ಕಲ್ಕತ್ತಾ (ಪಶ್ಚಿಮ ಬಂಗಾಳ): ಶತ್ರುರಾಷ್ಟ್ರಗಳಿಗೆ ನಮ್ಮ ಸಶಸ್ತ್ರ ಪಡೆಗಳು ಸೂಕ್ತ ಉತ್ತರ ನೀಡುತ್ತಿವೆ. ನೇತಾಜಿ ಸುಭಾಸ್ ಚಂದ್ರ ಬೋಸ್ ಕಲ್ಪಿಸಿಕೊಂಡ ಭಾರತದ ಪ್ರಬಲ ಅವತಾರಕ್ಕೆ ಜಗತ್ತು ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನೇತಾಜಿಯ ಜನ್ಮ ದಿನಾಚರಣೆಯಂದು ವಿಕ್ಟೋರಿಯಾ ಸ್ಮಾರಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೇತಾಜಿ ನಮ್ಮನ್ನು ಯಾವುದೋ ಒಂದು ರೂಪದಲ್ಲಿ ನೋಡುತ್ತಿದ್ದಾರೆ. ಅವರು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ನೇತಾಜಿಯ ಕನಸಿನ ಭಾರತವನ್ನು ಜಗತ್ತು ನೋಡುತ್ತಿದೆ. ಭಾರತವನ್ನು ಕೆಣಕಿದವರಿಗೆ, ಸೂಕ್ತ ಉತ್ತರ ನೀಡುತ್ತಿದೆ ಎಂದರು.
ಜಗತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಚರ್ಚಿಸುತ್ತಿರುವಾಗ, ನೇತಾಜಿಯವರು ಮಹಿಳೆಯರನ್ನು ಸ್ವಾತಂತ್ರ್ಯ ಚಳವಳಿಗೆ ಧುಮುಕುವಂತೆ ಮಾಡಿದರು. ನೇತಾಜಿ ಅವರು ಸ್ವತಂತ್ರ ಭಾರತೀಯ ಸರ್ಕಾರಕ್ಕೆ ಅಡಿಪಾಯ ಹಾಕುವುದಾಗಿ ಪ್ರತಿಜ್ಞೆ ಕೈಗೊಂಡಿದ್ದರು. ಅಂಡಮಾನ್ ದ್ವೀಪಗಳಲ್ಲಿ ತ್ರಿವರ್ಣವನ್ನು ಹಾರಿಸುವ ಮೂಲಕ, ಅವರು ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಹೇಳಿದರು.