ETV Bharat / bharat

ಒಂದೇ ಕುಟುಂಬದ ನಾಲ್ವರನ್ನು ನೇಣಿಗೇರಿಸಿದ ನಕ್ಸಲರು.. ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಪ್ರತೀಕಾರ! - Naxals hang four members of the same family

ಬಿಹಾರದ ಗಯಾ ಜಿಲ್ಲೆಯ ಮೊನ್‌ಬಾರ್ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ನಕ್ಸಲರು ನೇಣಿಗೇರಿಸಿ(Naxal Attack) ಕೊಂದಿದ್ದು, ನಕಲಿ ಎನ್​​ಕೌಂಟರ್​ನಲ್ಲಿ ತಮ್ಮ ಸದಸ್ಯರನ್ನು ಕೊಂದ ಪ್ರತೀಕಾರವಾಗಿ ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾರೆ.

ಪ್ರತಿಕಾರವಾಗಿ ಒಂದೇ ಕುಟುಂಬದ ನಾಲ್ವರನ್ನು ನೇಣಿಗೇರಿಸಿದ ನಕ್ಸಲರು

author img

By

Published : Nov 14, 2021, 5:36 PM IST

ಗಯಾ (ಬಿಹಾರ): ಒಂದೇ ಕುಟುಂಬದ ನಾಲ್ವರನ್ನು ನಕ್ಸಲರು ನೇಣಿಗೇರಿಸಿ ಕೊಂದಿರುವ (Naxal attack) ಅಮಾನುಷ ಕೃತ್ಯ ಬಿಹಾರದ ಗಯಾ ಜಿಲ್ಲೆಯ (Gaya district in Bihar) ಮೊನ್‌ಬಾರ್ ಗ್ರಾಮದಲ್ಲಿ ವರದಿಯಾಗಿದೆ. ಅಷ್ಟೇ ಅಲ್ಲದೆ ಅವರ ಮನೆಯನ್ನೂ ನಕ್ಸಲರು ಸ್ಫೋಟಿಸಿದ್ದಾರೆ.

ಮೃತಪಟ್ಟವರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದು, ಮನೆಯ ಹೊರಗಿದ್ದ ಕೊಟ್ಟಿಗೆಯ ಕಂಬಗಳಿಗೆ ನೇಣು ಬಿಗಿದು ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತರನ್ನು ಮೊನ್‌ಬಾರ್ ಗ್ರಾಮದ ನಿವಾಸಿ ಸರಜೂ ಸಿಂಗ್ ಭೋಕ್ತಾ ಅವರ ಇಬ್ಬರು ಗಂಡು ಮಕ್ಕಳಾದ ಸತೀಂದರ್ ಸಿಂಗ್ ಭೋಕ್ತಾ ಮತ್ತು ಮಹೇಂದ್ರ ಸಿಂಗ್ ಭೋಕ್ತಾ ಹಾಗೂ ಇವರಿಬ್ಬರ ಪತ್ನಿಯರು ಎಂದು ಗುರುತಿಸಲಾಗಿದೆ.

ಒಂದೇ ಕುಟುಂಬದ ನಾಲ್ವರನ್ನು ನೇಣಿಗೇರಿಸಿದ ನಕ್ಸಲರು

ಪ್ರತೀಕಾರ..

ಘಟನಾ ಸ್ಥಳದಲ್ಲಿ ನಕ್ಸಲರು ಅಂಟಿಸಿ ಹೋದ ಪೋಸ್ಟರ್​ವೊಂದು ಸಿಕ್ಕಿದ್ದು, "ನಕಲಿ ಎನ್​​ಕೌಂಟರ್​ನಲ್ಲಿ ತಮ್ಮ ಸದಸ್ಯರನ್ನು ಕೊಂದ ಪ್ರತೀಕಾರವಾಗಿ ಕೃತ್ಯ ಎಸಗಿದ್ದೇವೆ. ಈ ನಾಲ್ಕೂ ಜನರು ಪೊಲೀಸ್ ಮಾಹಿತಿದಾರರು. ಮೊದಲು ನಮ್ಮಗೆ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಸಂಚು ರೂಪಿಸಿದ್ದರು. ಅದು ವಿಫಲವಾದಾಗ ನಮ್ಮ ಇರುವಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು" ಎಂದು ನಕ್ಸಲರು ಬರೆದಿದ್ದಾರೆ.

ಗಯಾ ಜಿಲ್ಲೆಯ ದುಮಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶವನ್ನು ನಕ್ಸಲ್​ ಪೀಡಿತ ವಲಯ ಎಂದು ಪರಿಗಣಿಸಲಾಗಿದೆ. ಕಳೆದ ವರ್ಷ ಸಿಂಗ್ ಭೋಕ್ತಾ ಅವರ ಮನೆಯಲ್ಲಿ ಬೀಡುಬಿಟ್ಟಿದ್ದ ನಾಲ್ವರು ನಕ್ಸಲರನ್ನು ಪೊಲೀಸರು ಎನ್‌ಕೌಂಟರ್ ನಡೆಸಿ ಕೊಂದಿದ್ದರು. ಮೃತ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ನಕ್ಸಲರು ಅಂಟಿಸಿ ಹೋದ ಪೋಸ್ಟರ್
ನಕ್ಸಲರು ಅಂಟಿಸಿ ಹೋದ ಪೋಸ್ಟರ್

ಇದನ್ನೂ ಓದಿ: ಗಡ್ಚಿರೋಲಿ: ಮೋಸ್ಟ್ ವಾಂಟೆಡ್ ಮಿಲಿಂದ್ ತೇಲ್ತುಂಬ್ಡೆ ಸೇರಿ 26 ನಕ್ಸಲರ ಹತ್ಯೆ

ಸ್ಥಳಕ್ಕೆ ಸಿಆರ್‌ಪಿಎಫ್​ ಸಿಬ್ಬಂದಿ, ಜಿಲ್ಲಾ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೊನ್‌ಬಾರ್ ಗ್ರಾಮದ ಸುತ್ತಲೂ ಪೊಲೀಸರು ಸುತ್ತುವರೆದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.