ETV Bharat / bharat

ಕೇಂದ್ರ ಸರ್ಕಾರ vs ರೈತರು: ಪ್ರತಿಭಟನಾ ಸ್ಥಳದಲ್ಲೇ ರೈತನಿಂದ ಮನೆ ನಿರ್ಮಾಣ - ರೈತನಿಂದ ಮನೆ ನಿರ್ಮಾಣ

ದೆಹಲಿಯ ಗಡಿಗಳಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಇಲ್ಲೊಬ್ಬ ರೈತ ಪ್ರತಿಭಟನಾ ಸ್ಥಳದಲ್ಲಿಯೇ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾನೆ.

Fully functional house with AC being built at Singhu protest site
ಕೇಂದ್ರ ಸರ್ಕಾರ V/s ರೈತರು: ಪ್ರತಿಭಟನಾ ಸ್ಥಳದಲ್ಲಿಯೇ ರೈತನಿಂದ ಮನೆ ನಿರ್ಮಾಣ
author img

By

Published : Mar 10, 2021, 4:47 PM IST

ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆಯುತ್ತಿದೆ. ನವದೆಹಲಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರವಾಗುತ್ತಿದೆ.

ಮನೆ ನಿರ್ಮಾಣ ಕಾಮಗಾರಿ

ಈಗ ಸಿಂಘು ಗಡಿಯ ಬಳಿಯಲ್ಲಿ ಓರ್ವ ರೈತ ಮನೆಯೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾನೆ. ಸಂಯುಕ್ತ್ ಕಿಸಾನ್ ಮೋರ್ಚಾದ ಕೇಂದ್ರ ಕಚೇರಿ ಬಳಿಯಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್.. ಚರ್ಚೆಗೆ ಕೇಂದ್ರ ಮುಕ್ತ; ಅನುರಾಗ ಠಾಕೂರ್

ಈಗಾಗಲೇ ಸ್ಥಳಕ್ಕೆ ಇಟ್ಟಿಗೆ, ಸಿಮೆಂಟ್​, ಮುಂತಾದ ಸಾಮಗ್ರಿಗಳನ್ನು ತರಲಾಗಿದೆ. ಅಡಿಪಾಯ ಹಾಕುವ ಕಾರ್ಯ ಪ್ರಾರಂಭವಾಗಿದೆ. ಎರಡು ಅಂತಸ್ತಿನ ಹವಾನಿಯಂತ್ರಿತ ಮನೆಯನ್ನು ನಿರ್ಮಾಣ ಮಾಡಲು ರೈತ ನಿರ್ಧರಿಸಿದ್ದಾನೆ.

ರೈತ ಮನೆ ನಿರ್ಮಾಣಕ್ಕೆ ಮುಂದಾಗಿರುವ ವಿಡಿಯೋವನ್ನು ದೀಪ್ ಖಾತ್ರಿ ಎಂಬ ದೆಹಲಿಯ ನರೇಲಾ ನಿವಾಸಿ ಮಾಡಿದ್ದು, ಭಗತ್ ಸಿಂಗ್ ಯೂಥ್ ಬ್ರಿಗೇಡ್ ಎಂಬ ಸಾಮಾಜಿಕ ಸಂಘಟನೆಯನ್ನು ನಡೆಸುತ್ತಿದ್ದಾರೆ.

ದೀಪ್ ಖಾತ್ರಿ ಸಂಯುಕ್ತ್ ಕಿಸಾನ್ ಮೋರ್ಚಾದೊಂದಿಗೆ ಗುರುತಿಸಿಕೊಂಡಿದ್ದು, ಹಿಂದಿನ ವರ್ಷ ಪ್ರತಿಭಟನೆ ಆರಂಭವಾದಾಗಿನಿಂದ ರೈತರಿಗೆ ಸಾಥ್ ನೀಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.