ದಿಯೋಬಂದ್ (ಉತ್ತರಪ್ರದೇಶ) : ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದಾರೋ ಇಲ್ಲವೋ ಎಂಬುದನ್ನು ಭವಿಷ್ಯ ನಿರ್ಧರಿಸುತ್ತದೆ ಎಂದು ಜಮಿಯತ್ ಉಲೇಮಾ-ಇ-ಹಿಂದ್ ಸಂಘಟನೆಯ ರಾಷ್ಟ್ರಾಧ್ಯಕ್ಷ ಮೌಲಾನಾ ಸೈಯದ್ ಅರ್ಷದ್ ಮದನಿ ಹೇಳಿಕೆ ನೀಡಿದ್ದಾರೆ.
ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ರಚಿಸಿದ ನಂತರ ತಾಲಿಬಾನಿಗಳು ಎಲ್ಲಾ ಜನರನ್ನು ನ್ಯಾಯಯುತವಾಗಿ ಮತ್ತು ಸಮಾನವಾಗಿ ನಡೆಸಿಕೊಂಡರೆ, ಇಡೀ ಜಗತ್ತು ಅವರನ್ನು ಪ್ರಶಂಸಿಸುತ್ತದೆ ಮತ್ತು ನಂತರ ನಾವು ಅವರ ಪರವಾಗಿ ನಿಲ್ಲುತ್ತೇವೆ. ಅನ್ಯಾಯ ಮಾಡಿದರೆ ಭವಿಷ್ಯದಲ್ಲಿ ಯಾರೂ ಅವರನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.
ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರನ್ನು ಸಮಾನವಾಗಿ ಪರಿಗಣಿಸುವ ಹಾಗೂ ಪರಸ್ಪರ ಹೂಂದಾಣಿಕೆ ಮತ್ತು ಶಾಂತಿ ಸ್ಥಾಪಿಸುವ ಮೂಲಕ ಮಾತ್ರ ಯಾವುದೇ ದೇಶದಲ್ಲಾಗಲಿ ಯಶಸ್ಸಿನ ಹಾದಿ ಸುಗಮಗೊಳಿಸಬಹುದು. ಯಾವ ಸರ್ಕಾರ ಜನರಿಗೆ ಘನತೆ, ಸುರಕ್ಷತೆ, ಆರ್ಥಿಕ ಬೆಂಬಲ ಒದಗಿಸುತ್ತದೆಯೋ ಆ ಸರ್ಕಾರವನ್ನು ಪ್ರಪಂಚ ಮೆಚ್ಚುತ್ತದೆ ಎಂದರು.
ಅರ್ಷದ್ ಮದನಿ ತಾಲಿಬಾನ್ ಬೆಂಬಲಿಗರೇ?: ತಾವೊಬ್ಬ ತಾಲಿಬಾನ್ ಬೆಂಬಲಿಗರೆಂಬ ವದಂತಿಯನ್ನು ತಳ್ಳಿ ಹಾಕಿದ ಅರ್ಷದ್ ಮದನಿ, ತಾಲಿಬಾನ್ ಬಗ್ಗೆ ನನಗೆ ತಿಳಿದಿಲ್ಲ. ಅದರ ಮೇಲೆ ಅಭಿಪ್ರಾಯಗಳನ್ನು ನೀಡುವುದಿಲ್ಲ. ಆದರೆ, ತಾಲಿಬಾನಿಗಳ ದೇಶದ ಭದ್ರತೆ, ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಹಕ್ಕುಗಳ ನಿರ್ವಹಣೆಯನ್ನು ಹೇಗೆ ಮಾಡುತ್ತಾರೆಂಬುದರ ಮೇಲೆ ಅಭಿಪ್ರಾಯವನ್ನು ತಿಳಿಸಲಾಗುವುದು. ಹಾಗೆಯೇ ದಿಯೋಬಂದ್ ಜೊತೆ ತಾಲಿಬಾನ್ ಸಂಪರ್ಕವಿದೆಯೆಂದು ಹೇಳುವುದೂ ತಪ್ಪೂ. ಆದರೆ, ತಾಲಿಬಾನಿಗಳು ದಿಯೋಬಂದ್ನಲ್ಲಿ ನಡೆದಿದ್ದ ಹಜರತ್ ಶೈಖುಲ್-ಹಿಂದ್ ಮೌಲಾನಾ ಮಹಮೂದುಲ್ ಹಸನ್ರ ಚಳವಳಿಯಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿದರು.
ಬೇರೆಯವರ ಆಡಳಿತರ ಸಹಿಸದ ತಾಲಿಬಾನ್ : ನಾವು ಭಾರತದಲ್ಲಿ ಬ್ರಿಟಿಷರನ್ನು ಹೇಗೆ ಸಹಿಸಲಿಲ್ಲವೋ ಮತ್ತು ನಮ್ಮ ಹಿರಿಯರು ಅದಕ್ಕಾಗಿ ದೊಡ್ಡ ಯುದ್ಧವನ್ನು ಮಾಡಿದರೋ, ಹಾಗೆಯೇ ತಾಲಿಬಾನ್ ಕೂಡ ತಮ್ಮ ದೇಶದಲ್ಲಿ ಬೇರೆಯವರ ಶಕ್ತಿಯನ್ನು ಸಹಿಸುವುದಲ್ಲ ಮತ್ತು ಅದಕ್ಕಾಗಿ ಅವರು ಹೋರಾಡುತ್ತಿದ್ದಾರೆ ಎಂದು ಮೌಲಾನಾ ಅರ್ಷದ್ ಮದನಿ ಹೇಳಿದರು.