ಸೆರೈಕೆಲಾ: ಜಾರ್ಖಂಡ್‌ನ ಸೆರೈಕೆಲಾ ಜಿಲ್ಲೆ ಹಳಿ ದಾಟುತ್ತಿದ್ದವರ ಮೇಲೆ ಉತ್ಕಲ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಎಲ್ಲರೂ ರೈಲು ಹಳಿ ದಾಟುತ್ತಿದ್ದರು. ಈ ವೇಳೆ ರೈಲು ಇವರಿಗೆ ಡಿಕ್ಕಿ ಹೊಡೆದಿದೆ. ಗುರುವಾರ ರಾತ್ರಿ ಗಮ್ಹಾರಿಯಾ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಪ್ರಾಥಮಿಕವಾಗಿ ಸಿಕ್ಕಿರುವ ಮಾಹಿತಿ ಪ್ರಕಾರ, ನವದೆಹಲಿ ಪುರಿ ಉತ್ಕಲ್ ಎಕ್ಸ್‌ಪ್ರೆಸ್ ಟಾಟಾನಗರ ನಿಲ್ದಾಣಕ್ಕೆ ಹೋಗುತ್ತಿತ್ತು, ಈ ಮಧ್ಯೆ ಗಮ್ಹಾರಿಯಾ ರೈಲು ನಿಲ್ದಾಣದ ಬಳಿ ದಟ್ಟವಾದ ಮಂಜಿನಿಂದಾಗಿ, ರೈಲು ಹಳಿ ದಾಟುವಾಗ ವೇಗವಾಗಿ ಬಂದ ರೈಲಿಗೆ ಸಿಲುಕಿ ಇವರೆಲ್ಲ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಬಳಿಕ ಮೃತದೇಹಗಳೆಲ್ಲ ರೈಲು ಹಳಿ ಮೇಲೆ ಬಿದ್ದಿದ್ದವು.
ಟಾಟಾನಗರ ಆರ್‌ಪಿಎಫ್ ಮಾಹಿತಿ: ಘಟನೆಯ ಕುರಿತು ಟಾಟಾನಗರ ಆರ್‌ಪಿಎಫ್‌ಗೆ ಮಾಹಿತಿ ಲಭಿಸಿದ್ದು, ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು, ರೈಲ್ವೆ ಹಳಿ ಮೇಲೆ ಬಿದ್ದಿದ್ದ ಎಲ್ಲ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಮಾಡುತ್ತಿದೆ. ಪ್ರಸ್ತುತ ಘಟನೆ ಬಗ್ಗೆ ರೈಲ್ವೆ ಅಧಿಕೃತವಾಗಿ ದೃಢಪಡಿಸಿಲ್ಲ. ರೈಲ್ವೆ ಕಂಬ ನಂ. 260/20ರ ಬಳಿ ಈ ಘಟನೆ ನಡೆದಿದ್ದು, ಮೂರು ಮೃತದೇಹಗಳು ಡೌನ್ ರೈಲ್ವೇ ಲೈನ್‌ನಲ್ಲಿ ಮತ್ತು ಒಂದು ಮೃತದೇಹವು ಮೇಲಿನ ರೈಲು ಮಾರ್ಗದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ಸಾಂಬಾ ಜಿಲ್ಲೆಯ ಗಡಿ ಪ್ರದೇಶದ ಬಳಿ ಸುರಂಗ ಪತ್ತೆ ಹಚ್ಚಿದ ಭದ್ರತಾ ಪಡೆ: ಹೆಚ್ಚಿದ ಶೋಧ ಕಾರ್ಯಾಚರಣೆ