ETV Bharat / bharat

ಕಂದಕಕ್ಕೆ ಉರಳಿದ ಕಾರು​: ದಂಪತಿ ಸೇರಿ ನಾಲ್ವರ ಸಾವು - road accident in sirmaur

ಸಿರ್ಮೌರ್ ಜಿಲ್ಲೆಯಲ್ಲಿ ಕಾರೊಂದು ಕಂದಕಕ್ಕೆ ಬಿದ್ದು, ದಂಪತಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಕಂದಕಕ್ಕೆ ಉರಳಿದ ಕಾರ್
ಕಂದಕಕ್ಕೆ ಉರಳಿದ ಕಾರ್
author img

By

Published : May 16, 2023, 11:58 AM IST

ಸಿರ್ಮೌರ್​ (ಹಿಮಾಚಲಪ್ರದೇಶ): ಇಲ್ಲಿಯ ನಹಾನ್​​ ಎಂಬಲ್ಲಿ ಕಾರ್​ವೊಂದು ಕಂದಕಕ್ಕೆ ಬಿದ್ದ ಪರಿಣಾಮ 4 ಜನ ಮೃತ ಪಟ್ಟಿರುವ ಘಟನೆ ಸಂಗ್ರಾಹ್ ಉಪವಿಭಾಗದ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ. ದಂಪತಿ ಸೇರಿ 4 ಮಂದಿ ಸಾವನ್ನಪ್ಪಿದ್ದಾರೆ. ಕಮಲ್ ರಾಜ್ (40), ಜೀವನ್ ಸಿಂಗ್ (63) ಮತ್ತು ಅವರ ಪತ್ನಿ ಸುಮಾ ದೇವಿ (54) ಫಾಗು ದಹನ್ ಮತ್ತು ರೇಖಾ (25) ಮೃತರು ಎಂದು ತಿಳಿದು ಬಂದಿದೆ. ಸದ್ಯ 4 ಮೃತ ದೇಹಗಳನ್ನು ಕಾರಿನಿಂದ ಹೊರತೆಗೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿರುವುದಾಗಿ ಡಿಎಸ್ಪಿ ಮುಖೇಶ್ ಕುಮಾರ್ ತಿಳಿಸಿದ್ದಾರೆ.

ಲಾನಾಚೇಟಾ-ರಾಜ್‌ಗಢ ರಸ್ತೆಯಲ್ಲಿ ಘಟನೆ: ಮೃತರಲ್ಲಿ 3 ಮಂದಿ ಒಂದೇ ಗ್ರಾಮದ ನಿವಾಸಿಗಳು ಎಂದು ಹೇಳಲಾಗಿದೆ. ಲಾನಾಚೇಟಾ-ರಾಜ್‌ಗಢ ರಸ್ತೆಯ ಪಬೂರ್ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಆಳವಾದ ಕಂದಕಕ್ಕೆ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ನೌಹ್ರಾಧರ್ ಠಾಣೆ ಮತ್ತು ಸಂಗ್ದಾ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ 4 ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ನಿನ್ನೆ 2 ಕಡೆ ಅಪಘಾತಗಳು, ಆಂಧ್ರ ಪ್ರದೇಶ: ನಿನ್ನೆ ಲಾರಿ ಮತ್ತು ತೂಫಾನ್​ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಏಳು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಂಡಾಪುರಂ ತಾಲೂಕಿನ ಚಿತ್ರಾವತಿ ಸೇತುವೆ ಬಳಿ ಘಟನೆ ನಡೆದಿದೆ. ಕಾಕಿನಾಡ ಜಿಲ್ಲೆಯಲ್ಲಿ ಆಟೋ ಮತ್ತು ಖಾಸಗಿ ಬಸ್​​​ ನಡುವೆ ಡಿಕ್ಕಿಯಾಗಿ ಆರು ಮಂದಿ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ 2 ದಿಗಳ ಹಿಂದೆ ನಡೆದಿತ್ತು. ಅದು ಮಾಸುವ ಮುನ್ನವೇ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ತಾಡಿಪತ್ರಿ ಮೂಲದ ಜನರು ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿ ತೂಫಾನ್​ ವಾಹನದಲ್ಲಿ ವಾಪಸಾಗುತ್ತಿದ್ದ ವೇಳೆ ಅಪಘಾತವಾಗಿದೆ. ತಾಡಪತ್ರಿ ಕಡೆಯಿಂದ ಬಂದ ತೂಫಾನ್​ ವಾಹನಕ್ಕೆ ಡಿಕ್ಕಿ ಹೊಡೆದಿದೆ. ತೂಫಾನ್​ನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಏಳು ಜನ ಸ್ಥಳದಲ್ಲೇ ಸಾವನ್ನಪ್ಪಿದರು. ಗಂಭೀರ ಗಾಯಗೊಂಡವರನ್ನು ತಾಡಪತ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಬೆಳಗಿನ ಜಾವವಾದ್ದರಿಂದ ಎರಡು ವಾಹನಗಳು ನಡುವೆ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಸ್ತೆಯಿಂದ ಕಂದಕಕ್ಕೆ ಜಾರಿ ಅರ್ಧಕ್ಕೆ ನಿಂತ ಬಸ್, ಕೂದಲೆಳೆ ಅಂತರದಲ್ಲಿ ಯಾತ್ರಿಕರು ಪಾರು: ವಿಡಿಯೋ

ಛತ್ತೀಸ್‌ಗಢ ರಸ್ತೆ ಅಪಘಾತ: ಎರಡುದಿಗಳ ಹಿಂದೆ ಬಲೋದಬಜಾರ್‌ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಪಿಕಪ್​ ವಾಹನಕ್ಕೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಒಂದು ಮಗು ಮತ್ತು ಮಹಿಳೆಯರು ಸೇರಿ 6 ಜನರು ಅಪಘಾತದಲ್ಲಿ ಸಾವನ್ನಪ್ಪಿದರು. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಸೇತುವೆಯಿಂದ ಬಿದ್ದ ಬಸ್​.. 15 ಮಂದಿ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.