ETV Bharat / bharat

ನೂಪುರ್ ಶರ್ಮಾ ಹೇಳಿಕೆ: ಹೌರಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಪೊಲೀಸರ ಮೇಲೆ ಕಲ್ಲು ತೂರಾಟ!

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪಾಂಚಾಲ ಬಜಾರ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಇಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದಾರೆ.

clash between Police and protesters in Howrah  Fresh clash in Howrah  Nupur Sharma Remark  former BJP spokesperson Nupur Sharma issue  former BJP spokesperson Nupur Sharma news  ಹೌರಾದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ  ಹೌರಾದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ  ನೂಪುರ್​ ಶರ್ಮಾ ವಿವಾದ  ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ  ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಸುದ್ದಿ
ಪೊಲೀಸರ ಮೇಲೆ ಕಲ್ಲು ತೂರಾಟ
author img

By

Published : Jun 11, 2022, 12:50 PM IST

ಹೌರಾ: ಪ್ರವಾದಿ ಮುಹಮ್ಮದ್ ಹೇಳಿಕೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದ್ದು, ಪಾಂಚಾಲ ಬಜಾರ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಘರ್ಷಣೆ ಉಂಟಾಗಿದೆ. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಅವರನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಉಪಯೋಗಿಸಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರವೂ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರು.

  • #WATCH | West Bengal: Fresh clash b/w Police & a group of protesters breaks out at Panchla Bazaar in Howrah. Police use tear gas shells to disperse them as protesters pelt stones

    Violent protests broke out here y'day over controversial remarks of suspended BJP spox Nupur Sharma. pic.twitter.com/8ZhZ2bNVMG

    — ANI (@ANI) June 11, 2022 " class="align-text-top noRightClick twitterSection" data=" ">

ಶನಿವಾರ ಬೆಳಗ್ಗೆ ಪಾಂಚಾಲ ಬಜಾರ್‌ನಲ್ಲಿ ಪ್ರತಿಭಟನಾಕಾರರು ಮತ್ತೆ ಜಮಾಯಿಸಿದ್ದರು. ಪೊಲೀಸರು ಇವರನ್ನು ತಡೆಯಲು ಮುಂದಾದಾಗ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನೂ ಪ್ರಯೋಗಿಸಿದರು.

ಓದಿ: ನೂಪುರ್ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಹಿಂಸಾಚಾರ ಹೆಚ್ಚಳ ಸಾಧ್ಯತೆ: ಹೈ ಅಲರ್ಟ್ ಆದ ರಾಜ್ಯ ಪೊಲೀಸರು

ಪ್ರತಿಭಟನಾಕಾರರು ಹಿಂದೆ ಸರಿಯುತ್ತಲೇ ಕಲ್ಲು ತೂರಾಟ ನಡೆಸಿದರು. ಇದಕ್ಕೂ ಮುನ್ನ ಶುಕ್ರವಾರವೂ ಧುಲಾಘರ್, ಪಾಂಚಾಲ ಮತ್ತು ಉಲುಬೇರಿಯಾದಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು. ಗುಂಪು ಚದುರಿಸಲು ಪೊಲೀಸರು ಧುಲಾಘರ್ ಮತ್ತು ಪಂಚಲಾದಲ್ಲಿ ಲಾಠಿ ಚಾರ್ಜ್ ಮಾಡಿದ್ದರು. ಈ ಪ್ರದೇಶದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಹಲವು ವಾಹನಗಳಿಗೆ ಹಾನಿಯಾಗಿದೆ.

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ವಿರೋಧಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಮುಸ್ಲಿಮರು ದೇಶದ ಹಲವು ನಗರಗಳಲ್ಲಿ ಪ್ರತಿಭಟನೆ ನಡೆಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ದೆಹಲಿ, ಕೋಲ್ಕತ್ತಾ, ಹೌರಾ, ಪ್ರಯಾಗ್‌ರಾಜ್, ಹೈದರಾಬಾದ್, ಸಹರಾನ್‌ಪುರ ಸೇರಿದಂತೆ ಇತರ ನಗರಗಳಲ್ಲಿ ಪ್ರತಿಭಟನಾಕಾರರು ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.