ETV Bharat / bharat

ವ್ಯವಹಾರದಲ್ಲಿ ನಷ್ಟ: ಪರಿಹಾರಕ್ಕೆ ಮಗಳ ಬಾಯಿಗೆ ಕುಂಕುಮ ತುಂಬಿ ಕೊಂದ ಪಾಪಿ ತಂದೆ! - ಮಗಳ ಬಾಯಿಗೆ ಕುಂಕುಮ ತುಂಬಿ ಕೊಂದ ಪಾಪಿ ತಂದೆ

'ದುಷ್ಟ ಶಕ್ತಿಗಳನ್ನು ದೂರ ಓಡಿಸಲೆಂದು' ಈ ಆಚರಣೆ ಮಾಡಿರುವ ಮೂರ್ಖ ತಂದೆ ಮಗಳನ್ನೆ ಹತ್ಯೆ ಮಾಡಿದ್ದಾನೆ.

ತಂದೆಯಿಂದಲೇ ಮಂತ್ರಾಚಾರಕ್ಕೆ ಒಳಗಾಗಿದ್ದ ನಾಲ್ಕು ವರ್ಷದ ಬಾಲಕಿ ಸಾವಿಗೀಡಾಗಿದ್ದಾಳೆ
http://10.10.50.80:6060//finalout3/odisha-nle/thumbnail/16-June-2022/15574944_963_15574944_1655366750428.png
author img

By

Published : Jun 16, 2022, 4:50 PM IST

ನೆಲ್ಲೂರು (ಆಂಧ್ರಪ್ರದೇಶ): ತಂದೆಯಿಂದಲೇ ಮಂತ್ರಾಚಾರಕ್ಕೆ ಒಳಗಾಗಿದ್ದ ನಾಲ್ಕು ವರ್ಷದ ಬಾಲಕಿ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾಳೆ. ಅವಳಿ ಹೆಣ್ಣು ಮಕ್ಕಳನ್ನು ಹೊಂದಿದ್ದ ವೇಣುಗೋಪಾಲ್ ಎಂಬಾತ ನೆಲ್ಲೂರು ಜಿಲ್ಲೆಯ ಪೆರಾರೆಡ್ಡಿಪಲ್ಲಿ ಗ್ರಾಮದ ತನ್ನ ಮನೆಯಲ್ಲಿ ಬುಧವಾರ ಕೆಲವು ಧಾರ್ಮಿಕ ಕ್ರಿಯೆಗಳನ್ನು ಈಕೆಯ ಮೇಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ತಂದೆ ವೇಣುಗೋಪಾಲ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 'ದುಷ್ಟ ಶಕ್ತಿಗಳನ್ನು ದೂರ ಓಡಿಸಲು' ಈ ಆಚರಣೆಗಳನ್ನು ಈತ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆರೋಪಿ​ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದನಂತೆ. ಇದರಿಂದ ಪಾರಾಗಲು ವಿಧಿ ವಿಧಾನಗಳ ಭಾಗವಾಗಿ ಮಗಳು ಪುನರ್ವಿಕಾ ಬಾಯಿಗೆ ಕುಂಕುಮದ ಪುಡಿಯನ್ನು ತುಂಬಿಸಿದ್ದಾನೆ. ಇದು ಮಗುವಿನ ಉಸಿರುಗಟ್ಟಿಸಿದೆ. ಇದಾದ ನಂತರ ಆಕೆ ಮೂರ್ಛೆ ಹೋಗಿದ್ದಾಳೆ.

ಮಗುವಿನ ಬಗ್ಗೆ ತಿಳಿದ ಅಕ್ಕಪಕ್ಕದವರು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ನಿನ್ನೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗು ಇಂದು ಕೊನೆಯುಸಿರೆಳೆದಿದೆ. ವೇಣುಗೋಪಾಲ್​ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ: ಪರಿಷತ್​ ಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಪ್ರಿಯಾಂಕ್​ ಖರ್ಗೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.