ETV Bharat / bharat

ಮೋದಿ ಸಂಪುಟದಲ್ಲಿ ಕರ್ನಾಟಕಕ್ಕಿಲ್ಲ 'ಕ್ಯಾಬಿನೆಟ್ ದರ್ಜೆ' ಸ್ಥಾನಮಾನ: ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.. - ಕೇಂದ್ರ ಸಚಿವ ಸಂಪುಟ ಪುನರ್​ ರಚನೆ

ನರೇಂದ್ರ ಮೋದಿ ನೂತನ ಸಚಿವ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಮಂತ್ರಿಗಿರಿ ನೀಡಲಾಗಿದೆ. ಆದರೆ ಯಾರಿಗೂ ಕೂಡ ಕ್ಯಾಬಿನೆಟ್​ ದರ್ಜೆ ಸಚಿವ ಸ್ಥಾನ ಸಿಕ್ಕಿಲ್ಲ.

New Union cabinet
New Union cabinet
author img

By

Published : Jul 7, 2021, 9:45 PM IST

ನವದೆಹಲಿ: ಪ್ರಧಾನಿ ಮೋದಿ ಸಂಪುಟ ಪುನರ್​ ರಚನೆಯಾಗಿದ್ದು, 43 ಸಂಸದರ ಪೈಕಿ ಕರ್ನಾಟಕದ ನಾಲ್ವರು ಸಂಸದರಿಗೆ ಮಂತ್ರಿಭಾಗ್ಯ ಒಲಿದು ಬಂದಿದೆ. ಆದರೆ ರಾಜ್ಯದ ಯಾರಿಗೂ ಕೂಡ ಕ್ಯಾಬಿನೆಟ್​ ದರ್ಜೆಯ ಸ್ಥಾನ ನೀಡಿಲ್ಲ. ರಾಜ್ಯದಿಂದ 22 ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ, ಮೋದಿ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯವಾಗಿದೆ ಎಂಬ ಮಾತು ಕೇಳಿ ಬರಲು ಶುರುವಾಗಿದೆ.

New Union cabinet
ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಎ.ನಾರಾಯಣ ಸ್ವಾಮಿ ಮತ್ತು ಭಗವಂತ್ ಖೂಬಾ ಪ್ರಮಾಣ ವಚನ

ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಪುನರ್​ ರಚನೆ ಮಾಡಲಾಗಿದೆ. ಪ್ರಮುಖವಾಗಿ ಉತ್ತರ ಪ್ರದೇಶದ 7 ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಕರ್ನಾಟಕದಿಂದಲೂ ಸಂಸದರಾದ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ್​ ಖೂಬಾ ಹಾಗೂ ರಾಜೀವ್​ ಚಂದ್ರಶೇಖರ್​​ಗೆ ಸಚಿವ ಸ್ಥಾನ ದೊರೆತಿದೆ. ಎಲ್ಲರಿಗೂ ಕೇಂದ್ರ ಖಾತೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿದೆ.

ಇದರ ಮಧ್ಯೆ ಕರ್ನಾಟಕದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದ ಡಿ.ವಿ ಸದಾನಂದಗೌಡ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಹೊಸದಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಎಲ್ಲರಿಗೂ ಇಂದು ರಾತ್ರಿಯೇ ವಿವಿಧ ಹುದ್ದೆ ನೀಡಲಾಗುವುದು ಎಂದು ತಿಳಿದು ಬಂದಿದೆ.

ಶೋಭಾ ಸಂತಸ

  • This is a matter of pride for workers because I worked for my party for 30 years. I have been given a responsibility and I will work: BJP MP Shobha Karandlaje on her inclusion in Union Cabinet pic.twitter.com/E3vsCvDLSZ

    — ANI (@ANI) July 7, 2021 " class="align-text-top noRightClick twitterSection" data=" ">

ಕಳೆದ 30 ವರ್ಷಗಳ ಕಾಲ ನನ್ನ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಇದೀಗ ಜವಾಬ್ದಾರಿ ನೀಡಲಾಗಿದ್ದು, ಎಲ್ಲರೂ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಇದು ಕಾರ್ಯಕರ್ತರಿಗೆ ಹೆಮ್ಮೆಯ ವಿಚಾರ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇದನ್ನೂ ಓದಿರಿ: 2 ರೂಪಾಯಿಗೆ ಔಷಧ​, 8 ಲಕ್ಷ ರೋಗಿಗಳ ಸೇವೆ: ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಡಾ.ಮಹೇಂದ್ರಭಾಯ್​

ನೂತನ ಸಚಿವರಿಗೆ ವಿಶ್ ಮಾಡಿದ ನಮೋ

  • I congratulate all the colleagues who have taken oath today and wish them the very best for their ministerial tenure. We will continue working to fulfil aspirations of the people and build a strong and prosperous India. #Govt4Growth pic.twitter.com/AVz9vL77bO

    — Narendra Modi (@narendramodi) July 7, 2021 " class="align-text-top noRightClick twitterSection" data=" ">

ಇಂದು ಪ್ರಮಾಣವಚನ ಸ್ವೀಕರಿಸಿದ ಎಲ್ಲ ಸಹೋದ್ಯೋಗಿಗಳಿಗೆ ಅಭಿನಂದನೆಗಳು. ಅವರ ಸಚಿವ ಅಧಿಕಾರವಧಿಗೆ ಶುಭ ಹಾರೈಸುತ್ತೇನೆ. ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೆಲಸ ಮಾಡೋಣ ಎಂದಿರುವ ಮೋದಿ, ಸಮೃದ್ಧ ಭಾರತ ನಿರ್ಮಾಣ ಮಾಡೋಣ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.