ಮೀರತ್: ಭಾರತೀಯ ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಮೋಸ ಮಾಡ್ತಿದ್ದ ಗ್ಯಾಂಗ್ ಬಂಧನ ಮಾಡುವಲ್ಲಿ ಮೀರತ್ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ.
ಬಂಧಿತರಿಂದ ಎಂಟು ಯುವಕರ ನೇಮಕಾತಿ ಪತ್ರ, ನಾಲ್ಕು ಮೊಬೈಲ್ ,ಡೈರಿ, ನೋಟರಿ ಫಾರ್ಮ್ ಸೇರಿ ಅನೇಕ ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಭಾರತೀಯ ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಯುವಕರಿಗೆ ಮೋಸ ಮಾಡುತ್ತಿದ್ದರು. ಲಭ್ಯವಾಗಿರುವ ಡೈರಿಯಲ್ಲಿ ಕಳೆದ ವರ್ಷ ಮೋಸ ಹೋಗಿರುವ ಯುವಕರ ಹೆಸರು ಹಾಗೂ ವಿಳಾಸವಿದೆ.
ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಲಿದೆ: ಶಹನವಾಜ್ ಹುಸೇನ್!
ಗಣರಾಜ್ಯೋತ್ಸವಕ್ಕೂ ಮುಂಚಿತವಾಗಿ ಮೀರತ್ನಲ್ಲಿ ಪೊಲೀಸರು ಸಾರ್ವಜನಿಕ ಸ್ಥಳ, ಹೋಟೆಲ್ಗಳಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಈ ಗ್ಯಾಂಗ್ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ವಿಚಾರಣೆ ನಡೆಸಿದಾಗ ಸೈನ್ಯಕ್ಕೆ ಸೇರಲು ಬಯಸುವ ಹುಡುಗರನ್ನ ಹುಡುಕುತ್ತಿರುವುದಾಗಿ ಹೇಳಿದ್ದಾರೆ. ಅನುಮಾನ ಬಂದು ವಿಚಾರಣೆ ನಡೆಸಿದಾಗ ಸಂಪೂರ್ಣ ಮಾಹಿತಿ ಹೊರಬಿದ್ದಿದೆ. ಇನ್ನು ಇವರು ನೀಡುತ್ತಿದ್ದ ನೇಮಕಾತಿ ಪತ್ರ ನಿಜವಾದ ನೇಮಕಾತಿ ಪತ್ರದ ರೀತಿಯಲ್ಲೇ ಇದ್ದು, ಸಾಮಾನ್ಯ ಜನರಿಗೆ ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ.
ಪ್ರತಿ ಅಭ್ಯರ್ಥಿಯಿಂದ 5ರಿಂದ 6 ಲಕ್ಷ ರೂ ಪಡೆದುಕೊಳ್ಳುತ್ತಿದ್ದರು. ಇದರ ಸಂಪೂರ್ಣ ಮಾಹಿತಿ ಡೈರಿಯಲ್ಲಿ ಲಭ್ಯವಾಗಿದ್ದು, ಸುಮಾರು 100ಕ್ಕೂ ಹೆಚ್ಚು ಯುವಕರಿಂದ ಹಣ ವಸೂಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.