ಜೋಧಪುರ (ರಾಜಸ್ಥಾನ): ರಾಜಸ್ಥಾನದ ಜೋಧಪುರದಲ್ಲಿ ಭಾರಿ ದುರಂತ ಸಂಭವಿಸಿದೆ. ಮನೆಯೊಂದರಲ್ಲಿ ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡು ನಾಲ್ವರು ಸಜೀವ ದಹನವಾಗಿದ್ದು, ಇತರ 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಲ್ಲಿನ ಕೀರ್ತಿ ನಗರದ ಮನೆಯೊಂದರಲ್ಲಿ ಶನಿವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಈಗಾಗಲೇ ನಾಲ್ವರ ಮೃತದೇಹಗಳು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಹಲವರಿಗೆ ಶೇ.80ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಸಿಲಿಂಡರ್ ಸೋರಿಕೆ ಪರಿಶೀಲನೆ ವೇಳೆ ಸ್ಫೋಟ: ಈ ಮನೆಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಇಂದು ಮಧ್ಯಾಹ್ನ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯ ಶಂಕೆ ವ್ಯಕ್ತವಾಗಿದೆ. ಈ ವೇಳೆ, ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬೆಂಕಿಕಡ್ಡಿಯ ಮೂಲಕ ಗ್ಯಾಸ್ ಸೋರಿಕೆಯನ್ನು ಪರಿಶೀಲಿಸಿದ್ದರು. ಆಗ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅಲ್ಲೇ ಇರಿಸಲಾಗಿದ್ದ ಇತರ ಸಿಲಿಂಡರ್‌ಗಳು ಕೂಡ ಸ್ಫೋಟಿಸಿದೆ. ಒಟ್ಟಾರೆ ಏಕಾಏಕಿ ನಾಲ್ವರು ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿಲಿಂಡರ್ ಸ್ಫೋಟದಿಂದ ಎರಡು ಅಂತಸ್ತಿನ ಮನೆ ಕುಸಿತ : ನಾಲ್ವರ ಸಾವು
ಈ ಮನೆಯ ಪ್ರದೇಶವು ಕಿರಿದಾಗಿದ್ದು, ಅಲ್ಲಿಯೇ ಸರತಿಯಲ್ಲಿ ನಿಂತಿದ್ದ ಅನೇಕರು ಸಿಲಿಂಡರ್‌ಗಳ ಸ್ಫೋಟಕ್ಕೆ ಗುರಿಯಾಗಿದ್ದಾರೆ. ಸ್ಫೋಟ ಸಂಭವಿಸಿದ ಮನೆಯ ಕೊಠಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅಲ್ಲದೇ, ಈ ಅಪಘಾತ ಸಂಭವಿಸಿದಾಗ ಗ್ಯಾಸ್ ಏಜೆನ್ಸಿಯ ಪಿಕಪ್ ವಾಹನವೂ ಮನೆಯ ಹೊರಗೆ ನಿಂತಿತ್ತು. ಮನೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಸಿಲಿಂಡರ್ಗಳನ್ನು ಇಡಲಾಗಿತ್ತು. ಹೊರಗೆಡೆ ನಿಂತಿದ್ದ ಹಲವು ವಾಹನಗಳಿಗೂ ಬೆಂಕಿ ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಗೋಕಾಕ್ನ ಶಾಲೆಯಲ್ಲಿ ಸಿಲಿಂಡರ್ ಸ್ಫೋಟ.. ಧಾನ್ಯ, ಸಾಮಗ್ರಿ ಭಸ್ಮ; ತಪ್ಪಿದ ಭಾರಿ ಅನಾಹುತ
ಸಿಲಿಂಡರ್‌ಗಳ ಸರಣಿ ಸ್ಫೋಟದಿಂದ ದೂರದವರೆಗೆ ಹೊಗೆ ಆವರಿಸಿತ್ತು. ವಿಷಯ ತಿಳಿದು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದವು. ಮಹಾನಗರ ಪಾಲಿಕೆ ಉತ್ತರ ಮೇಯರ್ ಕುಂತಿ ದೇವೋರಾ ಹಾಗೂ ಡಿಸಿಪಿ ಅಮೃತಾ ದುಹಾನ್ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಈ ಘಟನೆ ಬಗ್ಗೆ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಗೆಳತಿ, ಆಕೆಯ ತಾಯಿಯೊಂದಿಗೂ ಸಂಬಂಧ: ನಶೆಯಲ್ಲಿ ಮನೆಗೆ ತೆರಳಿ ಶವವಾದ ಯುವಕ