ಹೈದರಾಬಾದ್ (ತೆಲಂಗಾಣ) : ಹನುಮಕೊಂಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮೇಡಾರಂ ಕಡೆಯಿಂದ ಕುಟುಂಬ ಸದಸ್ಯರೊಂದಿಗೆ ಬರುತ್ತಿದ್ದ ಕಾರಿಗೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಹನ್ಮಕೊಂಡ ಜಿಲ್ಲೆ ಆತ್ಮಕೂರು ಮಂಡಲದ ನೀರುಕುಳ್ಳ ಕ್ರಾಸ್ ಬಳಿಯ ಮುಳುಗು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವಾರಂಗಲ್‌ನ ಕಾಶಿಬುಗ್ಗದ 8 ಕುಟುಂಬ ಸದಸ್ಯರು ಮೇಡಾರಂ ದೈವ ದರ್ಶನ ಪಡೆದು ವಾಪಾಸಾಗುತ್ತಿದ್ದ ವೇಳೆ ನೀರುಕುಳ್ಳ ಕ್ರಾಸ್ ಬಳಿ ಎದುರುಗಡೆಯಿಂದ ಬಂದ ಟಿಪ್ಪರ್ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಅನುಮೂಲ ನರಸಿಂಹಸ್ವಾಮಿ, ವೆಲ್ದಂಡಿ ಸಾಂಬರಾಜು, ವೆಲ್ದಂಡಿ ಆಕಾಂಕ್ಷಾ, ವೆಲ್ದಂಡಿ ಲಕ್ಷ್ಮೀಪ್ರಸನ್ನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
8 ಮಂದಿ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಅನುಮೂಲರಾಜ ಶ್ರೀ ಮತ್ತು ಅನುಮೂಲ ಹರ್ಷಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ವಾರಂಗಲ್ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರು ವರ್ಷದ ಬಾಲಕ ಅಕ್ಷಯ ರಾಜು, ಕಾರು ಚಲಾಯಿಸುತ್ತಿದ್ದ ಚಾಲಕ ಆಕರ್ಷ್ ಜೊತೆಗೆ ಅಪಘಾತದಿಂದ ಪಾರಾಗಿದ್ದಾರೆ. ಅಪಘಾತದ ವೇಳೆ ಕಾರಿನಲ್ಲಿದ್ದ ಏರ್ ಬಲೂನ್‌ಗಳು ತೆರೆದುಕೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದರಿಂದ ಹನಮಕೊಂಡದ ಕಾಶಿಬುಗ್ಗ ಪ್ರದೇಶದಲ್ಲಿ ಕತ್ತಲು ಕವಿದಿತ್ತು. ಲಾರಿ ಬಲವಾಗಿ ಡಿಕ್ಕಿ ಹೊಡೆದಿದ್ದರಿಂದ ಮೃತದೇಹಗಳು ಕಾರಿನಲ್ಲಿ ಸಿಲುಕಿಕೊಂಡಿವೆ. ಮೃತ ದೇಹಗಳನ್ನು ಹೊರತೆಗೆಯಲು ಗಂಟೆಗಟ್ಟಲೆ ಶ್ರಮ ಪಡಬೇಕಾದ ಹೃದಯ ವಿದ್ರಾವಕ ಘಟನೆ ಅನೇಕ ಜನರನ್ನು ಒಂದುಗೂಡಿಸಿತು.
ವಾರಂಗಲ್ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ : ನಾಲ್ವರು ಮೃತರನ್ನು ಮರಣೋತ್ತರ ಪರೀಕ್ಷೆಗಾಗಿ ವಾರಂಗಲ್ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಹಿಳೆಯರು ವಾರಂಗಲ್ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯ ಬುಡಕಟ್ಟು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಅವರು ವಾರಂಗಲ್ ಸಿಪಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಸಚಿವರು ವಾರಂಗಲ್ ಎಂಜಿಎಂ ಅಧೀಕ್ಷಕರೊಂದಿಗೆ ಮಾತನಾಡಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಆದೇಶಿಸಿದರು.
ಪಶ್ಚಿಮ ಬಂಗಾಳದಲ್ಲಿ ಗೂಡ್ಸ್ ರೈಲುಗಳ ಅಪಘಾತ : ಇನ್ನೊಂದೆಡೆ ಪಶ್ಚಿಮಬಂಗಾಳದಲ್ಲಿ ಗೂಡ್ಸ್ ರೈಲುಗಳೆರಡು ಡಿಕ್ಕಿಯಾದ ಘಟನೆ ಶನಿವಾರ ಮುಂಜಾನೆ 4 ಗಂಟೆಗೆ ನಡೆದಿತ್ತು. ಬಂಕುರಾದ ಓಂಡಾ ರೈಲು ನಿಲ್ದಾಣದಲ್ಲಿ ಎರಡು ಸರಕು ಸಾಗಣೆ ರೈಲುಗಳು ಡಿಕ್ಕಿಯಾಗಿದ್ದವು. ಡಿಕ್ಕಿಯ ರಭಸಕ್ಕೆ ಗೂಡ್ಸ್ ರೈಲಿನ 12 ಬೋಗಿಗಳು ಹಳಿತಪ್ಪಿದ್ದವು. ಇದರಿಂದಾಗಿ ಖರಗ್‌ಪುರ-ಬಂಕುರಾ-ಆದ್ರಾ ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂಬುದು ತಿಳಿದುಬಂದಿತ್ತು.
ಮೊದಲ ಗೂಡ್ಸ್ ರೈಲು ಓಂಡಾ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಮತ್ತೊಂದು ಗೂಡ್ಸ್ ರೈಲು ರಭಸವಾಗಿ ಡಿಕ್ಕಿ ಹೊಡೆದಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿತ್ತು. ಈ ಅಪಘಾತದಲ್ಲಿ ಗೂಡ್ಸ್ ರೈಲುಗಳ 12 ಬೋಗಿಗಳು ಹಳಿತಪ್ಪಿದ್ದವು. ಗೂಡ್ಸ್ ರೈಲು ಚಾಲಕ ಗಂಭೀರವಾಗಿ ಗಾಯಗೊಂಡಿದ್ದ. ಡಿಕ್ಕಿ ವೇಳೆ ದೊಡ್ಡ ಸದ್ದು ಕೇಳಿ ಬಂದಿದ್ದು, ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ತಿಳಿದು ಬಂದಿತ್ತು.
ರೈಲ್ವೇ ಮೂಲಗಳ ಮಾಹಿತಿಯ ಪ್ರಕಾರ, ಎರಡೂ ಗೂಡ್ಸ್ ರೈಲುಗಳು ಖಾಲಿಯಾಗಿದ್ದವು. ಆದರೆ ಅದು ಹೇಗೆ ಅಪಘಾತ ಸಂಭವಿಸಿದೆ ಎಂಬುದು ತಿಳಿಯುತ್ತಿಲ್ಲ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ರೈಲುಗಳು ಗುದ್ದಿಕೊಂಡ ಕಾರಣ ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಈ ಮಾರ್ಗ ಬಂದ್ ಆಗಿದೆ. ಸಿಬ್ಬಂದಿ ಆದಷ್ಟು ಬೇಗ ಈ ಮಾರ್ಗವನ್ನು ತೆರವು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: Goods Trains collided: ಪಶ್ಚಿಮ ಬಂಗಾಳದಲ್ಲಿ ಗೂಡ್ಸ್ ರೈಲುಗಳು ಡಿಕ್ಕಿ, ಬೋಗಿಗಳು ಚೆಲ್ಲಾಪಿಲ್ಲಿ