ETV Bharat / bharat

ಪಿಕಪ್​ ವಾಹನ ಪಲ್ಟಿ.. ನಾಲ್ವರು ಅಯ್ಯಪ್ಪ ಭಕ್ತರು ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ - ಬೊಲೆರೋ ಪಿಕ್​ ವಾಹನ ಪಲ್ಟಿ

ಆಂಧ್ರಪ್ರದೇಶದಲ್ಲಿ ದುರಂತವೊಂದು ಸಂಭವಿಸಿದೆ. ಪಿಕಪ್​​ ವಾಹನ ಪಲ್ಟಿಯಾಗಿ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿರುವ ಘಟನೆ ಬಾಪಟ್ಲ ಜಿಲ್ಲೆಯಲ್ಲಿ ಕಂಡುಬಂದಿದೆ.

Ayyappa devotees died  bolero pickup vehicle overturns  Ayyappa devotees died in Andhra Pradesh  ಬೊಲೆರೋ ಪಿಕ್​ ವಾಹನ ಪಲ್ಟಿ  ನಾಲ್ವರು ಅಯ್ಯಪ್ಪ ಭಕ್ತರು ಸಾವು  ಆಂಧ್ರಪ್ರದೇಶದಲ್ಲಿ ದುರಂತ ಘಟನೆ  ಬೊಲೆರೋ ಪಿಕ್​ ವಾಹನ ಪಲ್ಟಿ  ನಾಲ್ವರು ಅಯ್ಯಪ್ಪ ಭಕ್ತರು ಮೃತ
ಬೊಲೆರೋ ಪಿಕ್​ ವಾಹನ ಪಲ್ಟಿ
author img

By

Published : Dec 5, 2022, 10:50 AM IST

ಬಾಪಟ್ಲ(ಆಂಧ್ರಪ್ರದೇಶ): ಸೋಮವಾರ ಮುಂಜಾನೆ ಜಿಲ್ಲೆಯಲ್ಲಿ ದುರಂತ ಅಪಘಾತವೊಂದು ಸಂಭವಿಸಿದೆ. ಪಿಕಪ್​​ ವಾಹನ ಪಲ್ಟಿಯಾಗಿ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿರುವುದು ತಿಳಿದು ಬಂದಿದೆ.

ಸ್ಥಳೀಯರ ಪ್ರಕಾರ, ವೇಮೂರು ತಾಲೂಕಿನ ಜಂಪಣಿಯಲ್ಲಿ ವೇಗವಾಗಿ ಬಂದ ಪಿಕಪ್​​ ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ 20ಕ್ಕೂ ಅಧಿಕ ಪ್ರಯಾಣಿಕರಲ್ಲಿ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತೆನಾಲಿ ಆಸ್ಪತ್ರೆಗೆ ರವಾನಿಸಲಾಗಿದೆ.

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಮೃತರನ್ನು ಕೃಷ್ಣಾ ಜಿಲ್ಲೆಯವರು ಎಂದು ಗುರುತಿಸಲಾಗಿದ್ದು, ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮುಂಜಾನೆ ಮಂಜಿನಿಂದಾಗಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಚಳಿಗಾಲದಲ್ಲಿ ಮುಂಜಾನೆಯ ಪ್ರಯಾಣವನ್ನು ತಪ್ಪಿಸಲು ಪೊಲೀಸರು ಜನರಿಗೆ ಸಲಹೆ ನೀಡಿದ್ದಾರೆ.

ಓದಿ: ದಂತಾ ಶಾಸಕನ ಮೇಲೆ ದಾಳಿ.. ಇದು ಬಿಜೆಪಿ ಗೂಂಡಾಗಳ ಕೃತ್ಯ ಎಂದ ರಾಹುಲ್​ ಗಾಂಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.