ಭಾಗಲ್ಪುರ್ (ಬಿಹಾರ) : ಸಂಬಂಧಗಳ ಬೆಲೆ ಇಲ್ಲದ ಈ ಕಾಲದಲ್ಲಿ ಬಿಹಾರ ಭಾಗಲ್ಪುರ್ದ ಕಲೀಂ ಮತ್ತು ಆತನ ಗಿಳಿ ಈ ಸಮಾಜಕ್ಕೆ ಉದಾಹರಣೆಯಾಗಿದ್ದಾರೆ. ಹೌದು ಮಾತು ಬಾರದ ಮೂಕ ಪಕ್ಷಿಯೊಂದು ತನ್ನ ರಕ್ಷಣೆ ಮಾಡಿದ ಪಾಲಕನಿಗೆ ತನ್ನೆಲ್ಲ ಪ್ರೀತಿ ನೀಡಿ ಅವನೊಂದಿಗೆ ಜೀವನ ಸಾಗಿಸುತ್ತಿದೆ. ಇವರ ಈ ಸ್ನೇಹ ಎಲ್ಲರ ಅಚ್ಚು ಮೆಚ್ಚುಗೆಗೆ ಕಾರಣವಾಗಿದೆ. ಈ ಗಿಣಿಗೆ ನಾಮಕರಣವು ಮಾಡಿದ್ದು, ಅದರ ಹೆಸರು ಜಿಮ್ಮಿ ಎನ್ನುತ್ತಾರೆ ಪಕ್ಷಿ ಪ್ರೇಮಿ ಕಲೀಂ.
ಈ ಕಲೀಂ ಬುರಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಪ್ಪಘಾಟ್ ಮಾಯಗಂಜ್ ನಿವಾಸಿಯಾಗಿದ್ದು, ವಿದ್ಯುತ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಗಿಣಿಯ ನಡುವಿನ ಒಡನಾಟ ಎಷ್ಟರ ಮಟ್ಟಿಗೆ ಎಂದರೆ ಕಲೀಂ ಎಲ್ಲಿಗೆ ಹೋದರೂ ಈ ಗಿಳಿ ಅವರ ಜೊತೆಯಾಗಿಯೇ ಬೈಕನಲ್ಲಿಯೂ ಸಹ ಸಂಚರಿಸುತ್ತದೆ. ಅಚ್ಚರಿಯಾದರೂ ಇದು ನಿಜವೇ. ಇದಕ್ಕೂ ಮೊದಲೂ ಕೊಕ್ಕರೆಯನ್ನು ಶುಶ್ರೂಷೆ ಮಾಡಿ ಸ್ನೇಹ ಬೆಳೆಸಿದ ಉತ್ತರ ಪ್ರದೇಶದ ಆರಿಫ್ ಕಥೆ ನೆನಪಿರಬಹುದು. ಇದೇ ರೀತಿ ಕಲೀಂ ಮತ್ತು ಗಿಣಿಯ ಸ್ನೇಹವು ಬೆಳದು ಬಾಂಧವ್ಯ ಬೆಸೆದಿದೆ.
ಗಿಣಿ ಕಲೀಂಗೆ ದೊರಕಿದ್ದು ಹೇಗೆ?: ಈ ಗಿಳಿ ಎಲ್ಲಿಂದಲೋ ಹಾರಿ ಬಂದಿತ್ತು ಆದರೆ ಇದಕ್ಕೆ ಗಾಯಗಳಾಗಿತ್ತು. ಇದರಿಂದ ಕಲೀಂ ಇದನ್ನು ಹಿಡಿದು ಇದಕ್ಕೆ ಚಿಕಿತ್ಸೆ ನೀಡಿದ್ದಾನೆ. ಸುಮಾರು ಒಂದು ತಿಂಗಳು ಆರೈಕೆ ಮಾಡಿದ್ದು ಗಿಣಿಗೆ ಮರು ಜೀವ ನೀಡಿದ್ದಾನೆ. ಚಿಕಿತ್ಸೆಯ ನಡುವೆಯೇ ಗಿಣಿ ಮತ್ತು ಕಲೀಂ ನಡುವೆ ಒಡನಾಟವಾಗಿದೆ. ಅಲ್ಲಿಂದ ಆ ಗಿಳಿ ಕಲೀಂ ಅವರನ್ನು ಬಿಟ್ಟು ಎಲ್ಲಿಗೂ ಹೋಗಲಿಲ್ಲವಂತೆ.
ಹೀಗಾಗಿ ಇವರು ಎಲ್ಲರೂ ಪಕ್ಷಿಯನ್ನು ಸಾಕುವಂತೆ ಪಂಜರದಲ್ಲಿಟ್ಟು ಸಾಕಲು ಪ್ರಾರಂಭಿಸಿದ್ದಾರೆ. ಆದರೆ, ಇದರಿಂದ ಗಿಣಿಗೆ ಏನೋ ಸಮಸ್ಯೆಯಾದಂತೆ ಗೋಚರಿಸಿದೆ. ಇದರಿಂದ ಗಿಳಿಗೆ ಪಂಜರದಿಂದ ಬಿಡುಗಡೆ ಕೊಟ್ಟರು. ಆದರೂ ಈ ಗಿಣಿ ಕಲೀಂನನ್ನು ಬಿಟ್ಟು ಹೋಗಲೇ ಇಲ್ಲ. ಅಲ್ಲಿಂದ ಇಲ್ಲಿ ತನಕವೂ ಅಂದರೆ ಒಟ್ಟು 5 ತಿಂಗಳಿನಿಂದ ಗಿಣಿಗೆ ಇವರ ಜೊತೆಯೇ ಆಟ-ಊಟ ಎಲ್ಲವೂ.
ಬೈಕ್ ಸವಾರಿಯೂ ಮಾಡುವ ಗಿಣಿ ಜಿಮ್ಮಿ: ಕಲೀಂ ಜೊತೆಗೆ ಸಮಯ ಕಳೆಯುವ ಜಿಮ್ಮಿ ಆತ ಕೆಲಸಕ್ಕೂ ಹೋಗುವಾಗ ಅವನ ಜೊತೆಗೆನೆ ಆಫೀಸಿಗು ತೆರಳುತ್ತದೆ. ಆದರೆ ಹಾರಿಕೊಂಡಲ್ಲ, ಬದಲಿಗೆ ಕಲೀಂನ ಹೆಗಲ ಮೇಲೆಯೆ. ಕಲೀಂ ತನ್ನ ಆಫೀಸ್ಗಲ್ಲದೇ ಎಲ್ಲಿಗೂ ಹೋದರೂ ತನ್ನ ಬೈಕನಲ್ಲಿ ಹೋಗುವಾಗ ಜಿಮ್ಮಿ ಅವನ ಜೊತೆ ಹೆಗಲ ಮೇಲೆ ಕುಳಿತು ಸವಾರಿ ಮಾಡುತ್ತದೆ.
ಹೆಗಲಲ್ಲಿ ಕುಳಿತುಕೊಳ್ಳುವ ಜಿಮ್ಮಿ ಆತನ ತಲೆಯನ್ನೆಲ್ಲಾ ತನ್ನ ಮುದ್ದಾದ ಕೊಕ್ಕುವಿನಿಂದ ಕುಟುಕುತ್ತಾ ತನ್ನ ಪ್ರೀತಿಯ ಭಾಷೆಯನ್ನು ತೋರ್ಪಡಿಸುತ್ತದೆ. ಜಿಮ್ಮಿ ಎಂದಿಗೂ ತೊಂದರೆ ಕೊಟ್ಟಿಲ್ಲ. ನಾನು ಹೇಳಿದನ್ನೆಲ್ಲಾ ಪಾಲಿಸುತ್ತದೆ. ಪ್ರತಿಯೊಂದು ಮಾತು ಮತ್ತು ಹಾವಭಾವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ. ನಮ್ಮ ಕುಟುಂಬದ ಜೊತೆಗೆ ಸದಸ್ಯನಾಗಿ ವಾಸಿಸುತ್ತಿದೆ ಎನ್ನುತ್ತಾರೆ ಜಿಮ್ಮಿ ಗಿಣಿಯ ಪಾಲಕ ಕಲೀಂ.
ಇದನ್ನೂ ಓದಿ: ರಾಮೋಜಿ ಫಿಲಂ ಸಿಟಿ ನೋಡುವ ಸದವಕಾಶ: ಇಂದೇ ಬುಕ್ ಮಾಡಿ IRCTC ಗೋಲ್ಡನ್ ಟ್ರಯಾಂಗಲ್ ಟೂರ್!