ಶ್ರೀಹರಿಕೋಟಾ (ಆಂಧ್ರಪ್ರದೇಶ): ಇಸ್ರೋದ ಬಹು ನಿರೀಕ್ಷಿತ ಮಾನವ ಸಹಿತ ಗಗನಯಾನ ಯೋಜನೆಯ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಸಿಬ್ಬಂದಿ ಮಾಡ್ಯೂಲ್ ಉಡಾವಣೆ ಸಮಯವನ್ನು ಇಸ್ರೋ ಮುಂದೂಡಿತ್ತು. ಸ್ವಲ್ಪ ಸಮಯದ ಬಳಿಕ ಈ ಪ್ರಕ್ರಿಯೆ ಪುನಾರಂಭಗೊಂಡಿತ್ತು.
ಕ್ರ್ಯೂ ಮ್ಯಾಡೂಲ್ ವಶಕ್ಕೆ ಪಡೆದ ಭಾರತೀಯ ನೌಕಾಪಡೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಗಗನ್‌ಯಾನ್ ಮಿಷನ್‌ನ ಮೊದಲ ಪರೀಕ್ಷಾ ಹಾರಾಟ ಯಶಸ್ವಿಯಾಗಿದೆ. ಹವಾಮಾನ ವೈಪರೀತ್ಯ ಮತ್ತು ತಾಂತ್ರಿಕ ದೋಷದಿಂದ ಇಂದು ಉಡಾವಣೆಯಾಗಬೇಕಿದ್ದ ಮಿಷನ್ ಕೊಂಚ ತಡವಾಗಿ ಪ್ರಾರಂಭಿಸಲಾಗಿದೆ. 17 ಕಿ.ಮೀ. ಎತ್ತರದಲ್ಲಿ ಸಿಬ್ಬಂದಿ ಮಾಡ್ಯೂಲ್ ಮತ್ತು ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಪ್ರತ್ಯೇಕಗೊಂಡಿತ್ತು. ಕ್ರ್ಯೂ ಮ್ಯಾಡೂಲ್ ಅನ್ನು ಯಶಸ್ವಿಯಾಗಿ ಭೂಮಿಗೆ ಕರೆತರಲಾಗಿದೆ. ಜೊತೆಗೆ ಭಾರತೀಯ ನೌಕಾಪಡೆಯು ಶನಿವಾರ ಮಧ್ಯಾಹ್ನ ಇಲ್ಲಿನ ಬಂಗಾಳ ಕೊಲ್ಲಿ ಸಮುದ್ರದಲ್ಲಿ ಕ್ರ್ಯೂ ಮಾಡ್ಯೂಲ್ ಬಳಿಗೆ ತೆರಳಿ ಅದನ್ನು ಕೂಡ ಯಶಸ್ವಿಯಾಗಿ ವಶಪಡಿಸಿಕೊಂಡಿದೆ.
ಕ್ರ್ಯೂ ಎಸ್ಕೇಪ್ ಸಿಸ್ಟಮ್ ಎಂದರೇನು?: ಕ್ರ್ಯೂ ಎಸ್ಕೇಪ್ ಸಿಸ್ಟಮ್ ಗಗನಯಾತ್ರಿಗಳ ಸಿಬ್ಬಂದಿ ಮಾಡ್ಯೂಲ್ ಅನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ತರುವ ಪ್ರಕ್ರಿಯೆಯಾಗಿದೆ. ಇದು ನಾಲ್ಕು ಬೂಸ್ಟರ್ ಮೋಟಾರ್‌ಗಳನ್ನು ಹೊಂದಿದೆ. ಇದು ಕ್ರ್ಯೂ ಮಾಡ್ಯೂಲ್ ಅನ್ನು ಸಾಗಿಸುವ ರಾಕೆಟ್‌ನಿಂದ ಪ್ರತ್ಯೇಕವಾಗುತ್ತದೆ. ನಂತರ ಉಡಾವಣಾ ಕೇಂದ್ರದಿಂದ 14 ಕಿ.ಮೀ. ದೂರದ ಸಮುದ್ರಕ್ಕೆ ಅಪ್ಪಳಿಸುತ್ತದೆ.
ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಪ್ರಮುಖವೇಕೆ?: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರಷ್ಯಾದ ಸೋಯುಜ್ MS-10 ಮಿಷನ್ ಅನ್ನು ಅಕ್ಟೋಬರ್ 11, 2018 ರಂದು ಪ್ರಾರಂಭಿಸಲಾಯಿತು. ಇದರಲ್ಲಿ ರೋಸ್ಕೊಸ್ಮಾಸ್ ಗಗನಯಾತ್ರಿ ಅಲೆಕ್ಸಿ ಒವ್ಚಿನಿನ್ ಮತ್ತು ನಾಸಾ ಗಗನಯಾತ್ರಿ ನಿಕ್ ಹೇಗ್ ಸೇರಿದ್ದಾರೆ. ಟೇಕ್ ಆಫ್ ಆದ ಕೆಲವು ನಿಮಿಷಗಳ ನಂತರ ಬೂಸ್ಟರ್ ವಿಫಲವಾಗಿದೆ ಎಂದು ಮಿಷನ್ ಕಂಟ್ರೋಲ್ ಘೋಷಿಸಿತು. ಇದು 35 ವರ್ಷಗಳಲ್ಲಿ ರಷ್ಯಾದ ಮೊದಲ ಬೂಸ್ಟರ್ ಅಪಘಾತವಾಗಿದೆ.
'ಲಾಂಚ್ ಎಸ್ಕೇಪ್ ಸಿಸ್ಟಮ್' ಕಾರಣದಿಂದಾಗಿ ಸಿಬ್ಬಂದಿ ಹೊರಹಾಕುವಲ್ಲಿ ಯಶಸ್ವಿಯಾದರು. ಅವರು ಸಿಬ್ಬಂದಿ ಕ್ಯಾಪ್ಸುಲ್ ಅನ್ನು ಉಡಾವಣಾ ವಾಹನದಿಂದ ಎಳೆದರು. ಗಗನಯಾನ ಯೋಜನೆಗಾಗಿ ಇಸ್ರೋ ತನ್ನ ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿಪಡಿಸಿದ 2022 ರ ಮಾರ್ಗಸೂಚಿಗಳನ್ನು ಬದಲಾಯಿಸಲು ಕೇಂದ್ರ ಸರ್ಕಾರಕ್ಕೆ ಇದು ಮೊದಲು ಮನವರಿಕೆ ಮಾಡಿತ್ತು.
ಸಿಬ್ಬಂದಿ ಮಾಡ್ಯೂಲ್ ಎಂದರೇನು?: ಸಿಬ್ಬಂದಿ ಮಾಡ್ಯೂಲ್ ಅನ್ನು ಗಗನಯಾನ ಎಂದು ಕರೆಯಲಾಗುತ್ತದೆ. ಇದು pressurized ಕ್ಯಾಬಿನ್ ಅನ್ನು ಹೊಂದಿರುತ್ತದೆ. ಹೀಗಾಗಿ ಬಾಹ್ಯ ವಾತಾವರಣ ಅಥವಾ ಬಾಹ್ಯಾಕಾಶದಿಂದ ಗಗನಯಾತ್ರಿಗಳಿಗೆ ಪರಿಣಾಮ ಬೀರುವುದಿಲ್ಲ. ಅದರೊಳಗೆ ಫುಡ್ ಹೀಟರ್, ಆಹಾರ ಸಂಗ್ರಹಣೆ, ಶೌಚಾಲಯ ಮುಂತಾದ ವಸ್ತುಗಳಿರುತ್ತವೆ. ಅದರ ಪರೀಕ್ಷೆಯನ್ನು ಈಗಾಗಲೇ ಮಾಡಲಾಗಿದೆ.
ಎಷ್ಟು ಪರೀಕ್ಷಾ ವಿಧಾನಗಳಿವೆ?: ನಾಲ್ಕು ಪರೀಕ್ಷಾ ವಿಧಾನಗಳಿವೆ. ಇಂದು ಟಿವಿ-ಡಿ1 ಹೋಗಬೇಕಾಗಿತ್ತು. ಆದ್ರೆ ತಾಂತ್ರಿಕ ದೋಷದಿಂದ ಮಿಷನ್ ಅನ್ನು ತಡೆಹಿಡಿಯಲಾಗಿದೆ. ಈ ಮಿಷನ್ ನಂತರ D2, D3 ಮತ್ತು D4 ಗೆ ಕಳುಹಿಸಲಾಗುತ್ತದೆ.
ಪರೀಕ್ಷೆಯಲ್ಲಿ ಯಾವ ಎಂಜಿನ್ ಅನ್ನು ಬಳಸಲಾಗುತ್ತದೆ?: ಏಕ ಹಂತದ ಲಿಕ್ವಿಡ್ ರಾಕೆಟ್ ಅನ್ನು ಪರೀಕ್ಷಾ ವಾಹನವಾಗಿ ಬಳಸಲಾಗುತ್ತದೆ. ಇದು ಸಿಬ್ಬಂದಿ ಮಾಡ್ಯೂಲ್ ಮತ್ತು ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಅನ್ನು ಮೇಲಕ್ಕೆ ಹೊತ್ತು ಸಾಗಿಸುತ್ತದೆ. 17 ಕಿ.ಮೀ. ಎತ್ತರದಲ್ಲಿ ಸಿಬ್ಬಂದಿ ಮಾಡ್ಯೂಲ್ ಮತ್ತು ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಪ್ರತ್ಯೇಕಗೊಳ್ಳುತ್ತದೆ. ಇದನ್ನು ಆರೋಹಣ ಹಂತ ಎಂದು ಕರೆಯಲಾಗುತ್ತದೆ.
ಕ್ರ್ಯೂ ಮಾಡ್ಯೂಲ್ ಇಳಿಯುವುದು ಎಲ್ಲಿ?: 16.7 ಕಿ.ಮೀ. ಎತ್ತರವನ್ನು ತಲುಪಿದ ತಕ್ಷಣ ಕ್ರ್ಯೂ ಮಾಡ್ಯೂಲ್‌ನ ಸಣ್ಣ ಪ್ಯಾರಾಚೂಟ್‌ಗಳು ಸಕ್ರಿಯಗೊಳ್ಳುತ್ತದೆ. ಎತ್ತರವು 1000 ಮೀಟರ್‌ಗಿಂತ ಕಡಿಮೆಯಿದ್ದರೆ ಮುಖ್ಯ ಪ್ಯಾರಾಚೂಟ್ ಅನ್ನು ಸಕ್ರಿಯಗೊಳಿಸಲಾಗುತ್ತದೆ. ಶ್ರೀಹರಿಕೋಟಾದಿಂದ ಸುಮಾರು 10 ಕಿ.ಮೀ. ದೂರದ ಬಂಗಾಳಕೊಲ್ಲಿಯಲ್ಲಿ ಕ್ರ್ಯೂ ಮಾಡ್ಯೂಲ್ ಸಮುದ್ರದಲ್ಲಿ ಇಳಿಯಲಿದೆ. ಭಾರತೀಯ ನೌಕಾಪಡೆಯು ಕ್ರ್ಯೂ ಮಾಡ್ಯೂಲ್ ಅನ್ನು ಸಮುದ್ರದಿಂದ ಸುರಕ್ಷಿತವಾಗಿ ಹೊರತೆಗೆಯುತ್ತಾರೆ.
ಎಷ್ಟು ಎತ್ತರಕ್ಕೆ ಜಿಗಿಯಲಿದ್ದಾರೆ ಗಗನಯಾತ್ರಿಗಳು?: 'ಗಗನಯಾನ' ಮಿಷನ್‌ನಲ್ಲಿ ಮೂರು ಗಗನಯಾತ್ರಿಗಳನ್ನು ಮೂರು ದಿನಗಳ ಕಾಲ ಭೂಮಿಯಿಂದ 400 ಕಿಮೀ ಎತ್ತರದ ಕಕ್ಷೆಗೆ ಕಳುಹಿಸಲಾಗುತ್ತದೆ. ಇದಾದ ನಂತರ ಸಿಬ್ಬಂದಿ ಮಾಡ್ಯೂಲ್ ಅನ್ನು ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಸಲಾಗುವುದು. ಇದಕ್ಕಾಗಿ ವಾಯುಪಡೆಯಿಂದ ಮೂವರೂ ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮಿಷನ್‌ನ ಯಶಸ್ಸು ಭಾರತವನ್ನು ನಾಲ್ಕನೇ ರಾಷ್ಟ್ರವನ್ನಾಗಿ ಮಾಡುತ್ತದೆ. ಅಮೆರಿಕ, ಚೀನಾ ಮತ್ತು ರಷ್ಯಾ ಈ ಹಿಂದೆ ಈ ಸಾಧನೆ ಮಾಡಿವೆ.
ಮೊದಲ ಮಾನವರಹಿತ ಕಾರ್ಯಾಚರಣೆ ಯಾವಾಗ?: ಗಗನಯಾನ ಮಿಷನ್ ಅಡಿಯಲ್ಲಿ ಇಸ್ರೋ ಮುಂದಿನ ವರ್ಷದ ಆರಂಭದಲ್ಲಿ ಮೊದಲ ಮಾನವರಹಿತ ಮಿಷನ್ ಅನ್ನು ಯೋಜಿಸಿದೆ. ಇದರಲ್ಲಿ ಹುಮನಾಯ್ಡ್ ರೋಬೋಟ್ ವ್ಯೋಮಿತ್ರವನ್ನು ಕಳುಹಿಸಲಾಗುವುದು. ಅದರ ಯಶಸ್ಸಿನ ನಂತರ, ಮಾನವಸಹಿತ ಮಿಷನ್ ಆರಂಭಿಸಲಾಗುವುದು, ಇದರಲ್ಲಿ ಭಾರತೀಯ ವಿಜ್ಞಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
ಈ ಯೋಜನೆ ಆರಂಭಗೊಂಡಿರುವುದು ಯಾವಾಗ ?: ಪ್ರಧಾನಿಯವರು 15 ಆಗಸ್ಟ್ 2018 ರಂದು ಈ ಕಾರ್ಯಾಚರಣೆಯನ್ನು ಘೋಷಿಸಿದ್ದರು. ಇದು 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕೋವಿಡ್‌ನಿಂದಾಗಿ ವಿಳಂಬವಾಗಿದೆ. ಈ ಮೊದಲು 2022ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಅನನ್ಯ ಕಾರಣದಿಂದ 2023ಕ್ಕೆ ಮುಂದೂಡಲಾಗಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರಷ್ಯಾದ ಸೋಯುಜ್ MS-10 ಮಿಷನ್ ಅನ್ನು ಅಕ್ಟೋಬರ್ 11, 2018 ರಂದು ಪ್ರಾರಂಭಿಸಲಾಯಿತು. ಇದರಲ್ಲಿ ರೋಸ್ಕೊಸ್ಮಾಸ್ ಗಗನಯಾತ್ರಿ ಅಲೆಕ್ಸಿ ಒವ್ಚಿನಿನ್ ಮತ್ತು ನಾಸಾ ಗಗನಯಾತ್ರಿ ನಿಕ್ ಹೇಗ್ ಸೇರಿದ್ದಾರೆ. ಟೇಕ್ ಆಫ್ ಆದ ಕೆಲವು ನಿಮಿಷಗಳ ನಂತರ ಬೂಸ್ಟರ್ ವಿಫಲವಾಗಿದೆ ಎಂದು ಮಿಷನ್ ಕಂಟ್ರೋಲ್ ಘೋಷಿಸಿತು. ಇದು 35 ವರ್ಷಗಳಲ್ಲಿ ರಷ್ಯಾದ ಮೊದಲ ಬೂಸ್ಟರ್ ಅಪಘಾತವಾಗಿದೆ.
'ಲಾಂಚ್ ಎಸ್ಕೇಪ್ ಸಿಸ್ಟಮ್' ಕಾರಣದಿಂದಾಗಿ ಸಿಬ್ಬಂದಿ ಹೊರಹಾಕುವಲ್ಲಿ ಯಶಸ್ವಿಯಾದರು. ಅವರು ಸಿಬ್ಬಂದಿ ಕ್ಯಾಪ್ಸುಲ್ ಅನ್ನು ಉಡಾವಣಾ ವಾಹನದಿಂದ ಎಳೆದರು. ಗಗನಯಾನ ಯೋಜನೆಗಾಗಿ ಇಸ್ರೋ ತನ್ನ ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿಪಡಿಸಿದ 2022 ರ ಮಾರ್ಗಸೂಚಿಗಳನ್ನು ಬದಲಾಯಿಸಲು ಕೇಂದ್ರ ಸರ್ಕಾರಕ್ಕೆ ಇದು ಮೊದಲು ಮನವರಿಕೆ ಮಾಡಿತ್ತು.
ಸಿಬ್ಬಂದಿ ಮಾಡ್ಯೂಲ್ ಎಂದರೇನು?: ಸಿಬ್ಬಂದಿ ಮಾಡ್ಯೂಲ್ ಅನ್ನು ಗಗನಯಾನ ಎಂದು ಕರೆಯಲಾಗುತ್ತದೆ. ಇದು pressurized ಕ್ಯಾಬಿನ್ ಅನ್ನು ಹೊಂದಿರುತ್ತದೆ. ಹೀಗಾಗಿ ಬಾಹ್ಯ ವಾತಾವರಣ ಅಥವಾ ಬಾಹ್ಯಾಕಾಶದಿಂದ ಗಗನಯಾತ್ರಿಗಳಿಗೆ ಪರಿಣಾಮ ಬೀರುವುದಿಲ್ಲ. ಅದರೊಳಗೆ ಫುಡ್ ಹೀಟರ್, ಆಹಾರ ಸಂಗ್ರಹಣೆ, ಶೌಚಾಲಯ ಮುಂತಾದ ವಸ್ತುಗಳಿರುತ್ತವೆ. ಅದರ ಪರೀಕ್ಷೆಯನ್ನು ಈಗಾಗಲೇ ಮಾಡಲಾಗಿದೆ.
ಎಷ್ಟು ಪರೀಕ್ಷಾ ವಿಧಾನಗಳಿವೆ?: ನಾಲ್ಕು ಪರೀಕ್ಷಾ ವಿಧಾನಗಳಿವೆ. ಇಂದು ಟಿವಿ-ಡಿ1 ಹೋಗಬೇಕಾಗಿತ್ತು. ಆದ್ರೆ ತಾಂತ್ರಿಕ ದೋಷದಿಂದ ಮಿಷನ್ ಅನ್ನು ತಡೆಹಿಡಿಯಲಾಗಿದೆ. ಈ ಮಿಷನ್ ನಂತರ D2, D3 ಮತ್ತು D4 ಗೆ ಕಳುಹಿಸಲಾಗುತ್ತದೆ.
ಪರೀಕ್ಷೆಯಲ್ಲಿ ಯಾವ ಎಂಜಿನ್ ಅನ್ನು ಬಳಸಲಾಗುತ್ತದೆ?: ಏಕ ಹಂತದ ಲಿಕ್ವಿಡ್ ರಾಕೆಟ್ ಅನ್ನು ಪರೀಕ್ಷಾ ವಾಹನವಾಗಿ ಬಳಸಲಾಗುತ್ತದೆ. ಇದು ಸಿಬ್ಬಂದಿ ಮಾಡ್ಯೂಲ್ ಮತ್ತು ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಅನ್ನು ಮೇಲಕ್ಕೆ ಹೊತ್ತು ಸಾಗಿಸುತ್ತದೆ. 17 ಕಿ.ಮೀ. ಎತ್ತರದಲ್ಲಿ ಸಿಬ್ಬಂದಿ ಮಾಡ್ಯೂಲ್ ಮತ್ತು ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಪ್ರತ್ಯೇಕಗೊಳ್ಳುತ್ತದೆ. ಇದನ್ನು ಆರೋಹಣ ಹಂತ ಎಂದು ಕರೆಯಲಾಗುತ್ತದೆ.
ಕ್ರ್ಯೂ ಮಾಡ್ಯೂಲ್ ಇಳಿದಿದ್ದು ಎಲ್ಲಿ?: 16.7 ಕಿ.ಮೀ. ಎತ್ತರವನ್ನು ತಲುಪಿದ ತಕ್ಷಣ ಕ್ರ್ಯೂ ಮಾಡ್ಯೂಲ್‌ನ ಸಣ್ಣ ಪ್ಯಾರಾಚೂಟ್‌ಗಳು ಸಕ್ರಿಯಗೊಳ್ಳುತ್ತದೆ. ಎತ್ತರವು 1000 ಮೀಟರ್‌ಗಿಂತ ಕಡಿಮೆಯಿದ್ದರೆ ಮುಖ್ಯ ಪ್ಯಾರಾಚೂಟ್ ಅನ್ನು ಸಕ್ರಿಯಗೊಳಿಸಲಾಯಿತು. ಶ್ರೀಹರಿಕೋಟಾದಿಂದ ಸುಮಾರು 10 ಕಿ.ಮೀ. ದೂರದ ಬಂಗಾಳಕೊಲ್ಲಿಯಲ್ಲಿ ಕ್ರ್ಯೂ ಮಾಡ್ಯೂಲ್ ಸಮುದ್ರದಲ್ಲಿ ಇಳಿಯಿತು. ಭಾರತೀಯ ನೌಕಾಪಡೆಯು ಕ್ರ್ಯೂ ಮಾಡ್ಯೂಲ್ ಅನ್ನು ಸಮುದ್ರದಿಂದ ಸುರಕ್ಷಿತವಾಗಿ ಹೊರತೆಗೆಯಿತು.
ಎಷ್ಟು ಎತ್ತರಕ್ಕೆ ಜಿಗಿಯಲಿದ್ದಾರೆ ಗಗನಯಾತ್ರಿಗಳು?: 'ಗಗನಯಾನ' ಮಿಷನ್‌ನಲ್ಲಿ ಮೂರು ಗಗನಯಾತ್ರಿಗಳನ್ನು ಮೂರು ದಿನಗಳ ಕಾಲ ಭೂಮಿಯಿಂದ 400 ಕಿಮೀ ಎತ್ತರದ ಕಕ್ಷೆಗೆ ಕಳುಹಿಸಲಾಗುತ್ತದೆ. ಇದಾದ ನಂತರ ಸಿಬ್ಬಂದಿ ಮಾಡ್ಯೂಲ್ ಅನ್ನು ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಸಲಾಗುವುದು. ಇದಕ್ಕಾಗಿ ವಾಯುಪಡೆಯಿಂದ ಮೂವರೂ ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮಿಷನ್‌ನ ಯಶಸ್ಸು ಭಾರತವನ್ನು ನಾಲ್ಕನೇ ರಾಷ್ಟ್ರವನ್ನಾಗಿ ಮಾಡುತ್ತದೆ. ಅಮೆರಿಕ, ಚೀನಾ ಮತ್ತು ರಷ್ಯಾ ಈ ಹಿಂದೆ ಈ ಸಾಧನೆ ಮಾಡಿದೆ.
ಮೊದಲ ಮಾನವರಹಿತ ಕಾರ್ಯಾಚರಣೆ ಯಾವಾಗ?: ಗಗನಯಾನ ಮಿಷನ್ ಅಡಿಯಲ್ಲಿ ಇಸ್ರೋ ಮುಂದಿನ ವರ್ಷದ ಆರಂಭದಲ್ಲಿ ಮೊದಲ ಮಾನವರಹಿತ ಮಿಷನ್ ಅನ್ನು ಯೋಜಿಸಿದೆ. ಇದರಲ್ಲಿ ಹುಮನಾಯ್ಡ್ ರೋಬೋಟ್ ವ್ಯೋಮಿತ್ರವನ್ನು ಕಳುಹಿಸಲಾಗುವುದು. ಅದರ ಯಶಸ್ಸಿನ ನಂತರ, ಮಾನವಸಹಿತ ಮಿಷನ್ ಆರಂಭಿಸಲಾಗುವುದು, ಇದರಲ್ಲಿ ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
ಈ ಯೋಜನೆ ಆರಂಭಗೊಂಡಿರುವುದು ಯಾವಾಗ ?: ಪ್ರಧಾನಿಯವರು 15 ಆಗಸ್ಟ್, 2018 ರಂದು ಈ ಕಾರ್ಯಾಚರಣೆಯನ್ನು ಘೋಷಿಸಿದ್ದರು. ಇದು 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕೋವಿಡ್‌ನಿಂದಾಗಿ ವಿಳಂಬವಾಗಿದೆ. ಈ ಮೊದಲು 2022ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಬಳಿಕ 2023ಕ್ಕೆ ಮುಂದೂಡಲಾಗಿತ್ತು.
ಓದಿ: 'ಗಗನಯಾನ' ಪರೀಕ್ಷಾರ್ಥ ಪ್ರಯೋಗದ ಸಮಯ ಬದಲು: ಸಾರ್ವಜನಿಕರಿಗೆ ವೀಕ್ಷಣೆಯ ಅವಕಾಶ, ನೋಂದಣಿ ಕ್ರಮ ಹೀಗೆ..