ಪೆರಂಬೂರು (ತಮಿಳುನಾಡು): ಸ್ನಾಪ್ ಡೀಲ್ ಹೆಸರಲ್ಲಿ ದುಷ್ಕರ್ಮಿಗಳು ನಗರದ ಉದ್ಯೋಗಿ ವಿನೋದ್ ಎಂಬುವರಿಗೆ ಐದು ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಿನೋದ್ ಪ್ರಕಾರ, ಅವರು ಕೆಲ ದಿನಗಳ ಹಿಂದೆ ಕೆಲವು ವಸ್ತುಗಳನ್ನು ಖರೀದಿಸಲು ಸ್ನ್ಯಾಪ್ ಡೀಲ್ನಲ್ಲಿ ನೊಂದಾಯಿಸಿಕೊಂಡಿದ್ದರು. ಆದರೆ, ಅದು ನಕಲಿ ವೆಬ್ಸೈಟ್ ಎಂದು ಅವರಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ನಂತರ ಇ - ಕಾಮರ್ಸ್ ಪೋರ್ಟಲ್ನಿಂದ ಒಂದು ಜತೆ ಶೂ ಗಿಫ್ಟ್ ಸಿಕ್ಕಿತು. ಮರುದಿನವೇ ಕಿಡಿಗೇಡಿಗಳ ತಂಡ ವಿನೋದ್ಗೆ 18 ಲಕ್ಷ ರೂಪಾಯಿ ಚೆಕ್ ಕಳಿಸಿತು. ಚೆಕ್ನಿಂದ ಹಣ ಪಡೆಯಲು ಮೊದಲು ಐದು ಲಕ್ಷ ರೂಪಾಯಿ ಪಾವತಿಸಬೇಕು ಎಂದು ಹೇಳಲಾಗಿತ್ತು. ಈ ಹಿನ್ನೆಲೆ ಅವರು ಐದು ಲಕ್ಷ ರೂಪಾಯಿಗಳನ್ನು ವಂಚಕರು ಹೇಳಿದ ಅಡ್ರೆಸ್ಗೆ ಕಳಿಸಿದ್ರು.
ಆದರೆ, ಕೆಲ ದಿನಗಳ ಬಳಿಕ ವಿನೋದ್ಗೆ ಈ ರೀತಿಯ ವಂಚನೆ ಪ್ರಕರಣಗಳು ಆತನ ಸ್ನೇಹಿತನಿಂದ ತಿಳಿಯಿತು. ಕೂಡಲೇ ಅವರು, ಓಟರಿ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಪೊಲೀಸರ ಆರಂಭಿಕ ತನಿಖೆಯಲ್ಲಿ ಈ ತಂಡವು ದೆಹಲಿಯಿಂದ ಬಂದಿದ್ದು, ಇದೇ ರೀತಿ ಅನೇಕರಿಗೆ ವಂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಹೆಟೆರೊ ಡ್ರಗ್ಸ್ ಕಂಪನಿ ಮೇಲೆ IT ದಾಳಿ.. 142 ಕೋಟಿ ರೂ. ನಗದು, 550 ಕೋಟಿ ಲೆಕ್ಕವಿಲ್ಲದ ಆದಾಯ ಪತ್ತೆ!
ವಿನೋದ್ ಇಂದು ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದು, ಈ ರೀತಿಯ ವಂಚನೆಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ರು.