ತಾರ್ನ್ ತರಣ್ (ಪಂಜಾಬ್): ಕೂನೂರು ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ನಾಯಕ್ ಗುರುಸೇವಕ್ ಸಿಂಗ್ (35) ಅಂತ್ಯಕ್ರಿಯೆ ಇಂದು ಸಂಜೆ ಅವರ ಸ್ವಗ್ರಾಮವಾದ ಪಂಜಾಬ್ನ ತಾರ್ನ್ ತರಣ್ ಜಿಲ್ಲೆಯ ದೋದೆ ಸೋಧಿಯಾನ್ ಗ್ರಾಮದಲ್ಲಿ ನೆರವೇರಿದೆ.
ಇಂದು ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ಅಮೃತಸರದ ವಾಯುನೆಲೆಯಿಂದ ಗ್ರಾಮಕ್ಕೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಹಸ್ರಾರು ಜನರ ಕಣ್ಣಲ್ಲಿ ನೀರು ತುಂಬಿದ್ದನ್ನು ಕಂಡ ಗುರುಸೇವಕ್ ಸಿಂಗ್ರ ಪುತ್ರಿಯರು ಮತ್ತಷ್ಟು ಭಾವುಕರಾದರು. ಸಕಲ ಸೇನಾ ಗೌರವಗಳೊಂದಿಗೆ ಸಿಂಗ್ರ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಯಿತು.
ಇದನ್ನೂ ಓದಿ: Helicopter tragedy : ಹರ್ಜಿಂದರ್ ಸಿಂಗ್ರ ಅಂತ್ಯಕ್ರಿಯೆ ನೆರವೇರಿಸಿದ ಪುತ್ರಿಗೆ ರಕ್ಷಣಾ ಸಚಿವರಿಂದ ಸಾಂತ್ವನ
ಕೂನೂರು ಹೆಲಿಕಾಪ್ಟರ್ ಅಪಘಾತ : ಡಿಸೆಂಬರ್ 8ರಂದು ತಮಿಳುನಾಡಿನ ಕೂನೂರಿನಲ್ಲಿ ಕಾಪ್ಟರ್ ಪತನಗೊಂಡು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಇತರ 11 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.