ETV Bharat / bharat

ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಜಿ - 20 ನಾಯಕರಿಗೆ ಒತ್ತಾಯ

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸುವ ಪ್ರಕ್ರಿಯೆಗೆ ವೇಗ ನೀಡಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಂತಾರಾಷ್ಟ್ರೀಯ ಸಂಘಟನೆಗಳ ಗುಂಪು ಜಿ-20 ರಾಷ್ಟ್ರಗಳ ನಾಯಕರಿಗೆ ಪತ್ರ ಬರೆದು ಒತ್ತಾಯಿಸಿದೆ.

author img

By ETV Bharat Karnataka Team

Published : Sep 6, 2023, 7:46 PM IST

g20-leaders-urged-to-take-urgent-action-for-implementation-of-sdgs
ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಜಿ-20 ನಾಯಕರಿಗೆ ಒತ್ತಾಯ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಜಿ-20 ಶೃಂಗಸಭೆ ನಿಗದಿಯಾಗಿದೆ. ಈ ಶೃಂಗದ ಮುಂಚಿತವಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಗುಂಪು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (UNs Sustainable Development Goals) ಪೂರೈಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಅಂತರ್​ ಸರ್ಕಾರಿ ವೇದಿಕೆಯ ಎಲ್ಲ ನಾಯಕರಿಗೆ ಪತ್ರ ಬರೆದಿದೆ.

ನಿಮ್ಮ ತುರ್ತು ಕ್ರಮವನ್ನು ಕೋರಲು ನಾವು ಜಿ-20 ನಾಯಕರ ಶೃಂಗಸಭೆಗೆ ಮುಂಚಿತವಾಗಿ ಪತ್ರ ಬರೆಯುತ್ತಿದ್ದೇವೆ. ಇದೇ ಮೊದಲ ಬಾರಿಗೆ ಪೀಳಿಗೆಯೊಂದರಲ್ಲಿ ತೀವ್ರ ಬಡತನದಲ್ಲಿ ವಾಸಿಸುವ ಜನರ ಸಂಖ್ಯೆ ಹೆಚ್ಚುತ್ತಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಪತ್ರಕ್ಕೆ ಗ್ಲೋಬಲ್ ಸಿಟಿಜನ್‌ನ ವಕೀಲರ ಉಪಾಧ್ಯಕ್ಷ ಫ್ರೆಡ್ರಿಕ್ ರೋಡರ್, ಒನ್ ಕ್ಯಾಂಪೇನ್‌ನಲ್ಲಿ ನೀತಿ ನಿರ್ದೇಶಕ ಆಮಿ ಡಾಡ್, ಪ್ಯಾಂಡೆಮಿಕ್ ಆಕ್ಷನ್ ನೆಟ್‌ವರ್ಕ್‌ನ ಸಹ-ಸಂಸ್ಥಾಪಕ, ಕಾರ್ಯನಿರ್ವಾಹಕ ನಿರ್ದೇಶಕ ಎಲೋಯಿಸ್ ಟಾಡ್, ಇ3ಜಿ (Third Generation Environmentalism - E3G) ಶುದ್ಧ ಆರ್ಥಿಕತೆಯ ಸಹಾಯಕ ನಿರ್ದೇಶಕ ರೋನನ್ ಪಾಲ್ಮರ್​ ಸಹಿ ಹಾಕಿದ್ದಾರೆ.

ಸೆಪ್ಟೆಂಬರ್ 5ರಂದು ಈ ಪತ್ರ ಬರೆಯಲಾಗಿದ್ದು, ಇದರಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳು, ಸಮರ್ಥನೀಯವಲ್ಲದ ಸಾಲದ ಹೊರೆಗಳು, ಸಾಂಕ್ರಾಮಿಕ ಬೆದರಿಕೆಗಳು ಮತ್ತು ಹೆಚ್ಚುತ್ತಿರುವ ಆಹಾರದ ಅಭದ್ರತೆಯು ಜಗತ್ತಿನ ಹಲವು ಜನರನ್ನು ಬಹುಮುಖವಾಗಿ ಆವರಿಸಿದ್ದು, ಸವಾಲುಗಳನ್ನು ಎದುರಿಸುವಂತೆ ಮಾಡಿದೆ ಎಂದು ಉಲ್ಲೇಖಿಸಲಾಗಿದೆ.

ಜಗತ್ತು ಬಿಕ್ಕಟ್ಟಿನಲ್ಲಿದೆ. ಅಂತರರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಿ ತಮ್ಮ ಸ್ವಯಂ ಘೋಷಿತ ಪಾತ್ರವನ್ನು ವಹಿಸಲು ಜಿ20 ಅಗತ್ಯವಿದೆ. 2015ರಲ್ಲಿ ಎಲ್ಲ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಅಳವಡಿಸಿಕೊಂಡ ಸುಸ್ಥಿರ ಅಭಿವೃದ್ಧಿಗಾಗಿ 2030 ಅಜೆಂಡಾ, ಜನ ಶಾಂತಿ ಮತ್ತು ಸಮೃದ್ಧಿಗಾಗಿ ನೀಲನಕ್ಷೆ ಹಂಚಿಕೊಂಡಿವೆ. ಇದರಲ್ಲಿ 17 ಸುಸ್ಥಿರ ಅಭಿವೃದ್ಧಿ ಗುರಿಗಳು ಸೇರಿವೆ.

ಇದು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಎಲ್ಲ ದೇಶಗಳು ಜಾಗತಿಕ ಪಾಲುದಾರಿಕೆಯಲ್ಲಿ ಕ್ರಮಕ್ಕಾಗಿ ತುರ್ತು ಕರೆ ನೀಡಿದೆ. ಬಡತನ ಮತ್ತು ಇತರ ಅಭಾವಗಳನ್ನು ಕೊನೆಗೊಳಿಸುವುದು ಆರೋಗ್ಯ ಮತ್ತು ಶಿಕ್ಷಣ ಸುಧಾರಿಸಬೇಕು. ಅಸಮಾನತೆ ಕಡಿಮೆ ಮಾಡುವ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಮತ್ತು ನಮ್ಮ ಸಾಗರಗಳು ಮತ್ತು ಕಾಡುಗಳನ್ನು ಸಂರಕ್ಷಿಸಲು ಕೆಲಸ ಮಾಡುವ ತಂತ್ರಗಳೊಂದಿಗೆ ಕೈಜೋಡಿಸಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ.

ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ (Multilateral Development Banks- MDBs)ಗಳಲ್ಲಿ ಸುಧಾರಣೆಗಳ ತ್ವರಿತ ಕ್ರಮಕ್ಕೆ ಕರೆ ನೀಡಿರುವ ಅಂತಾರಾಷ್ಟ್ರೀಯ ಸಂಸ್ಥೆಗಳ ಗುಂಪು, ಯುಎನ್ ಜಾಗತಿಕ ಗುರಿಗಳು, ಬಡತನ ಕೊನೆಗೊಳಿಸುವುದು ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸುವಲ್ಲಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಈ ನಿಟ್ಟಿನಲ್ಲಿ ಎಂಡಿಬಿಗಳು ಷೇರುದಾರರಾಗಿ ಜಿ20, ಹೆಚ್ಚುವರಿ ಸಾಲ ನೀಡುವನ್ನು ಹತೋಟಿಗೆ ತರಲು ಬಂಡವಾಳದ ಸಮರ್ಪಕತೆಯ ಚೌಕಟ್ಟು (Capital Adequacy Framework - CAF) ವಿಮರ್ಶೆ ಶಿಫಾರಸುಗಳನ್ನು ತ್ವರಿತವಾಗಿ ಮತ್ತು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಎಂಡಿಬಿಗಳಿಗೆ ಸೂಚನೆ ನೀಡಬೇಕೆಂದು ತಿಳಿಸಲಾಗಿದೆ.

ಇದನ್ನೂ ಓದಿ: ಜಕಾರ್ತಾದಲ್ಲಿ ನಾಳೆ ಆಸಿಯಾನ್ - ಭಾರತ, ಪೂರ್ವ ಏಷ್ಯಾ ಶೃಂಗಸಭೆ: ಇಂದು ಇಂಡೋನೇಷ್ಯಾಕ್ಕೆ ಪ್ರಧಾನಿ ಮೋದಿ ಪ್ರಯಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.