ಪುರಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯ ಥೀಮ್ ಲೋಗೋವನ್ನು ಪ್ರಖ್ಯಾತ ಕಲಾವಿದ ಸುದರ್ಶನ್ ಪಟ್ನಾಯಕ್ ಮರಳಿನಲ್ಲಿ ಆಕರ್ಷಕವಾಗಿ ಮೂಡಿಸಿದ್ದಾರೆ. ಕೊನಾರ್ಕ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಉತ್ಸವದಲ್ಲಿ ಅವರ ಕಲೆ ಅನಾವರಣಗೊಂಡಿದೆ. ಎರಡು ದಿನಗಳ ಕಾಲ ಶ್ರಮಿಸಿ ವಿದ್ಯಾರ್ಥಿಗಳೊಂದಿಗೆ ಜಿ 20 ಲೋಗೋ ಮೂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪಟ್ನಾಯಕ್, 'ವಸುಧೈವ ಕುಟುಂಬಕಂ ಎಂಬ ಸಂದೇಶ ಸಾವಿರಾರು ವರ್ಷಗಳ ನಮ್ಮ ಪ್ರಾಚೀನ ಜ್ಞಾನ ಮತ್ತು ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಭಾರತೀಯರಿಗೆಲ್ಲ ತಿಳಿದಿರುವ, ಪ್ರಾಚೀನ ಜ್ಞಾನವನ್ನು ಜಿ 20 ಶೃಂಗಸಭೆಯ ಮೂಲಕ ಪ್ರಪಂಚಕ್ಕೆ ಪರಿಚಯಿಸುತ್ತಿದ್ದೇವೆ' ಎಂದರು.
-
On the historical day of India assuming G20 Presidency today, 1 December 2022, My SandArt of #G20India logo & theme of #VasudhaivaKutumbakam One Earth. One Family. One Future at International Sand Art Festival in #Konark, #Odisha . @g20org pic.twitter.com/FxuzHaEobG
— Sudarsan Pattnaik (@sudarsansand) December 1, 2022 " class="align-text-top noRightClick twitterSection" data="
">On the historical day of India assuming G20 Presidency today, 1 December 2022, My SandArt of #G20India logo & theme of #VasudhaivaKutumbakam One Earth. One Family. One Future at International Sand Art Festival in #Konark, #Odisha . @g20org pic.twitter.com/FxuzHaEobG
— Sudarsan Pattnaik (@sudarsansand) December 1, 2022On the historical day of India assuming G20 Presidency today, 1 December 2022, My SandArt of #G20India logo & theme of #VasudhaivaKutumbakam One Earth. One Family. One Future at International Sand Art Festival in #Konark, #Odisha . @g20org pic.twitter.com/FxuzHaEobG
— Sudarsan Pattnaik (@sudarsansand) December 1, 2022
ಪ್ರತಿವರ್ಷ ಡಿಸೆಂಬರ್ 1ರಿಂದ 5ರವರೆಗೆ ಒಡಿಶಾ ಸರ್ಕಾರ ಕೊನಾರ್ಕ್ನಲ್ಲಿ ಅಂತಾರಾಷ್ಟ್ರೀಯ ಮರಳು ಕಲೆ ಉತ್ಸವ ಏರ್ಪಡಿಸುತ್ತದೆ. ಈ ಬಾರಿ ಅನೇಕ ವಿದೇಶಿಗರು ಕೂಡ ಭಾಗಿಯಾಗಿದ್ದಾರೆ. ಐದು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಐದು ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 2018 ರಲ್ಲಿ ಪೋಸ್ಟ್ನಲ್ಲಿ ಮಾಡಿದ 500 ರೂ ಮನಿಆರ್ಡರ್ 2022 ರಲ್ಲಿ ಮನೆಗೆ ಬಂತು!