ETV Bharat / bharat

ಆರು ವರ್ಷದ ಮಗು ಸೇರಿ ಒಂದೇ ಕುಟುಂಬದ ನಾಲ್ವರ ಕೊಲೆ.. ಗದ್ದೆಯಲ್ಲಿ ಶವಗಳು ಪತ್ತೆ.. - ಜಾರ್ಖಂಡ್​ ಚೈಬಾಸ್​

ಮೃತದೇಹಗಳನ್ನ ಈಗಾಗಲೇ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ..

Four members of a family
Four members of a family
author img

By

Published : Oct 2, 2021, 2:51 PM IST

ಚೈಬಾಸ್​​(ಜಾರ್ಖಂಡ್​) : ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಮಾಡಿರುವ ಘಟನೆ ಜಾರ್ಖಂಡ್​ನ ಚೈಬಾಸ್​​ನಲ್ಲಿ ನಡೆದಿದೆ. ಇದರಲ್ಲಿ ಆರು ವರ್ಷದ ಮಗು ಸಹ ಸೇರಿದೆ. ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬುದರ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ.

ಹಟ್ಗಮ್‌ಹರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಡಪೋಸಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎಲ್ಲರ ಮೃತದೇಹಗಳು ಊರ ಹೊರಗಿನ ಗದ್ದೆಯಲ್ಲಿ ಪತ್ತೆಯಾಗಿವೆ. ಘಟನೆಯಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.

ಇದನ್ನೂ ಓದಿರಿ: ವೇಶ್ಯಾವಾಟಿಕೆಗೆ ಬಾಲಕಿಯ ಮಾರಾಟ ಯತ್ನ.. ಚಾಣಾಕ್ಷತೆಯಿಂದ ಮೂವರು ಮಹಿಳೆಯರನ್ನು ಬಂಧಿಸಿದ ಪೊಲೀಸರು

ಮೃತರನ್ನ ಓನಮುನಿ(26) ಆತನ ಪತ್ನಿ ಮಣಿ (22), ಮಗನಾದ ಮುಗ್ರು (6) ಹಾಗೂ ಓನಮುನಿಯ ಸಹೋದರನಾದ ಗೊಬರೋ(22) ಎಂದು ಗುರುತಿಸಲಾಗಿದೆ. ಹರಿತವಾದ ಆಯುಧ ಬಳಕೆ ಮಾಡಿ ಇವರ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮೃತದೇಹಗಳನ್ನ ಈಗಾಗಲೇ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.