ETV Bharat / bharat

ಏರುತ್ತಲೇ ಇದೆ ಇಂಧನ ಬೆಲೆ.. ಬೆಂಗಳೂರಲ್ಲಿ ಪೆಟ್ರೋಲ್​ ದರ ಎಷ್ಟು ಗೊತ್ತಾ!? - Bengaluru Diesel rate

ಭಾನುವಾರ ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡಿದ್ದು, ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್ ಬೆಲೆ 99.51 ಮತ್ತು ಡೀಸೆಲ್​ ಬೆಲೆ 89.36 ರೂ. ಆಗಿದೆ. ಬೆಂಗಳೂರಲ್ಲಿ 102 ರೂ. ಗೆ ಏರಿಕೆ ಕಂಡಿದ್ದು ವಾಹನ ಸವಾರರು ಕಂಗಾಲಾಗಿದ್ದಾರೆ.

Fuel Price
ತೈಲ ಬೆಲೆ
author img

By

Published : Jul 4, 2021, 9:45 AM IST

ನವದೆಹಲಿ/ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಮುಂಬೈ ಮಹಾನಗರದಲ್ಲಿ ಪ್ರತಿ ಲೀಟರ್ ಬೆಲೆ 105.58 ರೂಪಾಯಿಗೆ ಬಂದು ನಿಂತಿದೆ. ಡೀಸೆಲ್​ ಬೆಲೆ 96.91 ರೂ. ಆಗಿದೆ.

ಭಾನುವಾರ ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡಿದ್ದು, ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್ ಬೆಲೆ 99.51 ಮತ್ತು ಡೀಸೆಲ್​ ಬೆಲೆ 89.36 ರೂ. ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 99.45 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಲೀಟರ್​ ಪೆಟ್ರೋಲ್​ ದರ 92.27 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಲೀಟರ್​ ಪೆಟ್ರೋಲ್​ ದರ 100.44 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್​ ಬೆಲೆ 93.91 ಆಗಿದೆ.

ಬೆಂಗಳೂರಿನಲ್ಲಿ ಹೀಗಿದೆ ದರ:

ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 102.84 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 94.72 ರೂಪಾಯಿ ಆಗಿದೆ. ಹೈದರಾಬಾದ್​ನಲ್ಲಿ ಲೀಟರ್​ ಪೆಟ್ರೋಲ್ ದರ 97.40 ರೂಪಾಯಿಗೆ ಏರಿಕೆಯಾಗಿದೆ. ಪಾಟ್ನಾದಲ್ಲಿ ಲೀಟರ್​ ಪೆಟ್ರೋಲ್​ ದರ 101.62 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 94.76 ರೂಪಾಯಿಗೆ ಏರಿಕೆಯಾಗಿದೆ.

ದೇಶಾದ್ಯಂತ 11 ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್​ ದರ ಈಗಾಗಲೇ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ. ಜೂನ್​ ತಿಂಗಳ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 17 ಬಾರಿ ಪೆಟ್ರೋಲ್​​ ದರವನ್ನು ಹೆಚ್ಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.