ನವದೆಹಲಿ: ಲಂಚ ಪ್ರಕರಣ ಸಂಬಂಧ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಗೇಲ್- GAIL) ನಿರ್ದೇಶಕ ಇ.ಎಸ್ ರಂಗನಾಥನ್ ಹಾಗೂ ಇತರ ಐದು ಮಂದಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಬಂಧಿಸಿದೆ.
ಗೇಲ್ ಕಂಪನಿಯಿಂದ ಮಾರಾಟ ಮಾಡುವ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸುವ ಖಾಸಗಿ ಕಂಪನಿಗಳಿಂದ ಲಂಚ ಪಡೆದು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ರಂಗನಾಥನ್ ವಿರುದ್ಧ ಪ್ರಕರಣ ದಾಖಲಾಗಿದ್ದು. ನಿನ್ನೆ ದೆಹಲಿ, ನೋಯ್ಡಾ, ಪಂಚಕುಲ, ಕರ್ನಾಲ್ ಹಾಗೂ ಗುರುಗ್ರಾಮ್ನಲ್ಲಿ ಆರೋಪಿಗಳಿಗೆ ಸೇರಿದ ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತ್ತು.
ಇದನ್ನೂ ಓದಿ: ಫೈನಾನ್ಸಿಯರ್ ಟಾರ್ಗೆಟ್ ಮಾಡಿ ಹಣ ವಸೂಲಿ: ಚೋಟಾ ಟೈಗರ್ ಅರೆಸ್ಟ್
ಶೋಧ ಕಾರ್ಯಾಚರಣೆ ವೇಳೆ 1.29 ಕೋಟಿ ನಗದು, 1.30 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದ ಸಿಬಿಐ ಇದರ ಬೆನ್ನಲ್ಲೇ ರಂಗನಾಥನ್ ಹಾಗೂ ಪವನ್ ಗೌರ್, ಎನ್ ರಾಮಕೃಷ್ಣನ್ ನೀರ್, ರಾಜೇಶ್ ಕುಮಾರ್, ಸೌರಭ್ ಗುಪ್ತಾ, ಆದಿತ್ಯ ಬನ್ಸಾಲ್ ಎಂಬವರನ್ನು ಅರೆಸ್ಟ್ ಮಾಡಿದೆ.