ETV Bharat / bharat

ದೋಣಿಯಲ್ಲಿ ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್​​ ಸ್ಫೋಟ: ನಾಲ್ವರು ದುರ್ಮರಣ, 20 ಜನರಿಗೆ ಗಾಯ - ಈಟಿವಿ ಭಾರತ ಕನ್ನಡ

ಪಾಟ್ನಾದ ಮನೇರ್​ ಪ್ರದೇಶದಲ್ಲಿ ಗಂಗಾ ನದಿಯ ಮಧ್ಯೆ ದೋಣಿಯಲ್ಲಿ ಅಡುಗೆ ಮಾಡುತ್ತಿದ್ದ ಗ್ಯಾಸ್ ಸಿಲಿಂಡರ್‌ ಸ್ಫೋಟಗೊಂಡು, ನಾಲ್ವರು ಮೃತಪಟ್ಟಿದ್ದಾರೆ.

four-die-as-lpg-cylinder-explodes-on-a-boat-in-ganga-river
ದೋಣಿಯಲ್ಲಿ ಅಡುಗೆ ಮಾಡುವಾಗ ಸಿಲಿಂಡರ್​​ ಸ್ಫೋಟ: ನಾಲ್ವರ ದುರ್ಮರಣ, 20 ಜನರಿಗೆ ಗಾಯ
author img

By

Published : Aug 6, 2022, 3:20 PM IST

Updated : Aug 6, 2022, 3:36 PM IST

ಪಾಟ್ನಾ (ಬಿಹಾರ): ಬಿಹಾರದ ಪಾಟ್ನಾ ಸಮೀಪ ಗಂಗಾ ನದಿಯಲ್ಲಿ ಭಾರಿ ದುರಂತ ಸಂಭವಿಸಿದೆ. ನದಿಯ ನಡುವೆ ಮೋಟಾರ್ ​ದೋಣಿಯಲ್ಲಿ ಎಲ್​ಪಿಸಿ ಗ್ಯಾಸ್​​ ಸಿಲಿಂಡರ್​ ಸ್ಫೋಟಗೊಂಡು ನಾಲ್ವರು ದುರ್ಮರಣ ಹೊಂದಿದ್ದರೆ, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇಲ್ಲಿನ ಮನೇರ್​ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನದಿಯ ಮಧ್ಯೆ ಇದ್ದಾಗ ದೋಣಿಯಲ್ಲಿ ನಾವಿಕರೊಬ್ಬರು ಅಡುಗೆ ಮಾಡುತ್ತಿದ್ದ ಸಿಲಿಂಡರ್‌ನಿಂದ ಅನಿಲ್​ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅದೃಷ್ಟವಾಶತ್​ ನದಿಯಲ್ಲಿ ದೋಣಿ ಮುಳುಗಿಲ್ಲ. ಇದರಿಂದ ಇತರ ನಾವಿಕರು ಅದನ್ನು ಮನೇರ್‌ನಲ್ಲಿ ಗಂಗಾ ನದಿಯ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ಧಾರೆ. ಮೃತ ದೇಹಗಳು ಮತ್ತು ಎಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರದೇಶದಲ್ಲಿ ಮೋಟಾರ್​ ದೋಣಿಗಳನ್ನು ಸಾಮಾನ್ಯವಾಗಿ ಮರಳು ಸಾಗಣೆಗೆ ಬಳಸಲಾಗುತ್ತದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಸಹೋದ್ಯೋಗಿ ಗುದದ್ವಾರಕ್ಕೆ ಅಧಿಕ ಒತ್ತಡ ಗಾಳಿಯ ಪೈಪ್​ ಇಟ್ಟ ಕಾರ್ಮಿಕ: ಪ್ರಾಣಕ್ಕೆ ಕುತ್ತು ತಂದ ಚೇಷ್ಟೆ

Last Updated : Aug 6, 2022, 3:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.