ETV Bharat / bharat

ವಾರಣಾಸಿ : ಕಪ್ಪುಬಣ್ಣಕ್ಕೆ ತಿರುಗಿದ ಗಂಗಾಜಲ.. ತನಿಖೆ ಆರಂಭ - ಗಂಗಾ ಮಹಲ್ ಘಾಟ್

ತಾಂತ್ರಿಕ ಕಾರಣಗಳಿಂದ ನೀರು ಕಪ್ಪು ಆಗಿರಬಹುದು. ತನಿಖೆಯ ನಂತರವೇ ಏನಾದರೂ ಹೇಳಬಹುದು ಎಂದು ಅವರು ಹೇಳಿದರು. ಗಂಗಾನದಿಯ ನೀರು ಕಪ್ಪಾಗುತ್ತಿರುವ ಕಾರಣ ಪ್ರವಾಸಿಗರಲ್ಲಿ ಹಾಗೂ ಘಟ್ಟದ ಮೇಲೆ ವಾಸಿಸುವ ಪಾಂಡ ಸಮುದಾಯದವರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ..

Ganga waters
ಗಂಗಾಜಲ
author img

By

Published : Feb 13, 2022, 4:26 PM IST

ವಾರಣಾಸಿ(ಉತ್ತರಪ್ರದೇಶ) : ಪವಿತ್ರವೆಂದು ಪರಿಗಣಿಸಲಾದ ಗಂಗಾ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ವರದಿಯಾಗಿದೆ. ಇದರ ಶುದ್ಧತೆಯನ್ನು ಕಾಪಾಡಲು ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಗಂಗಾ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿರುವ ಚಿತ್ರಗಳು ವೈರಲ್ ಆಗಿವೆ. ಕೋಲಾಹಲವನ್ನು ಸೃಷ್ಟಿಸಿವೆ.

ಈಗ ಮಣಿಕರ್ಣಿಕಾ ಘಾಟ್, ಗಂಗಾ ಮಹಲ್ ಘಾಟ್, ಮೀರ್ ಘಾಟ್ ಮತ್ತು ದಶಾಶ್ವಮೇಧ ಘಾಟ್​ಗಳಲ್ಲಿ ನೀರು ಕೆಟ್ಟಿರುವ ಬಗ್ಗೆ ವರದಿಯಾಗಿದೆ.

ನದಿ ದಡದಲ್ಲಿರುವ ಕಾರ್ಖಾನೆಗಳ ಕೊಳಚೆ ನೀರು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆ ಸ್ಥಳೀಯ ಜಲ ನಿಗಮವು ತಾಂತ್ರಿಕ ತಂಡವನ್ನ ತನಿಖೆಗೆ ಕೇಳಿದೆ.

ಜಲ ನಿಗಮದ ಯೋಜನಾ ನಿರ್ವಹಣಾ ಮಾಲಿನ್ಯ ನಿಯಂತ್ರಣ ಘಟಕದ ಎಸ್‌ ಕೆ ರಂಜನ್, ತಾಂತ್ರಿಕ ತಂಡಕ್ಕೆ ನೀರಿನ ಮಾದರಿಗಳನ್ನು ತನಿಖೆಗೆ ತೆಗೆದುಕೊಳ್ಳಲು ತಿಳಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.

ವಿಶ್ವನಾಥ ಧಾಮದ ಬಳಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಚರಂಡಿ ಪಂಪ್ ಸ್ಥಗಿತಗೊಂಡಿದೆ. ಇದರಿಂದ ಗಂಗಾನದಿಯ ನೀರು ಕಲುಷಿತಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಪಂಪ್ ಚಾಲನೆಯಲ್ಲಿದೆ ಮತ್ತು ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಂಜನ್ ಹೇಳಿಕೆಯನ್ನು ನಿರಾಕರಿಸಿದರು.

ತಾಂತ್ರಿಕ ಕಾರಣಗಳಿಂದ ನೀರು ಕಪ್ಪು ಆಗಿರಬಹುದು. ತನಿಖೆಯ ನಂತರವೇ ಏನಾದರೂ ಹೇಳಬಹುದು ಎಂದು ಅವರು ಹೇಳಿದರು. ಗಂಗಾನದಿಯ ನೀರು ಕಪ್ಪಾಗುತ್ತಿರುವ ಕಾರಣ ಪ್ರವಾಸಿಗರಲ್ಲಿ ಹಾಗೂ ಘಟ್ಟದ ಮೇಲೆ ವಾಸಿಸುವ ಪಾಂಡ ಸಮುದಾಯದವರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಓದಿ: ಹಿಜಾಬ್ ಬಗ್ಗೆ ವಿವಾದ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ: ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.