ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ವಜ್ರಾಭರಣ ಉದ್ಯಮಿ ಮೆಹುಲ್ ಚೋಕ್ಸಿ ಇದೀಗ ಆಂಟಿಗುವಾ ಮತ್ತು ಬಾರ್ಬುಡಾದಿಂದಲೂ ನಾಪತ್ತೆಯಾಗಿದ್ದಾರೆ.
ವಂಚನೆ ಆರೋಪ ಎದುರಿಸುತ್ತಿರುವ ಭಾರತೀಯ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಪತ್ತೆ ಮಾಡಲು ಪೊಲೀಸರು ಬಲೆ ಬೀಸಿದ್ದಾರೆ ಎಂದು ಆಂಟಿಗುವಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ನೀರವ್, ಚೋಕ್ಸಿ ಬಚ್ಚಿಟ್ಟಿದ್ದ 1,305 ಕೋಟಿ ರೂ. ಮೌಲ್ಯದ ಆಭರಣ ಹೆಕ್ಕಿ ತಂದ ಇಡಿ
ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದಿದ್ದ ಮೆಹುಲ್ ಚೋಕ್ಸಿ ಭಾನುವಾರ ದ್ವೀಪದ ದಕ್ಷಿಣ ಪ್ರದೇಶದಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡುಬಂದಿದೆ. ಆ ಬಳಿಕ ಚೋಕ್ಸಿ ಬಗ್ಗೆ ಯಾವ ಕುರುಹುಗಳೂ ಸಿಕ್ಕಿಲ್ಲ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ನೀರವ್ ಮೋದಿಗೆ ಶೋಕಾಸ್ ನೋಟಿಸ್.. ಜೂನ್ 11ರಂದು ಕೋರ್ಟ್ಗೆ ಹಾಜರಾಗಲು ಸೂಚನೆ
ಸುಮಾರು 13,500 ಕೋಟಿ ರೂ. ಸಾರ್ವಜನಿಕ ಹಣವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚಿಸಿರುವ ಆರೋಪದಡಿ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಇಬ್ಬರೂ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ನೀರವ್ ಮೋದಿ ಸದ್ಯ ಲಂಡನ್ ಜೈಲಿನಲ್ಲಿದ್ದು, ಜೂನ್ 11ರಂದು ಕೋರ್ಟ್ಗೆ ಹಾಜರಾಗುವಂತೆ ಮುಂಬೈ ವಿಶೇಷ ಕೋರ್ಟ್ ಸೂಚನೆ ನೀಡಿದೆ.