ETV Bharat / bharat

ಆಕ್ಸಿಜನ್​ ಸಮಸ್ಯೆ ಇಲ್ಲ; ಮುಂದಿನ ಮೂರು ತಿಂಗಳಲ್ಲಿ ಎಲ್ಲರಿಗೂ ಕೋವಿಡ್​ ವ್ಯಾಕ್ಸಿನ್​: ಕೇಜ್ರಿವಾಲ್ - ಮೂರು ತಿಂಗಳಲ್ಲಿ ಕೋವಿಡ್​ ವ್ಯಾಕ್ಸಿನ್​

ರಾಜಧಾನಿಯಲ್ಲಿ ಉಂಟಾಗಿದ್ದ ಆಕ್ಸಿಜನ್​ ಸಮಸ್ಯೆ ಇದೀಗ ಪರಿಹರಿಸಲಾಗಿದ್ದು, ಯಾವುದೇ ರೋಗಿ ಈ ಸಮಸ್ಯೆಯಿಂದ ತೊಂದರೆಗೊಳಗಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

Arvind Kejriwal
Arvind Kejriwal
author img

By

Published : May 7, 2021, 10:24 PM IST

Updated : May 7, 2021, 10:59 PM IST

ನವದೆಹಲಿ: ದೆಹಲಿಯಲ್ಲಿ ಉಂಟಾಗಿದ್ದ ಆಕ್ಸಿಜನ್​ ಸಮಸ್ಯೆ ಇದೀಗ ಮುಕ್ತಾಯಗೊಂಡಿದ್ದು, ಮುಂದಿನ ಮೂರು ತಿಂಗಳಲ್ಲಿ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್​ ನೀಡಲಾಗುವುದು ಎಂದು ದೆಹಲಿ ಸಿಎಂ ಕೇಜ್ರಿವಾಲ್​ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಕೋವಿಡ್ ಸಮಸ್ಯೆ ಉಲ್ಭಣಗೊಂಡಿದ್ದು, ಆಕ್ಸಿಜನ್ ಕೊರತೆ ಸಹ ಉಂಟಾಗಿತ್ತು. ಇದೀಗ ಕೇಂದ್ರ ಸರ್ಕಾರ ಸಮಪರ್ಕ ಆಕ್ಸಿಜನ್​ ನೀಡಿರುವ ಕಾರಣ ಆ ಸಮಸ್ಯೆ ಮುಗಿದಿದೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: ಚೆನ್ನೈ ಏರ್​ಪೋರ್ಟ್​ನಲ್ಲಿ 100 ಕೋಟಿ ರೂ. ಮೌಲ್ಯದ ಹೆರಾಯಿನ್​ ವಶಕ್ಕೆ, ಇಬ್ಬರ ಬಂಧನ

ಅಲ್ಲಿನ ಸಚಿವರೊಂದಿಗೆ ತುರ್ತು ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಜ್ರಿವಾಲ್​, ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಉದ್ಭವಗೊಂಡಿದ್ದ ಆಕ್ಸಿಜನ್​ ಸಮಸ್ಯೆ ಇದೀಗ ಮುಕ್ತಾಯಗೊಂಡಿದೆ. ಯಾವುದೇ ರೋಗಿ ಆಮ್ಲಜನಕ ಸಮಸ್ಯೆಯಿಂದ ತೊಂದರೆಗೊಳಗಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಹೇಳಿರುವ ಪ್ರಕಾರ ಮುಂದಿನ ಮೂರು ತಿಂಗಳಲ್ಲಿ ವ್ಯಾಕ್ಸಿನ್​ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವೇಳೆ, ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಉಚಿತವಾಗಿ ಕೋವಿಡ್​ ವ್ಯಾಕ್ಸಿನ್ ನೀಡುವುದಾಗಿ ಘೋಷಣೆ ಮಾಡಿರುವ ಕೇಜ್ರಿವಾಲ್​, ಅವರ ಕಚೇರಿಗಳಲ್ಲೇ ವ್ಯಾಕ್ಸಿನೇಷನ್​ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ ದಾಖಲೆಯ 19,832 ಕೋವಿಡ್ ಪ್ರಕರಣ ದಾಖಲಾಗಿದ್ದು, 341 ಜನರು ಸಾವನ್ನಪ್ಪಿದ್ದಾರೆ.

Last Updated : May 7, 2021, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.