ETV Bharat / bharat

ಆಯತಪ್ಪಿ ಜಮ್ಮು ಕಾಶ್ಮೀರದ ಚೆನಾಬ್​ ನದಿಗೆ ಬಿದ್ದ ಕಾರು.. ನಾಲ್ವರು ಜಲಸಮಾಧಿ - Chenab river accident

ಜಮ್ಮು ಕಾಶ್ಮೀರದಲ್ಲಿ ಹರಿಯುವ ಚೆನಾಬ್​ ನದಿಗೆ ಕಾರು ಸಮೇತ ಬಿದ್ದ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ.

four people drowned in Chenab river
ನಾಲ್ವರು ಜಲಸಮಾಧಿ
author img

By

Published : Nov 8, 2022, 11:03 PM IST

ಜಮ್ಮು ಮತ್ತು ಕಾಶ್ಮೀರ: ಖಾಸಗಿ ಕಾರೊಂದು ಆಯತಪ್ಪಿ ಚೆನಾಬ್​ ನದಿಗೆ ಬಿದ್ದು ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಇಂದು ರಾತ್ರಿ 7.30 ರ ಸುಮಾರಿಗೆ ಬಟೋಟೆ-ಕಿಶ್ತ್​​ವಾರ್​ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಿಬ್ನೋಟೆ- ಕರಾರಾ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ನದಿ ದಡದ ಮೇಲೆ ಕಾರು ಹೋಗುತ್ತಿದ್ದಾಗ ಸ್ಕಿಡ್​ ಆಗಿ ನೀರಿನಲ್ಲಿ ಬಿದ್ದಿದೆ. ಕಾರಲ್ಲಿದ್ದ ನಾಲ್ವರು ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಪಘಾತ ಸಂಭವಿಸಿದ ಸ್ಥಳದ ಸಮೀಪದಲ್ಲಿದ್ದ ಜೆಕೆ ಅಡ್ವೆಂಚರ್ಸ್‌ನ ಸ್ವಯಂಸೇವಕರು ಮತ್ತು ಈಜುಗಾರರೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ವಾಹನ ಮತ್ತು ಕಾರಲ್ಲಿದ್ದವರ ಪತ್ತೆ ಸಾಧ್ಯವಾಗಿಲ್ಲ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಓದಿ:ವರದಕ್ಷಿಣೆ ಕಿರುಕುಳ ಅಂತಾ ಪೊಲೀಸರ ಮೊರೆ ಹೋದ ಪತ್ನಿ: ಕಟ್ಟು ಕಥೆ ಕಟ್ಟಿ ಅತ್ತೆ - ಮಾವನನ್ನೇ ಜೈಲಿಗೆ ಹಾಕಿಸಿದ ಅಳಿಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.