ನವದೆಹಲಿ : ಕೋವಿಡ್ ಸಂಬಂಧ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ ವಿರುದ್ಧ ಆರೋಪಿ ಮಾಡಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ, ಗಾಂಧಿ ಕುಟುಂಬವು ರಾಜಕೀಯ ಮಾಡಬಾರದ ಪರಿಸ್ಥಿಯಲ್ಲೂ ಸಹ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ಹೇಗೆ ಟೀಕಿಸುತ್ತಿದ್ದಾರೆಂದು ರಾಷ್ಟ್ರವು ಗಮನಿಸುತ್ತಿದೆ ಮತ್ತು ರಾಷ್ಟ್ರವು ಅವರಿಗೆ ತಕ್ಕ ಉತ್ತರ ನೀಡುತ್ತದೆ ಎಂದು ಅವರು ಹೇಳಿದರು.
ರಾಜಕೀಯ ಮಾಡಬಾರದಂತ ಈ ಕೊರೊನಾ ಪರಿಸ್ಥಿಯಲ್ಲಿಯೂ ರಾಜಕೀಯ ಮಾಡುತ್ತಿರುವುದು ಗಾಂಧಿ ಕುಟುಂಬದ ದುರಹಂಕಾರ ಬಿಂಬಿಸುತ್ತದೆ" ಎಂದು ಸಾಂಬಿತ್ ಪಾತ್ರಾ ಹೇಳಿದರು. ಈ ಹಿಂದೆ ಪ್ರಿಯಾಂಕಾ ಗಾಂಧಿ ಅವರು ಕೊರೊನಾ ಸಮಯದಲ್ಲಿ ಜನರ ಬಗ್ಗೆ ಸೂಕ್ಷ್ಮತೆ ತೋರಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ವೈದ್ಯಕೀಯ ಆಮ್ಲಜನಕ, ಔಷಧಿಗಳು ಮತ್ತು ಆಸ್ಪತ್ರೆ ಹಾಸಿಗೆಗಳ ಕೊರತೆಯಿಂದ ಜನರು ಅಳುತ್ತಿರುವಾಗ ಚುನಾವಣಾ ರ್ಯಾಲಿಗಳಲ್ಲಿ ಕೇಂದ್ರ ನಾಯಕರು ನಗುತ್ತಿರುವುದು ಕಂಡು ಬರುತ್ತಿದೆ ಎಂದಿದ್ದರು. ಕೇಂದ್ರವು ಸಾರ್ವಜನಿಕರ ಆರೋಗ್ಯಕ್ಕಿಂತ ಹೆಚ್ಚಾಗಿ ತನ್ನ ರಾಜಕೀಯ ಶಕ್ತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ ಎಂದು ಟೀಕಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕೇಂದ್ರದ ಲಸಿಕೆ ತಂತ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೇಂದ್ರ ಸರ್ಕಾರದ ಈ ನೀತಿ ನೋಟ್ಬ್ಯಾನ್ ಮಾಡಿದ್ದಕ್ಕಿಂತ ಏನೂ ಕಡಿಮೆ ಇಲ್ಲ, ಬಡವರು ಕ್ಯೂನಲ್ಲಿ ನಿಲ್ಲುತ್ತಾರೆ. ಹಣ, ಆರೋಗ್ಯ, ಜೀವನಕ್ಕಾಗಿ ಹರಸಾಹಸ ಪಡುತ್ತಾರೆ. ಆದರೆ, ಉದ್ಯಮಿಗಳು ಅದರ ಲಾಭ ಪಡೆಯುತ್ತಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.