ETV Bharat / bharat

ಸನ್ಯಾಸಿನಿ ಮೇಲೆ ಅತ್ಯಾಚಾರ: ಬಿಷಪ್ ಹುದ್ದೆಗೆ ಫ್ರಾಂಕೋ ಮುಲಕ್ಕಲ್ ರಾಜೀನಾಮೆ - ಜಲುಂದೂರ್ ಬಿಷಪ್ ಮುಲಕ್ಕಲ್

ಸನ್ಯಾಸಿನಿಯ ಮೇಲೆ ಅತ್ಯಾಚಾರ ಆರೋಪ ಹೊತ್ತಿದ್ದ ಜಲುಂದೂರ್ ಬಿಷಪ್ ಮುಲಕ್ಕಲ್ ಹುದ್ದೆಗೆ ರಾಜೀನಾಮೆ ನೀಡಿದ್ದು, ಪೋಪ್ ಫ್ರಾನ್ಸಿಸ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

Franco Mulakkal
ಫ್ರಾಂಕೋ ಮುಲಕ್ಕಲ್
author img

By

Published : Jun 2, 2023, 1:27 PM IST

ತಿರುವನಂತಪುರಂ (ಕೇರಳ) : ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದ ಆರೋಪಿ ಫ್ರಾಂಕೋ ಮುಲಕ್ಕಲ್​ ಅವರು ಜಲುಂದೂರ್ ಬಿಷಪ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಲಕ್ಕಲ್ ಅವರ ರಾಜೀನಾಮೆಯನ್ನು ಪೋಪ್ ಫ್ರಾನ್ಸಿಸ್ ಅಂಗೀಕರಿಸಿದ್ದಾರೆ. ಸನ್ಯಾಸಿನಿಯ ಮೇಲಿನ ಅತ್ಯಾಚಾರ ಆರೋಪದ ನಂತರ ಅವರನ್ನು ತಾತ್ಕಾಲಿಕವಾಗಿ ಗ್ರಾಮೀಣ ಕರ್ತವ್ಯಗಳಿಂದ ತೆಗೆದು ಹಾಕಲಾಗಿತ್ತು.

ಕಳೆದ ವರ್ಷ ಕೇರಳದ ಸ್ಥಳೀಯ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ಮುಲಕ್ಕಲ್ ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಇದೀಗ ಒಂದೂವರೆ ವರ್ಷದ ನಂತರ ಮುಲಕ್ಕಲ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಪೋಪ್ ಫ್ರಾನ್ಸಿಸ್ ಅಂಗೀಕರಿಸಿದ್ದಾರೆ. ಇದು ಹೊಸ ಬಿಷಪ್​ನ ನೇಮಕಕ್ಕೆ ದಾರಿ ಮಾಡಿಕೊಡುತ್ತದೆ ಎಂದು ವ್ಯಾಟಿಕನ್​ ಮಿಷನ್ ಹೇಳಿಕೆ ನೀಡಿದೆ.

ಪ್ರಕರಣವೇನು?: ಈ ಪ್ರಕರಣವು ಕೇರಳದ ಕೊಟ್ಟಾಯಂ ಜಿಲ್ಲೆಯ ಸನ್ಯಾಸಿನಿಗೆ ಸಂಬಂಧಿಸಿರುವಂಥದ್ದು. ಆಕೆ ಜೂನ್ 27, 2018 ರಂದು ಆಗಿನ ಜಲುಂದೂರ್ ಬಿಷಪ್ ಅಂದರೆ ಫ್ರಾಂಕೋ ಮುಲಕ್ಕಲ್ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ ಎಂದು ವಿವರವಾದ ದೂರು ನೀಡಿದ್ದರು. ಈ ಅತ್ಯಾಚಾರವೆಲ್ಲವೂ 2014-2016 ರ ಅವಧಿಯಲ್ಲಿ ಕೊಟ್ಟಾಯಂನಲ್ಲಿರುವ ಸಭೆಯ ಮನೆಯಲ್ಲಿ ನಡೆದಿವೆ ಎಂದು ದೂರುದಾರಳಾದ ಧರ್ಮಪ್ರಾಂತ್ಯದ ಸಭೆಯಾದ ಮಿಷನರೀಸ್ ಆಫ್ ಜೀಸಸ್‌ನ ಸದಸ್ಯರಾಗಿರುವ ಸನ್ಯಾಸಿನಿ ಆರೋಪಿಸಿದ್ದರು.

ಇದರಿಂದ ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ, ಸನ್ಯಾಸಿನಿಯ ಸಹೋದ್ಯೋಗಿಗಳು ನಾಗರಿಕ ಸಮಾಜದ ಸದಸ್ಯರ ಬೆಂಬಲದೊಂದಿಗೆ, ಬಿಷಪ್‌ ಬಂಧನಕ್ಕೆ ಒತ್ತಾಯಿಸಿ ಕೊಚ್ಚಿಯಲ್ಲಿ ಆಂದೋಲನವನ್ನು ಪ್ರಾರಂಭಿಸಿದ್ದರು. ಹೀಗಾಗಿ ಮುಲಕ್ಕಲ್ ಅವರನ್ನುಅತ್ಯಾಚಾರ ಸೇರಿದಂತೆ 7 ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಸೆಪ್ಟೆಂಬರ್ 21 ರಂದು ಬಂಧಿಸಿ ಅಕ್ಟೋಬರ್ 17 ರವರೆಗೆ ಜೈಲಿನಲ್ಲಿರಿಸಲಾಯಿತು.

ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಭಾರತದ ಮೊದಲ ಕ್ಯಾಥೋಲಿಕ್ ಬಿಷಪ್ ಎಂಬ ಕುಖ್ಯಾತಿಗೆ ಫ್ರಾಂಕೋ ಮುಲಕ್ಕಲ್ ಪಾತ್ರರಾದರು. ಇದರಿಂದ, ವ್ಯಾಟಿಕನ್ ಫ್ರಾಂಕೋ ಅವರನ್ನು ಜಲಂಧರ್‌ನ ಬಿಷಪ್‌ನ ಜವಾಬ್ದಾರಿಯಿಂದ ತಾತ್ಕಾಲಿಕವಾಗಿ ಗ್ರಾಮೀಣ ಕರ್ತವ್ಯಗಳಿಂದ ತೆಗೆದುಹಾಕಲಾಗಿತ್ತು. ಕಳೆದ ವರ್ಷ 2022 ರಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿ. ಗೋಪಕುಮಾರ್ ಅವರು ಫ್ರಾಂಕೊ ಮುಲಕ್ಕಲ್​ ಮೇಲಿದ್ದ ಆರೋಪಗಳನ್ನು ರದ್ದುಗೊಳಿಸಿದ್ದರು.

ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಖುದ್ದಾಗಿ ಬಿಷಪ್ ಫ್ರಾಂಕೋ ಹಾಜರಾಗಿದ್ದರು. ತೀರ್ಪು ಆಲಿಸಿದ ಅವರು ಬಳಿಕ ಪ್ರಕರಣದ ಬಗ್ಗೆ ಅಳಲು ತೋಡಿಕೊಂಡರು. ನಾನು ದೇವರಿಗೆ ಕೃತಜ್ಞನಾಗಿದ್ದೇನೆ, ಸತ್ಯವು ಅಂತಿಮವಾಗಿ ಮೇಲುಗೈ ಸಾಧಿಸುತ್ತದೆ ಎಂದು ನಂಬುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದರು.

ಆದರೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಸನ್ಯಾಸಿನಿಯರು ಕೇರಳ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಇದರ ನಡುವೆ ಫ್ರಾಂಕೋ ಮುಲಕ್ಕಲ್​ ಬಿಷಪ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣ..ಆರೋಪಗಳಿಂದ ಮುಕ್ತಗೊಂಡ ಬಿಷಪ್ ಫ್ರಾಂಕೊ ಮುಲಕ್ಕಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.