ಬೊಕಾರೊ: ಬೊಕಾರೊ ಗಣಿ ದುರಂತದಲ್ಲಿ ಸಾವನ್ನೇ ಗೆದ್ದ 4 ಕಾರ್ಮಿಕರು 3 ದಿನಗಳ ನಂತರ ಸಿಲುಕಿದ್ದ ಸ್ಥಳದಿಂದ ಹೊರಬಂದಿದ್ದಾರೆ. ಅಮಲಾಬಾದ್ ಒಪಿ ಪ್ರದೇಶದ ಪರ್ವತಪುರ ಕಲ್ಲಿದ್ದಲು ಬ್ಲಾಕ್‌ನಲ್ಲಿ ಸುಮಾರು 96 ಗಂಟೆಗಳ ಕಾಲ ನಾಲ್ವರು ಕಾರ್ಮಿಕರು ಸಿಲುಕಿಕೊಂಡಿದ್ದರು.
ಶ್ರವಣ್ ರಾಜ್ವರ್, ಲಕ್ಷ್ಮಣ್ ರಾಜ್ವರ್, ಅನದಿ ಸಿಂಗ್ ಮತ್ತು ಭರತ್ ಸಿಂಗ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ಪ್ರಕಾರ, ನವೆಂಬರ್ 26ರಂದು ಬೊಕಾರೊದಲ್ಲಿ ಗಣಿ ಅಪಘಾತ ಸಂಭವಿಸಿತ್ತು. ಈ ವೇಳೆ ಗಣಿ ಕುಸಿದಿದ್ದು, ನಾಲ್ವರು ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದರು.
ಆರಂಭದಲ್ಲಿ ಕಾರ್ಮಿಕರು ಅಪಾಯಕ್ಕೆ ಸಿಲುಕಿದ ವಿಷಯದ ಬಗ್ಗೆ ಮಾಹಿತಿ ಪಡೆದರೂ, ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿರಲಿಲ್ಲ. ಪ್ರಕರಣದ ಗಂಭೀರತೆಯನ್ನರಿತು ನ.27ರಂದು ಶೀಘ್ರ ಕಾರ್ಯಾಚರಣೆಗೆ ಆದೇಶಿಸಲಾಯ್ತು. ಆ ಬಳಿಕ ಎನ್‌ಡಿಆರ್‌ಎಫ್ ತಂಡ ನವೆಂಬರ್ 28ರಂದು ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಆರಂಭಿಸಿತ್ತು.
ಇದನ್ನೂ ಓದಿ: 2020ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 7ಕ್ಕಿಂತ ಹೆಚ್ಚು ಜಿಡಿಪಿ ನಿರೀಕ್ಷೆ
ಅಂತಿಮವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಎನ್‌ಡಿಆರ್‌ಎಫ್ ತಂಡ ಅಪಾಯದಲ್ಲಿ ಸಿಲುಕಿಕೊಂಡಿದ್ದ ನಾಲ್ವರು ಕಾರ್ಮಿಕರನ್ನು ಗಣಿಯಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಾವಿನ ದವಡೆಯಲ್ಲಿದ್ದ ಕಾರ್ಮಿಕರು ಸಾವನ್ನೇ ಗೆದ್ದು ಬಂದಿದ್ದರಿಂದ ಎಲ್ಲರೂ ಸಂತಸಗೊಂಡಿದ್ದಾರೆ.