೆ ಯಶಸ್ವಿಯಾಗಿದ್ದಾರೆ. ಈಗ ಇದೇ ಸೂತ್ರವನ್ನು ರಾಜಸ್ಥಾನದಲ್ಲಿಯೂ ಅಳವಡಿಸಲು ಪಕ್ಷ ಬಯಸಿದೆ ಎಂದು ಹಿರಿಯ ನಾಯಕ ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸಭೆ ಮುಂದೂಡಿಕೆ: ಕೆಲವು ದಿನಗಳ ಹಿಂದೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ಸೇರಿದಂತೆ ಎಲ್ಲ ರಾಜ್ಯಗಳ ಪ್ರಮುಖ ನಾಯಕರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ಸಭೆ ಆಯೋಜಿಸಿತ್ತು. ನಂತರ ಸಭೆಯನ್ನು ಮುಂದೂಡಲಾಗಿತ್ತು.

ಇದನ್ನೂ ಓದಿ: ಸಿಎಂ ಗೆಹ್ಲೋಟ್​ರ ನಾಯಕಿ ಸೋನಿಯಾ ಅಲ್ಲ, ವಸುಂಧರಾ ರಾಜೆ: ಸಚಿನ್ ಪೈಲಟ್ ವಾಗ್ದಾಳಿ

Last Updated : May 29, 2023, 11:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.