ETV Bharat / bharat

ಆಂಧ್ರಪ್ರದೇಶ: 100ಕ್ಕೂ ಹೆಚ್ಚು ಗ್ಯಾಸ್​ ಸಿಲಿಂಡರ್​ಗಳು ಸ್ಫೋಟ, ಸುತ್ತಮುತ್ತಲ ನಿವಾಸಿಗಳ ಸ್ಥಳಾಂತರ

ದಡ್ಡವಾಡ ಗ್ರಾಮದಲ್ಲಿ 300ಕ್ಕೂ ಹೆಚ್ಚು ಗ್ಯಾಸ್​ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು 100ಕ್ಕೂ ಹೆಚ್ಚು ಸಿಲಿಂಡರ್​ಗಳು ಸ್ಫೋಟಗೊಂಡಿವೆ.

More than 100 gas cylinders exploded in Andra Pradesh
ಗ್ಯಾಸ್​ ಸಿಲಿಂಡರ್​ಗಳು ಸ್ಫೋಟ
author img

By

Published : Sep 2, 2022, 10:35 AM IST

Updated : Sep 2, 2022, 10:52 AM IST

ಗಿಡ್ಡಲುರ್ (ಆಂಧ್ರಪ್ರದೇಶ): ಅನಂತಪುರ-ಗುಂಟೂರು ರಾಷ್ಟ್ರೀಯ ಹೆದ್ದಾರಿಯ ಪ್ರಕಾಶಂ ಜಿಲ್ಲೆಯ ಕೊಮರೋಳು ಮಂಡಲದ ದಡ್ಡವಾಡ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಭಾರಿ ಅಗ್ನಿ ದುರಂತ ಸಂಭವಿಸಿದೆ. 300 ಕ್ಕೂ ಹೆಚ್ಚು ಗ್ಯಾಸ್​ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 100ಕ್ಕೂ ಹೆಚ್ಚು ಸಿಲಿಂಡರ್​ ಸ್ಫೋಟಗೊಂಡಿವೆ. ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಗ್ಯಾಸ್​ ಸಿಲಿಂಡರ್​ಗಳು ಸ್ಫೋಟ

ಸ್ಥಳೀಯರು ಮತ್ತು ಪೊಲೀಸರು ಹೇಳುವ ಪ್ರಕಾರ, ಭಾರತ್ ಗ್ಯಾಸ್ ಸಿಲಿಂಡರ್‌ಗಳೊಂದಿಗೆ ಕರ್ನೂಲ್‌ನಿಂದ ನೆಲ್ಲೂರು ಜಿಲ್ಲೆಯ ಉಳವಪಾಡು ಕಡೆಗೆ ಹೋಗುತ್ತಿದ್ದ ಲಾರಿಯ ಕ್ಯಾಬಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮೋಹನರಾಜು ಲಾರಿ ನಿಲ್ಲಿಸಿ ಕೆಳಗಿಳಿದು ಪರಾರಿಯಾಗಿದ್ದಾನೆ. ಸಂಪೂರ್ಣ ಗ್ಯಾಸ್ ಸಿಲಿಂಡರ್​ಗಳು ಬೆಂಕಿಗಾಹುತಿಯಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಅರ್ಧ ಕಿ.ಮೀ. ದೂರದಲ್ಲಿ ವಾಹನಗಳು ನಿಂತಿದ್ದವು. ಸ್ವಲ್ಪ ಹೊತ್ತಿನ ನಂತರ ಹೆಚ್ಚಿನ ಸಿಲಿಂಡರ್​ಗಳು ಸ್ಫೋಟಗೊಳ್ಳಲು ಆರಂಭಿಸಿದ್ದು, ಪೊಲೀಸರು ಎಚ್ಚೆತ್ತುಕೊಂಡು ಅಲ್ಲಿಗೆ ಯಾರೂ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

30 ಮನೆಗಳ ಜನರ ಸ್ಥಳಾಂತರ: ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಎಚ್ಚೆತ್ತ ಹೆದ್ದಾರಿ ಪೊಲೀಸರು ಅಪಘಾತ ನಡೆದ ಸ್ಥಳದಿಂದ 300 ಮೀಟರ್ ದೂರದ ದಡ್ಡವಾಡದಲ್ಲಿ ಸುಮಾರು 30 ಮನೆಗಳಿಂದ ಜನರನ್ನು ಸ್ಥಳಾಂತರಿಸಿದ್ದಾರೆ. ಸಿಲಿಂಡರ್‌ಗಳು ಸ್ಫೋಟಗೊಳ್ಳುತ್ತಿದ್ದರಿಂದ 200 ಮೀಟರ್ ದೂರದಿಂದಲೇ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಯತ್ನಿಸಿದರು. ಆ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: ನಡ್ಕೊಂಡು ದೇವಸ್ಥಾನಕ್ಕೆ ಹೋಗ್ತಿದ್ದಾಗ ಹರಿದ ಕಾರು: 6 ಮಂದಿ ಸಾವು, ಹಲವರಿಗೆ ಗಾಯ

Last Updated : Sep 2, 2022, 10:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.