ETV Bharat / bharat

ಸಾಧುಗಳ ಮೇಲೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ - ಸಾಧುಗಳ ಮೇಲೆ ಹಲ್ಲೆ

ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಸಾಧುಗಳನ್ನು ಥಳಿಸಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Durg seers beating case
ಸಾಧುಗಳ ಮೇಲೆ ಹಲ್ಲೆ
author img

By

Published : Oct 7, 2022, 12:15 PM IST

ದುರ್ಗ್ (ಛತ್ತೀಸ್‌ಗಢ): ದುರ್ಗ್ ಜಿಲ್ಲೆಯಲ್ಲಿ ಸಾಧುಗಳನ್ನು ಥಳಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?: ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಚರೋಡಾ ಪ್ರದೇಶದಲ್ಲಿ ಮೂವರು ಸಾಧುಗಳು ಪ್ರಯಾಣಿಸುತ್ತಿದ್ದರು. ಈ ವೇಳೆ, ಆರೋಪಿಗಳು ಸಾಧುಗಳಿಂದ ಹಣ ಕೇಳಿದ್ದಾರೆ. ಆದರೆ, ಅವರು ಹಣ ನೀಡಲು ನಿರಾಕರಿಸಿದರು. ಆಗ ದುಷ್ಕರ್ಮಿಗಳು ಸಾಧುಗಳು ಮಕ್ಕಳ ಅಪಹರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಲು ಜನರನ್ನು ಪ್ರಚೋದಿಸಿದರು.

ನಂತರ ದೊಡ್ಡ ಗುಂಪು ಸ್ಥಳದಲ್ಲಿ ಜಮಾಯಿಸಿ ಥಳಿಸಲು ಪ್ರಾರಂಭಿಸಿದರು. ಈ ವೇಳೆ, ಓರ್ವ ಸಾಧು ತಲೆಗೆ ಗಾಯವಾಗಿದೆ. ನಂತರ ಪೊಲೀಸರು ಬಂದು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರು ಎಂದು ದುರ್ಗ್ ಪೊಲೀಸ್ ಅಧೀಕ್ಷಕ ಅಭಿಷೇಕ್ ಪಲ್ಲವ್ ತಿಳಿಸಿದರು.

ಈ ಘಟನೆ ಬುಧವಾರ ಬೆಳಗ್ಗೆ 11 ರಿಂದ ಮಧ್ಯಾಹ್ನದ ನಡುವೆ ಸಂಭವಿಸಿದೆ. ಆದರೆ, ಈ ಘಟನೆಯ ವಿಡಿಯೋ ಒಂದು ದಿನದ ನಂತರ ವೈರಲ್ ಆಗಿದೆ.

ಇದನ್ನೂ ಓದಿ: ಮಕ್ಕಳ ಕಳ್ಳರು ಎಂಬ ಶಂಕೆ: ಸಾಧುಗಳ ಮೇಲೆ ಹಲ್ಲೆ ನಡೆಸಿದ ಸಾರ್ವಜನಿಕರು.. VIDEO

ETV Bharat Logo

Copyright © 2025 Ushodaya Enterprises Pvt. Ltd., All Rights Reserved.