ETV Bharat / bharat

ಈಜಲು ಹೋಗಿ ಪ್ರಾಣ ಕಳೆದುಕೊಂಡ ನಾಲ್ವರು ಹುಡುಗಿಯರು.. ಕುಟುಂಬದಲ್ಲಿ ಮಡುಗಟ್ಟಿದ ಶೋಕ..

ಮೃತರೆಲ್ಲರೂ 15ರಿಂದ 18 ವರ್ಷದವರಾಗಿದ್ದಾರೆ. ಹುಡುಗಿಯರೊಂದಿಗೆ ಈಜಲು ತೆರಳಿದ್ದ ವಿವೇಕ್​ ರಾಜ್​ ಮಾತ್ರ ಬದುಕುಳಿದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

Four teenaged girls drowned in a river
Four teenaged girls drowned in a river
author img

By

Published : Oct 12, 2021, 5:02 PM IST

ಪಾಟ್ನಾ(ಬಿಹಾರ) : ನವರಾತ್ರಿಯ ಮಹಾಸಪ್ತಮಿ ದಿನ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಹುಡುಗಿಯರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿರುವ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ. ಘಟನೆಯಿಂದಾಗಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ.

Four teenaged girls drown
ಈಜಲು ಹೋಗಿ ಪ್ರಾಣ ಕಳೆದುಕೊಂಡ ನಾಲ್ವರು ಹುಡುಗಿಯರು

ಸರ್ಮೇರಾ ಪೊಲೀಸ್ ಠಾಣೆಯ ಕಾಜಿಚಕ್​​ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನಾಲ್ವರು ಹದಿಹರೆಯದ ಹುಡುಗಿಯರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಇವರೆಲ್ಲರೂ ಧನಯನ್​ ನದಿಯಲ್ಲಿ ಈಜಲು ತೆರಳಿದ್ದರು. ನದಿಯಲ್ಲಿ ಇಳಿದು ಸ್ನಾನ ಮಾಡ್ತಿದ್ದ ಸಂದರ್ಭದಲ್ಲಿ ಎಲ್ಲರೂ ಆಳವಾದ ಜಾಗಕ್ಕೆ ತೆರಳಿದ್ದರಿಂದ ಮುಳುಗಿ ಸಾವನ್ನಪ್ಪಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ನವರಾತ್ರಿ ಸಂಭ್ರಮದಲ್ಲಿ ಎರಡು ತಲೆ, ಮೂರು ಕಣ್ಣಿರುವ ಕರು ಜನನ.. ದುರ್ಗೆಯ ಅವತಾರವೆಂದು ಪೂಜೆ

ಮೃತರನ್ನ ಸೀತಾ ಕುಮಾರಿ, ಸರಿತಾ ಕುಮಾರಿ, ರಾಖಿ ಕುಮಾರಿ ಮತ್ತು ಸೋನಂ ಕುಮಾರಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್​ ವರಿಷ್ಠಾಧಿಕಾರಿ ವಿವೇಕ್​ ರಾಜ್​​, ಸಿಇಒ ಶಿವಾನಂದನ್​ ಸಿಂಗ್ ಸೇರಿ ಅನೇಕ ಅಧಿಕಾರಿಗಳು ಭೇಟಿ ನೀಡಿದ್ದು, ಮೃತರ ಶವಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

ಮೃತರೆಲ್ಲರೂ 15ರಿಂದ 18 ವರ್ಷದವರಾಗಿದ್ದಾರೆ. ಹುಡುಗಿಯರೊಂದಿಗೆ ಈಜಲು ತೆರಳಿದ್ದ ವಿವೇಕ್​ ರಾಜ್​ ಮಾತ್ರ ಬದುಕುಳಿದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.