ETV Bharat / bharat

ಮನೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ.. ನಾಲ್ವರ ಸಜೀವ ದಹನ!

ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಸಜೀವ ದಹನವಾಗಿರುವ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದೆ.

ನಾಲ್ವರ ಸಜೀವ ದಹನ
ನಾಲ್ವರ ಸಜೀವ ದಹನ
author img

By

Published : Jul 19, 2021, 8:53 AM IST

Updated : Jul 19, 2021, 9:21 AM IST

ಜೋಧ್​ಪುರ (ರಾಜಸ್ಥಾನ) : ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಸಜೀವ ದಹನವಾಗಿರುವ ಘಟನೆ ಶಾಸ್ತ್ರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರನ್ನು ಸುಭಾಷ್ ಚೌಧರಿ (81), ನೀಲಂ ಚೌಧರಿ (76), ಪಲ್ಲವಿ ಚೌಧರಿ (50) ಮತ್ತು ಲಾವಣ್ಯ ಚೌಧರಿ (40) ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಭಾನುವಾರ ಸಂಜೆ ಐದು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ರಾತ್ರಿ 9 ಗಂಟೆಗೆ ಹೊಗೆ ಜತೆಗೆ ವಾಸನೆಯೂ ಬಂತು. ಎಲ್ಲರೂ ಹೋಗಿ ನೋಡುವ ವೇಳೆಗೆ ಒಂದೇ ಕೋಣೆಯಲ್ಲಿ ಸುಟ್ಟುಕರಕಲಾದ ರೀತಿಯಲ್ಲಿ ನಾಲ್ವರ ಮೃತದೇಹಗಳಿದ್ದವು ಎಂದಿದ್ದಾರೆ.

ಸುಭಾಷ್​ ಚೌಧರಿ, ಪತ್ನಿ ಪಲ್ಲವಿ ಚೌಧರಿ, ಮಗಳು ಲಾವಣ್ಯಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಮೂವರನ್ನು ಪಲ್ಲವಿಯವರೇ ನೋಡಿಕೊಳ್ಳಬೇಕಿತ್ತು. ಸುಭಾಷ್​ ಚೌಧರಿಯವರಿಗೆ ಮೂವರು ಮಕ್ಕಳಿದ್ದು, ಕಿರಿಯ ಮಗಳು ಚಂಡೀಗಢದಲ್ಲಿ ವಾಸವಿದ್ದರು.

ಇದನ್ನೂ ಓದಿ:ಮಣಪ್ಪುರಂ Gold loan branch ದರೋಡೆ: 3 ಗಂಟೆಯೊಳಗೆ ಇಬ್ಬರು ದುಷ್ಕರ್ಮಿಗಳ ಎನ್​ಕೌಂಟರ್, ಮೂವರು ಎಸ್ಕೇಪ್

ಪೊಲೀಸರ ಪ್ರಕಾರ ಯಾರೋ ಒಬ್ಬರು ಬೆಂಕಿ ಹಚ್ಚಿದ್ದಾರೆ. ಆ ಬೆಂಕಿ ಇಡೀ ಮನೆ ವ್ಯಾಪಿಸಿ, ಇವರೆಲ್ಲ ಮೃತಪಟ್ಟಿದ್ದಾರೆ. ಯಾಕೆಂದರೆ, ನಾಲ್ವರ ಶವಗಳು ಒಂದೇ ಕೋಣೆಯಲ್ಲಿ ಪತ್ತೆಯಾಗಿದ್ದವು. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Last Updated : Jul 19, 2021, 9:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.